
ನಿರ್ವಾಹಕ ಮಹದೇವ ಹುಕ್ಕೇರಿ.
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಸುಳ್ಳು ಸುಳ್ಳಾಗಿ ದಾಖಲಿಸಿದ್ದ ಪೋಕ್ಸೋ ಪ್ರಕರಣದ ವಿರುದ್ಧ ರಾಜ್ಯದಲ್ಲಿ ವಿವಿಧ ಸಂಘಟನೆಗಳ ಆಕ್ರೋಶ ಹೆಚ್ಚಾದ್ದರಿಂದ ಯುವತಿಯ ಅಮ್ಮ ಕೊಟ್ಟ ದೂರನ್ನು ವಾಪಸ್ ಪಡೆದು ಕೊಂಡಿದ್ದಾಳೆ.
ಕಂಡಕ್ಟರ್ ಮಹದೇವ ಎಂ.ಹುಕ್ಕೇರಿ ಅವರ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್ಸನ್ನು ಆಕೆಯ ತಾಯಿ ವಾಪಸ್ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಕೆವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮರಾಠಿಯಲ್ಲಿ ಮಾತನಾಡು ಎಂದು ನಿರ್ವಾಹಕರಿಗೆ ಅವಾಜ್ ಹಾಕಿ ಜಗಳ ಮಾಡಿದ್ದು ಅಲ್ಲದೆ ತಮ್ಮ ಗ್ರಾಮದ ನೂರಾರು ಮಂದಿಯಲ್ಲಿ ಸೇರಿಸಿ ಹಲ್ಲೆ ಮಾಡಿದ್ದಳು.
ಇನ್ನು ಈ ಟಿಕೆಟ್ ಕೊಡುವ ವೇಳೆ ಕಂಡಕ್ಟರ್ ಮಹದೇವಪ್ಪ ತನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೇ ನೀನೆ ಮರಾಠಿ ಮಾತನಾಡು ಎಂದಿದ್ದಳು. ಈ ವೇಳೆ ಬಸ್ನಲ್ಲಿದ್ದ ಮರಾಠಿ ಪುಂಡರು ಕೂಡ ಕಂಡಕ್ಟರ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿ, ಮರಾಠಿ ಮಾತನಾಡುವಂತೆ ಒತ್ತಾಯಿಸಿದ್ದರು.
ಇತ್ತ ಹಲ್ಲೆಗೊಳಗಾದ ಕಂಡಕ್ಟರ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮರಾಠಿ ದುರುಳರು ನಿರ್ವಾಹಕನ ವಿರುದ್ಧ ಪಿತೂರಿ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಗೊತ್ತಿದ್ದು ಗೊತ್ತಿದ್ದು ಪೊಲೀಸರು ಕೂಡ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್ನು ತಿಳಿದು ಕೂಡ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಸಿಪಿಐ ಗುರುರಾಜ್ ಕಲ್ಯಾಣ ಶೆಟ್ಟರ್ ಅವರ ತಲೆದಂಡವಾಗಿದೆ. ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್ಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ.
ಕಂಡಕ್ಟರ್ ಮಹದೇವ ಎಂ.ಹುಕ್ಕೇರಿ ಅವರ ಮೇಲೆ ಆಗಿರುವ ಹಲ್ಲೆ ಖಂಡಿಸಿ ಸಾರಿಗೆ ನಿಗಮಗಳ ನೌಕರರು/ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಿವೆ.