LatestNEWSನಮ್ಮರಾಜ್ಯ

NWKRTC: ಮಳೆಗೆ ಸೋರುತಿಹುದು ಬಸ್‌ ಮಾಳಿಗೆ ಅಧಿಕಾರಿಗಳ ಅಜ್ಞಾನದಿಂದ ಸೋರುತಿಹುದು..!?

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಮಾಳಿಗೆ ಮಳೆಗೆ ಸೋರುತಿದ್ದು ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.

ಸಂಸ್ಥೆಯ ಹಾವೇರಿ ವಿಭಾಗದ ಹಾವೇರಿ ಘಟಕದ ಬಸ್ಛಾವಣಿ ತೂತು ಬಿದ್ದಿದ್ದು ಮಳೆಗೆ ಅದು ಸೂರುತ್ತಿದೆ. ಆ ಸೋರುತ್ತಿರುವ ಬಸ್ಸನ್ನೇ ಚಾಲಕ ಕೊಡೆ ಹಿಡಿದುಕೊಂಡು ಮಳೆಯೊಳಗೆ ಓಡಿಸುತ್ತಿರುವುದನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

ಇದು ಘಟಕದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳ ನಡೆಯನ್ನು ತೋರಿಸುವಂತಿದೆ. ಬಸ್ಗಳನ್ನು ರಿಪೇರಿ ಮಾಡದೆ ಬಸ್ಗಳ ಫಿಟ್ನೆಸ್ನೋಡದೆ ಚಾಲಕರ ಕೈಗೆ ಬಸ್ಕೊಟ್ಟು ಕಳುಹಿಸುವ ಚಾಳಿಯಿಂದ ಈ ರೀತಿಯ ಅವಾಂತರಗಳು ನಡೆಯುತ್ತಿವೆ.

ಇನ್ನು ಚಾಲಕರು ಇಂಥ ಬಸ್ಬೇಡ ಎಂದು ಹೇಳಿದರೆ ಅವರಿಗೆ ಮೆಮೋ ಕೊಡುವುದು ಇಲ್ಲ ಬೇರೆ ಬಸ್ಕೊಡದೆ ಡಿಪೋನಲ್ಲೇ ಕೂರಿಸಿ ಬಳಿಕ ಗೈರು ಹಾಜರಿ ಮಾಡಿ ವೇತನ ಬರದಂತೆ ಮಾಡುವುದು.

ಇದನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ಎದುರು ಮಾತನಾಡಿದ ಎಂದು ಹೇಳಿ ಮೆಮೋ ಕೊಟ್ಟು ಬಳಿಕ ಅಮಾನತು ಮಾಡುವುದು. ಇಲ್ಲಿ ಚಾಲಕರು ಬಸ್ಸರಿಯಿಲ್ಲ ಎಂದು ಹೇಳುವುದಕ್ಕೂ ಬಿಡದೆ ಈ ರೀತಿ ಅಧಿಕಾರಿಗಳು ದಬ್ಬಾಳಿಕ ಮಾಡುತ್ತಿರುವುದರಿಂದ ಇಂದು ಕೊಡೆ ಹಿಡಿದುಕೊಂಡು ಬಸ್ಓಡಿಸುವ ಸ್ಥಿತಿ ಚಾಲಕರಿಗೆ ಬಂದಿದೆ.

ಇನ್ನಾದರೂ ಈ ಬಗ್ಗೆ ಸಾರಿಗೆ ಸಚಿವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರು  ಗಮನ ಹರಿಸಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಯಾಣಿಕರೆ ಒತ್ತಾಯಿಸಿದ್ದಾರೆ.

Advertisement
Deva
the authorDeva

Leave a Reply

error: Content is protected !!