ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ಮಹತ್ವ ಆದೇಶ ಹೊರಡಿಸಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರನ ಪತ್ನಿ 45 ವರ್ಷದ ಲಕ್ಕವ್ವಗೇ ಅನುಕಂಪದ ಆಧಾರದ ಮೇರೆಗೆ ಹುದ್ದೆ ನೀಡಬೇಕು ಎಂದು ಕೋರ್ಟ್ ಆದೇಶಿಸಿರುವುದು.
ಗದಗ ಜಿಲ್ಲೆಯ ಶಿರಾಹಟ್ಟಿ ತಾಲೂಕಿನ ಲಕ್ಕವ್ವ ಎಂಬುವರ ಪತಿ ಸಂಸ್ಥೆಯ ನೌಕರ ರಾಮಣ್ಣ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಅನುಕಂಪದ ಹುದ್ದೆ ಕೋರಿ ಲಕ್ಕವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಕ್ಕಳೂ ಇಲ್ಲದ 45 ವರ್ಷ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ ಎಂದು NWKRTCಗೆ ನಿರ್ದೇಶಿಸಿದೆ.
ಮಕ್ಕಳಿಲ್ಲದ ಮಹಿಳೆಯಾದ್ದರಿಂದ ಮಾನವೀಯತೆಯಿಂದ ಪರಿಗಣಿಸಿ. ವಯೋಮಿತಿಯ ಕಠಿಣ ಹೇರಿಕೆಯಿಂದ ಅನ್ಯಾಯವಾಗಬಾರದು. ಇಂತಹ ಪ್ರಕರಣಗಳಲ್ಲಿ ಮಾನವೀಯತೆಯ ನೀತಿ ರೂಪಿಸಲು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇದ್ದ ಹೈಕೋರ್ಟ್ ಪೀಠ ತೀರ್ಪು ನೀಡಿದೆ.
ರಾಮಣ್ಣ NWKRTC ಉದ್ಯೋಗಿಯಾಗಿದ್ದರು. ಅವರು 2021ರಲ್ಲಿ ಸಾವನ್ನಪ್ಪಿದ್ದರು. ಆದರೆ ರಾಮಣ್ಣ ಹಾಗೂ ಲಕ್ಕವ್ವ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಅನುಕಂಪದ ಹುದ್ದೆಯನ್ನು ತನಗೆ ನೀಡಬೇಕೆಂದು ಪತ್ನಿ ಲಕ್ಕವ್ವ ಸಂಸ್ಥೆಗೆ ಮನವಿ ಮಾಡಿದ್ದರು.
ಆದರೆ ವಯೋಮಿತಿ ಆಧಾರದ ಮೇಲೆ ಅನುಕಂಪದ ಹುದ್ದೆ ನೀಡಲು ಬರುವುದಿಲ್ಲ ಎಂದು NWKRTC ನಿಗಮದ ಅಧಿಕಾರಿಗಳು ಹೇಳಿ ಅವರನ್ನು ಕಳಿಸಿದ್ದರು. ಅದನ್ನು ಪ್ರಶ್ನಿಸಿ ಲಕ್ಕವ್ವ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಇದೀಗ ಮಾನವೀಯತೆ ಆಧಾರದ ಮೇಲೆ ಲಕ್ಕವ್ವಳಿಗೆ ಅನುಕಂಪದ ಹುದ್ದೆ ನೀಡುವಂತೆ ತೀರ್ಪು ನೀಡಿದೆ.

Related
