NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: UPI ಮೂಲಕ ಹೆಚ್ಚು ಟಿಕೆಟ್ ವಿತರಿಸಿದ ನಿರ್ವಾಹಕರ ಅಭಿನಂದಿಸಿದ ಎಂಡಿ ಪ್ರಿಯಾಂಗಾ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರಿಗೆ UPI ಮೂಲಕ ಹೆಚ್ಚು ಟಿಕೆಟ್ ವಿತರಣೆ ಮಾಡಿದ ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಬುಧರವಾರ ಹುಬ್ಬಳಿಯಲ್ಲಿರುವ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ UPI ಮೂಲಕ ಹೆಚ್ಚು ಹೆಚ್ಚು ಟಿಕೆಟ್‌ ವಿತರಣೆ ಮಾಡಿದವರಿಗೆ ಪ್ರಶಂಸನಾ ಪತ್ರ ನೀಡಿ ಸಿಬ್ಬಂದಿಯ ಕರ್ತವ್ಯವನ್ನು ಎಂಡಿ ಪ್ರಶಂಸಿಸಿದರು.

ಈ UPI ತ್ರೈಮಾಸಿಕ ಅಭಿಯಾನವನ್ನು Phonepe ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಜುಲೈ-2025ರ ಮಾಹೆಯಲ್ಲಿ ಅತೀ ಹೆಚ್ಚು UPI ವಹಿವಾಟು ಮಾಡಿದ ನಿರ್ವಾಹಕರು, ಘಟಕ & ವಿಭಾಗಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶ್ಲಾಘಿಸಿದರು.

Megha
the authorMegha

Leave a Reply

error: Content is protected !!