NEWSನಮ್ಮಜಿಲ್ಲೆ

NWKRTC: ಸಹಾಯಕ ಉಗ್ರಾಣಾಧಿಕಾರಿಗಳಾಗಿ ಪದೋನ್ನತಿ ಪಡೆದ ಮೂವರು ಉಗ್ರಾಣ ಅಧೀಕ್ಷಕರು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉಗ್ರಾಣ ಅಧೀಕ್ಷಕ (ದರ್ಜೆ-3)ರಾಗಿ ಕರ್ತವ್ಯ ನಿರ್ವಹಿಸುತ್ತಿರುವ 3 ಮಂದಿಯನ್ನು ಸಹಾಯಕ ಉಗ್ರಾಣಾಧಿಕಾರಿಗಳ (ದರ್ಜೆ-2) ಹುದ್ದೆಗೆ ಬಡ್ತಿ ನೀಡಿ ಸಂಸ್ಥೆಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಇದೇ ಜೂನ್‌ 24ರಂದು ನಡೆದ ಇಲಾಖಾ ಮುಂಬಡ್ತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಅದರಂತೆ ಸೂಕ್ತಾಧಿಕಾರಿಗಳ ಆದೇಶ ಮೇರೆಗೆ ಜೂನ್‌ 25ರಂದು ಉಗ್ರಾಣ ಅಧೀಕ್ಷಕ (ದರ್ಜೆ-3)ರಾಗಿ ಕರ್ತವ್ಯ ನಿರ್ವಹಿಸುತ್ತಿರುವ 3 ಮಂದಿಯನ್ನು ಸಹಾಯಕ ಉಗ್ರಾಣಾಧಿಕಾರಿಗಳ (ದರ್ಜೆ-2) ಹುದ್ದೆಗೆ ಬಡ್ತಿ ಎಂದು ತಿಳಿಸಿದ್ದಾರೆ.

ಬಡ್ತಿಯೊಂದಿಗೆ ವರ್ಗಾವಣೆಗೊಂಡವರ ವಿವರ: ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ಗದಿಗೆಪ್ಪ ರು ಕವಳಿ ಅವರನ್ನು ಕೇಂದ್ರ ಕಚೇರಿಯಲ್ಲೇ ಸಹಾಯಕ ಉಗ್ರಾಣಾಧಿಕಾರಿಯಾಗಿ ಮುಂಬಡ್ತಿಯೊಂದಿಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಚಿಕ್ಕೋಡಿ ವಿಭಾಗದಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ಶಿವಲಿಂಗಮ್ಮ ನೀಲಪ್ಪನವರ ಅವರನ್ನು ಚಿಕ್ಕೋಡಿ ವಿಭಾಗದಲ್ಲೇ ಸಹಾಯಕ ಉಗ್ರಾಣಾಧಿಕಾರಿಯಾಗಿ ಮತ್ತು ಉತ್ತರ ಕನ್ನಡ ವಿಭಾಗದಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ರವೀಂದ್ರ ಭಟ್ ಅವರನ್ನು ಸಹಾಯಕ ಉಗ್ರಾಣಾಧಿಕಾರಿಯಾಗಿ ಬಡ್ತಿನೀಡಿ ಹುಬ್ಬಳ್ಳಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಎಲ್ಲ ಸಿಬ್ಬಂದಿಯವರ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಸಿಬ್ಬಂದಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಮುಂದುವರಿದಂತೆ, ಈ ಬಡ್ತಿಯು ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.

ಈ ಸಿಬ್ಬಂದಿಯವರು ಪದೋನ್ನತಿ ಮೇರೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಕೂಡಲೇ ವರದಿ ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.

ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ