ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದಲ್ಲಿ ವಿಭಾಗ ಮಟ್ಟದಲ ಕ್ರೀಡಾ ಮತ್ತು ಕಲಾ ಚಟುವಟಿಕೆಗಳನ್ನು ಅ.9ರಿಂದ 11ಎವರೆಗೆ ಹಮ್ಮಿಕೊಂಡಿದೆ ಎಂದು ವಿಭಾಗೀಯ ನಿಂತ್ರಣಾಧಿಕಾರಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಆದೇಶ ಹೊರಡಿಸಿರುವ ಅವರು, ಅ.9 ಮತ್ತು 10ರಂದು ಕ್ರೀಡಾ ಚಟುವಟಿಕೆಗಳನ್ನು ಹಾಗೂ ಅ.11ರಂದು ಕಲಾ ಚಟುವಟಿಕಗಳನ್ನು ಹಮ್ಮಿಕೊಂಡಿದ್ದು ಅದರ ವಿವರವನ್ನು ನೀಡಿದ್ದಾರೆ. ಜತೆಗೆ ಕ್ರಿಡೆಯಲ್ಲಿ ಭಾಗವಹಿಸುವ ನೌಕರರನ್ನು ಕಳಿಸಿಕೊಡುವ ಬಗ್ಗೆ ಸೂಚನೆ ನೀಡಿದ್ದಾರೆ.
ಅ.9ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ * 100 ಮೀಟರ್ ಓಟ (ಪುರುಷ & ಮಹಿಳಾ) * 200 ಮೀಟರ್ ಓಟ (ಪುರುಷ & ಮಹಿಳಾ) * 400 ಮೀಟರ್ ಓಟ (ಪುರುಷ & ಮಹಿಳಾ) * 800 ಮೀಟರ್ ಓಟ (ಪುರುಷ) * ಉದ್ದ ಜಿಗಿತ (ಪುರುಷ) * 6 ಜಾವಲಿನ್ ಥ್ರೋ (ಪುರುಷ & ಮಹಿಳಾ) * ಡಿಸ್ಕಸ್ ಥ್ರೋ (ಪುರುಷ & ಮಹಿಳಾ) * ಗುಂಡು ಎಸೆತ (ಪುರುಷ & ಮಹಿಳಾ) * ಥ್ರೋ ಬಾಲ್ (ಮಹಿಳಾ ಅಧಿಕಾರಿಗಳಿಗೆ & ಅಧೀಕ್ಷಕರಿಗೆ) * 100 ಮೀಟರ್ ಓಟ (ಪುರುಷ & ಮಹಿಳಾ) * 400 ಮೀಟರ್ ವೇಗದ ನಡಿಗೆ (ಪುರುಷ & ಮಹಿಳಾ) ಆಯೋಜನೆ ಮಾಡಲಾಗಿದೆ.
ಇನ್ನು ಅ.10ರಂದು ಇದೇ ಕ್ರೀಡಾಂಗಣದಲ್ಲಿ ವಾಲಿಬಾಲ್ (ಪುರುಷ) * ಕಬಡ್ಡಿ (ಪುರುಷ) * ಬ್ಯಾಡ್ಮಿಂಟನ್ (ಪುರುಷ & ಮಹಿಳಾ) ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರ ಜತೆಗೆ ಅ.11ರಂದು ಬೆಳಗಾವಿ-3ನೇ ಘಟಕದಲ್ಲಿ * ಭಾವಗೀತೆ (ಪುರುಷ & ಮಹಿಳಾ) * ಚಲನಚಿತ್ರ ಗೀತೆ (ಪುರುಷ & ಮಹಿಳಾ) * ಜಾನಪದ ಗೀತೆ (ಪುರುಷ & ಮಹಿಳಾ) * ಸಮೂಹ ನೃತ್ಯ (ಮಹಿಳಾ) ಆಯೋಜನೆ ಮಾಡಲಾಗಿದೆ.
ಹೀಗಾಗಿ ಈ ದಿನಾಂಕಗಳಂದು ನಡೆಯುವ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಸಿಬ್ಬಂದಿಗಳ ಮಾಹಿತಿಯನ್ನು ಅ.6ರ ಒಳಗಾಗಿ ಕಾರ್ಮಿಕ ಶಾಖೆಗೆ ನೀಡಬೇಕು ಎಂದು ಡಿಸಿ ತಿಳಿಸಿದ್ದಾರೆ.

ಅಲ್ಲದೆ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ನೌಕರರು ವಿಭಾಗದಲ್ಲಿ ಪ್ರತಿ ಕ್ರೀಡೆಗೆ ಇಬ್ಬರಂತೆ ನಿಯೋಜಿಸಬೇಕು. ವಾಲಿಬಾಲ್ (6+2) ಮತ್ತು ಕಬ್ಬಡಿ (7+2) ಹಾಗೂ ಥ್ರೋ ಬಾಲ್ (9+1) ಕ್ರೀಡೆಗೆ ಘಟಕ/ ವಿ.ಕ/ ವಿ.ಕಾರ್ಯಾಗಾರದ ತಂಡವನ್ನು ರಚಿಸಿ ನಿಯೋಜಿಸಬೇಕು.
ಈ ಎಲ್ಲ ಕ್ರೀಡಾ ಪಟುಗಳು ಅಂದಂದು ಬೆಳಗ್ಗೆ 9:30ರ ಸಮಯಕ್ಕೆ ಸರಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗುವಂತೆ ಬಿಡುಗಡೆಗೊಳಿಸಬೇಕು ಹಾಗೂ ಬಿಡುಗಡೆಗೊಂಡಿರುವ ಬಗ್ಗೆ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ಎನ್.ಎಲ್.ವಜ್ರಮಟ್ಟಿ ಅವರಲ್ಲಿ ವರದಿ ಮಾಡಿಕೊಳ್ಳಬೇಕು.
ಇನ್ನು ಪ್ರತಿ ಕ್ರೀಡೆಯಲ್ಲಿ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಕ್ರೀಡೆಗಳಲ್ಲಿ ಎಲ್ಲ ಕ್ರೀಡಾ ಪಟುಗಳು ಸಂಸ್ಥೆಯ ನಿಯಮಾವಳಿಗಳಂತೆ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಅ. 11ರಂದು ನಡೆಯುವ ಕಲಾ ಚಟುವಟಿಗಳಲ್ಲಿ ಭಾಗವಹಿಸಿದ ಕಲಾವಿದರು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಾಜರಾಗುವಂತೆ ಸೂಚಿಸಿ ನಿಯೋಜಿಸಬೇಕು. ವಿಭಾಗ ಮಟ್ಟದಲ್ಲಿ ನಡೆಯುವ ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ ಆಯ್ಕೆಯಾದ ಕ್ರೀಡಾ ಪಟುಗಳನ್ನು ಅಂತರ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈ ಕುರಿತು ಎಲ್ಲ ಶಾಖಾ ಮುಖ್ಯಸ್ಥರು, ಘಟಕ ವ್ಯವಸ್ಥಾಪರು, ವಿಭಾಗೀಯ ಕಾರ್ಯಾಧೀಕ್ಷಕರು ಗಮನ ಹರಿಸಿ ನೌಕರರನ್ನು ಹಾಗೂ ತಂಡವನ್ನು ರಚಿಸಿ ಕಳುಹಿಸುವ ಮೂಲಕ ಈ ಕ್ರೀಡಾ ಮತ್ತು ಕಲಾ ಚಟುವಟಿಕೆಯ ಕಾರ್ಯಕ್ರಮಗಳನ್ನು ಯಶಸ್ವೀಗೊಳಿಸಲು ತಿಳಿಸಿದ್ದಾರೆ.
Related
