CrimeNEWSನಮ್ಮರಾಜ್ಯ

NWKRTC: ಮಳೆ ನೀರು ಮುಖಕ್ಕೆ ರಾಚುತ್ತಿದ್ದರೂ ಬೀಡದೆ ಬಸ್‌ ಓಡಿಸಿದ ಅಮಾಯಕ ಚಾಲಕ, ನಿರ್ವಾಹಕರನ್ನೇ ಅಮಾನತು ಮಾಡಿ ತಮ್ಮ ತಪ್ಪು ಮುಚ್ಚಿಕೊಂಡ ಡಿಸಿ ಚೆನ್ನಪ್ಪಗೌಡರ್‌ !!

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಬಸ್‌ನ ಮುಂದಿನ ಗಾಜಿನಿಂದ ಚಾಲಕನ ಮುಖಕ್ಕೆ ಮಳೆ ನೀರು ರಪ್ಪಂತ ಹೊಡೆಯುತ್ತಿದ್ದರು ಕೊಡೆ ಹಿಡಿಯದೆ ಬಸ್‌ ಚಾಲನೆ ಮಾಡಬೇಕಿತ್ತ ಚಾಲಕರು? ಇಲ್ಲ ಬಸ್‌ ಫಿಟ್‌ನೆಸ್‌ ಆಗಿತ್ತು. ಚಾಲಕ ಮತ್ತು ನಿರ್ವಾಹಕರು ಬೇಕಂತಲೇ ಈ ರೀತಿ ವಿಡಿಯೋ ಮಾಡಿ ಸಂಸ್ಥೆಯ ಮಾನವನ್ನು ಹರಾಜ್‌ ಹಾಕಿದ್ದಾರೆ ಅಂತಹೇಳಿ ಅಮಾನತು ಮಾಡಿದ್ದೀರಲ್ಲ ನಿಮಗೆ ನಿಮ್ಮ ತಪ್ಪು ಕಾಣಿಸುತ್ತಿಲ್ಲವೇ ಡಿಸಿ ಸಾಹೇಬರೆ?

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗ ಧಾರವಾಡ ಘಟಕದ ಬಸ್‌ನ ಮುಂದಿನ ಗಾಜಿನಿಂದ ಮಳೆನೀರು ಮುಖಕ್ಕೆ ಹೊಡೆಯುತ್ತಿತ್ತು. ಹೀಗಾಗಿ ಬಸ್‌ ಚಾಲನೆ ಮಾಡುವುದಕ್ಕೆ ಚಾಲಕರಿಗೆ ಕಷ್ಟವಾಗಿದೆ. ಆದ್ದರಿಂದ ಅವರು ಛತ್ರಿ ಹಿಡಿದುಕೊಂಡು ಬಸ್‌ ಓಡಿಸಿದ್ದಾರೆ. ಅದಕ್ಕೆ ಯಾರನ್ನು ಅಮಾನತು ಮಾಡಬೇಕು ಎಂಬುದನ್ನು ನಿಗಮದ ಉನ್ನತ ಅಧಿಕಾರಿಗಳು ನಿರ್ಧರಿಸಬೇಕಿತ್ತು. ಆದರೆ ಇಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಿ ದರ್ಪ ಮೆರೆದಿದ್ದಾರೆ ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಪ್ಪಗೌಡರ್‌.

ಇಲ್ಲಿ ಬಸ್‌ನ ಮುಂದಿನ ಗ್ಲಾಸ್‌ ಸರಿಮಾಡದೆ ಬಸ್ಸನ್ನು ಮಾರ್ಗಚರಣೆಗೆ ಬಿಟ್ಟಿದ್ದು ಅಲ್ಲದೆ ಇಲ್ಲಿ ಚಾಲಕ, ನಿರ್ವಾಹಕರನ್ನು ಬಲಿಪಶುವಾಗಿ ಮಾಡಿರುವುದು ಎಷ್ಟು ಸರಿ ಡಿಸಿ ಸಾಹೇಬರೆ?. ನಿಮಗೆ ಕಣ್ಣು ಕಾಣುತ್ತಿಲ್ಲವೇ? ಪಾಪ ಚಾಲಕ ಛತ್ರಿಯನ್ನು ಒಂದು ಕೈಯಿಂದ ಮತ್ತೊಂದು ಕೈಯಿಗೆ ಬದಲಾಯಿಸಿಕೊಂಡು ಮತ್ತು ಈ ವೇಳೆ ಮುಖಕ್ಕೆ ಮಳೆನೀರು ಬೀಳುತ್ತಿರುವುದು ತಮ್ಮ ಭುಜದ ಮೇಲಿನ ವಸ್ತ್ರದಿಂದ ವರಿಸಿಕೊಂಡು ಚಾಲನೆ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಅದು ನಿಮ್ಮ ಕಣ್ಣಿಗೆ ಮಾತ್ರ ಕಾಣಿಸುತ್ತಿಲ್ಲ.

ಆದರೆ, ನೀವು ಇಲ್ಲ ಇದು ಚಾಲಕ ಮತ್ತು ನಿರ್ವಾಹಕರು ಬೇಕಂತಲೇ ಮಾಡಿರುವುದು ಎಂದು ಎಷ್ಟು ಸಲೀಸಾಗಿ ಮಾಧ್ಯಮಗಳಿಗೆ ಹೇಳಿ ದಾರಿ ತಪ್ಪಿಸಿದ್ದರ ಎಂಬುವುದು ವರದಿಗಳಿಂದ ತಿಳಿಯುತ್ತಿದೆ. ಅಷ್ಟರ ಮಟ್ಟಿಗೆ ಹೇಳಿದ್ದೀರ ನೋಡಿ. ಇನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎಂ.ಪ್ರಿಯಾಂಗಾ ಅವರು ಕೂಡ ಇದು ಚಾಲಕ ಮತ್ತು ನಿರ್ವಾಹಕರು ಬೇಕು ಅಂತಲೆ ಮಾಡಿರುವುದು ಆ ರೀತಿ ಬಸ್‌ ಸೋರುತ್ತಿರಲಿಲ್ಲ ಎಂದು ಪತ್ರಿಕೆಯೊಂದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮೇಡಂ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಪ್ಪಗೌಡರ್‌ ತಮ್ಮ ತಮ್ಮನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ ತಾನು ಎಲ್ಲಿ ಅಮಾನತಾಗಿ ಬಿಡುತ್ತೇನೊ ಎಂಬ ಭಯದಲ್ಲಿ ಅಮಾಯಕ ನೌಕರರನ್ನು ಅಮಾನತು ಮಾಡಿದ್ದಾರೆ. ಆದರೆ ನೀವು ಕೂಡ ಆತನಂತೆಯೇ ನಡೆದುಕೊಂಡರೆ ಸಾಮಾನ್ಯ ನೌಕರರ ಗತಿ ಏನು ಮೇಡಂ?

ನೀವು ಕೂಡ ಮೊದಲು ವಿಡಿಯೋ ನೋಡಿ ಅಲ್ಲಿ ಚಾಲಕನ ಮುಖಕ್ಕೆ ಮಳೆನೀರು ಬೀಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅದನ್ನು ಪರಿಶೀಲನೆ ಮಾಡಿ, ಅಲ್ಲಿ ಚಾಲಕ ಎಷ್ಟು ಶ್ರಮಪಟ್ಟು ಬಸ್‌ ಚಾಲನೆ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಅದನ್ನು ಬಿಟ್ಟು ನೀವು ಕೂಡ ಈ ರೀತಿ ಹಾರಿಕೆ ಉತ್ತರವನ್ನು ಬೇಜವಾಬ್ದಾರಿಯಿಂದ ಮಾಧ್ಯಗಳಿಗೆ ನೀಡುವುದು ನಿಮ್ಮ ಪದವಿಗೆ ಮತ್ತು ನಿಮಗೆ ಗೌರವತರುವಂತದ್ದೇ?

ಇನ್ನು ಡಿಸಿ ಸಾಹೇಬರು ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮಾಡಿರುವ ಆರೋಪ ನೋಡಿ ಮೇ 23ರಂದು ವಾಹನ ಸಂಖ್ಯೆ ಕೆ.ಎ.31 ಎಫ್‌ 1336 ವಾಹನವನ್ನು ಅನುಸೂಚಿ ಸಂಖ್ಯೆ 40ರ ಕಾರ್ಯಾಚರಣೆ ವೇಳೆ ಉಪ್ಪಿನಬೆಟಗೇರಿಯಿಂದ ಧಾರವಾಡಕ್ಕೆ ಬರುವಾಗ ರೂಫ್‌ ಲೀಕೇಜ್‌ ಇಲ್ಲದೆ ಇದ್ದರೂ ಸಹ ಒಂದು ಕೈಯಿಂದ ಕೊಡೆ ಹಿಡಿದು ಇನ್ನೊಂದು ಕೈಯಿಂದ ಸ್ಟೇರಿಂಗ್ ಹಿಡಿದು ವಾಹನ ಚಾಲನೆ ಮಾಡಿ ಕರ್ತವ್ಯ ನ್ಯೂನ್ಯತೆ ಎಸಗಿರುವಿರಲ್ಲದೇ ನಿಮ್ಮ ಜೊತೆಗಿರುವ ನಿರ್ವಾಹಕಿಯು ಈ ದೃಶ್ಯವನ್ನು ವಿಡಿಯೋ ಮಾಡಲು ಸಹಕರಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಈ ವಿಷಯವು ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾಗಿ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಲು ಕಾರಣರಾಗಿದ್ದೀರಿ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ನಡತೆ ಮತ್ತು ಶಿಸ್ತು) ನಿಬಂಧನೆಗಳು 1971 ರ 18 ನೆಯ ನಿಬಂಧನೆಯ ಪ್ರಕಾರ ಶಿಕ್ಷಾರ್ಹವಾದಂತಹ ದುರ್ನಡತೆಗೆ ಒಳಗಾಗಿರುವರೆಂದು ಆಪಾದಿಸಲ್ಪಟ್ಟಿರುವರೆಂದು ಮೇಲ್ನೋಟಕ್ಕೆ ರುಜುವಾತಾಗುವಂತಹ ಮೇಲಿನ ಉಲ್ಲೇಖದಲ್ಲಿ ವರದಿಯಾದಂತೆ ಮತ್ತು ಸದರಿ ನೌಕರರ ಕಾರ್ಯ ನಿಮಿತ್ತ ಹಾಜರಾತಿಯು ಅಪರಾಧದ ತನಿಖೆಗೆ ಪ್ರತಿಕೂಲವಾಗಬಹುದೆಂದು ಮನವರಿಕೆಯಾಗಿದ್ದರಿಂದ ಆಪಾದಿಸಲ್ಪಟ್ಟ ಆರೋಪದ ವಿಚಾರಣೆಗಾಗಿ ಹಣಮಂತ ಕಿಲ್ಲೇದಾರ ಹುದ್ದೆ, ಚಾಲಕ ಸಂಖ್ಯೆ 1203 ಧಾರವಾಡ ಘಟಕ ಅವರನ್ನು ಅಮಾನತಿನಲ್ಲಿಡಬೇಕೆಂದು ಅಭಿಪ್ರಾಯಪಟ್ಟು ನಿಬಂಧನೆ 21 ರ ಅನ್ವಯ ಅಮಾನತು ಮಾಡಿ ಆದೇಶಿಸಿದ್ದೇನೆ ಎಂದು ಅಮಾನತು ಮಾಡಿ ಆದೇಶಿಸಿದ್ದಾರೆ.

ಅಮಾಯಕ ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಿರುವ ಡಿಸಿ ಸಹೇಬರು ತಪ್ಪು ಮಾಡಿದವರ ರಕ್ಷಣೆಗೆ ನಿಂತರೆ ಯಾರ ಬಳಿ ನ್ಯಾಯ ಕೇಳಬೇಕು. ಇನ್ನು ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಎಂಡಿ ಅವರು ಸತ್ಯಾಸತ್ಯತೆ ಅರಿತು ತಪ್ಪು ಮಾಡಿದವರನ್ನು ಶಿಕ್ಷೆಗೊಳಪಡಿಸಿ ಅಮಾಯಕ ನೌಕರರಿಗೆ ನ್ಯಾಯದೊರಕಿಸಿಕೊಡುವರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೊಮ್ಮೆ ಮಳೆ ನೀರು ಮುಖಕ್ಕೆ ಹೊಡೆಯುತ್ತಿರುವುದನ್ನು ಪರಿಶೀಲನೆ ಮಾಡಬೇಕು ಎಂಬುದಕ್ಕೋಸ್ಕರ ವಿಡಿಯೋವನ್ನು ಹಾಕುತ್ತಿದ್ದು, ಇದನ್ನು ನೋಡಿ ಸತ್ಯ ತಿಳಿದು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ನ್ಯಾಯಪರ ನಿಲ್ಲಬೇಕು ಎಂಬುವುದು ನಮ್ಮ ಒತ್ತಾಯ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ