Wednesday, October 30, 2024
NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: 2018-19ರಿಂದ 2023-24ರವರೆಗಿನ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಆದೇಶ- ನಿವೃತ್ತರ ಮೊಗದಲ್ಲಿ ಮಂದಹಾಸ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ 2018-19ರಿಂದ 2023-24ರವರೆಗೆ ಬಾಕಿ ಇರುವ ತುಟ್ಟಿಭತ್ಯೆ ಹಿಂಬಾಕಿಯನ್ನು ಪಾವತಿಸಬೇಕು ಎಂದು ನಿಗಮದ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಸಂಬಂಧ 01.07.2023 ರಿಂದ ಅನ್ವಯವಾಗುವಂತೆ ನಿಗಮದ ಅಧಿಕಾರಿಗಳು/ ನೌಕರರಿಗೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.70ಕ್ಕೆ ಹೆಚ್ಚಿಸಿ ಅನುಷ್ಠಾನುಗೊಳಿಸುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಅದರಂತೆ ನವೆಂಬರ್-2023 ರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾರಿಗೊಳಿಸಲಾಗಿದೆ.

ಇನ್ನು ಜುಲೈ-2023 ರಿಂದ ಅಕ್ಟೋಬರ್-2023ರ ಅವಧಿಯ ತುಟ್ಟಭತ್ಯೆ ಹಿಂಬಾಕಿ ಮೊತ್ತ ಪಾವತಿಸುವುದು ಬಾಕಿ ಉಳಿದಿದೆ. ಈ ಸಂಬಂಧ, ನಿವೃತ್ತಿ/ ಮರಣ/ ವಜಾ/ ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ/ಸಿಬ್ಬಂದಿಗಳು ಪದೇಪದೆ ವಿಭಾಗೀಯ ಕಚೇರಿ/ ಕೇಂದ್ರ ಕಚೇರಿಗೆ ಭೇಟಿ ನೀಡಿ ಬಾಕಿ ಉಳಿದಿರುವ 2018-19 ರಿಂದ 2023-24ರವರೆಗಿನ ಕ್ಷೇತ್ರಾವಧಿಯ ರಜೆ ನಗದೀಕರಣ, ಹಿಂಬಾಕಿ ತುಟ್ಟಿ ಭತ್ಯೆ, ಮೇ-2023 ರಿಂದ ಉಪದಾನ ಮತ್ತು ನಿವೃತ್ತಿ ರಜೆ ನಗದೀಕರಣ ಪಾವತಿಸಲು ಕೋರಿದ್ದರು.

ಈ ಹಿನ್ನೆಲೆಯಲ್ಲಿ ನಿವೃತ್ತಿ / ಮರಣ/ಸ್ವಯಂ ನಿವೃತ್ತ / ವಜಾಗೊಂಡ ನೌಕರರ ಕುಂದು ಕೊರತೆಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸದುದ್ದೇಶದಿಂದ 01.07.2023 ರಿಂದ 31.10.2023ವರೆಗಿನ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ನಿವೃತ್ತ/ ಮರಣ/ವಜಾ/ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ/ ಸಿಬ್ಬಂದಿಗಳಿಗೆ ಪಾವತಿಸಲು ಸೂಕ್ತಾಧಿಕಾರಿಗಳು ಆದೇಶಿಸ ನೀಡಿದ್ದಾರೆ.

ಯಾರಿಗೆ ಪಾವತಿಸಬೇಕು: ಫೆಬ್ರವರಿ-2024 ರಿಂದ ಮುಂದಕ್ಕೆ ಸೇವಾವಿಮುಕ್ತಿ ಹೊಂದುವವವರಿಗೆ ಜಾರಿಯಾಗಿರುವ ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ನಿವೃತ್ತಿ ಮಾಹೆಯ ವೇತನದಲ್ಲೇ ಸೇರಿಸಿ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜುಲೈ-2023 ರಿಂದ ಜನವರಿ-2024ರಲ್ಲಿ ಸೇವಾವಿಮುಕ್ತಿ ಹೊಂದಿದವರಿಗೆ ಜಾರಿಯಾಗಿರುವ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಮಾರ್ಚ್‌ನಲ್ಲಿ ಧನಾದೇಶದ ರೂಪದಲ್ಲಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ಈ ನಿವೃತ್ತ ಹೊಂದಿದ / ಹೊಂದಲಿರುವ ಅಧಿಕಾರಿ / ಸಿಬ್ಬಂದಿಗಳ ಉಪದಾನ, ನಿವೃತ್ತ ಗಳಿಕೆ ರಜೆ ನಗದೀರಣದ ಮತ್ತು ಕ್ಷೇತ್ರಾವಧಿಯ ಗಳಿಕೆ ರಜೆ ನಗದೀಕರಣ ಲೆಕ್ಕಾಚಾರ ಮಾಡುವಾಗ ಆ ಅವಧಿಗೆ ಸಂಬಂಧಿಸಿರುವ ತುಟ್ಟಿ ಭತ್ಯೆಯನ್ನು ಪರಿಗಣಿಸಿ ಲೆಕ್ಕಾಚಾರ ಮಾಡಿ ಬಿಲ್ ತಯಾರಿಸಬೇಖು ಹಾಗೂ ಇವುಗಳ ಪಾವತಿಗೆ ಸಂಬಂಧಪಟ್ಟಂತೆ ಕೇಂದ್ರ ಕಚೇರಿಯಿಂದ ಮುಂದಿನ ದಿನಗಳಲ್ಲಿ ನಿರ್ದೇಶನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಈ ಆದೇಶ ಬರಿ ನಿವೃತ್ತ ನೌಕರರಿಗೆ ಮಾತ್ರ ಮಾಡಲಾಗಿದ್ದು, ಹಾಲಿ ಸೇವೆಯಲ್ಲಿರುವ ನೌಕರರಿಗೆ ಪಾವತಿಸುವ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಇದು ಹಾಲಿ ಕರ್ತವ್ಯ ನಿರತ ನೌಕರರಿಗೆ ಬೇಸರದ ಸಂಗತಿಯಾಗಿದೆ.

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ