NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಗೂಗಲ್‌ ಪೇ ಮಾಡಿಸಿಕೊಂಡ ಭಟ್ಕಳ ಘಟಕದ ಡಿಎಂ ರಕ್ಷಣೆಗೇ ನಿಂತರೆ ಮೇಲಧಿಕಾರಿಗಳು..!?

ತಪ್ಪು ಮಾಡಿರುವ ಸಾಕ್ಷಿ ಕಣ್ಣ ಮುಂದಿದ್ದರೂ ಇಲ್ಲ ಎಂಬಂತೆ ವರ್ತಿಸಿದರಾ ಸೆಕ್ಯೂರಿಟಿ ಆಫೀಸರ್‌ಗಳು

ವಿಜಯಪಥ ಸಮಗ್ರ ಸುದ್ದಿ
ಮಂತ್ಲಿ ಕೊಡದ ನೌಕರರಿಗೆ ಕಿರುಕುಳ ಕೊಡುವ ಭಟ್ಕಳ ಘಟಕದ ಡಿಎಂಗೆ ಕೇವಲ 500 ರೂ. ದಂಡ ಹಾಕಿ ಸುಮ್ಮನಾದ ಅಧಿಕಾರಿಗಳು

ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ಭಟ್ಕಳ ಘಟಕದ, ಘಟಕ ವ್ಯವಸ್ಥಾಪಕ ಡ್ಯೂಟಿ ಕೊಡಲು, ರೂಟ್‌ಗೆ ಕಳುಹಿಸಲು ಹಾಗೂ ರಜೆಗೆ ಹಣ ಪಡೆದ ಬಗ್ಗೆ ಸಾಕ್ಷಿ ಸಮೇತ ಸಿಕ್ಕರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದ ಮೇಲಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಸಹಾಯ ಮಾಡಿದ್ದಾರೆ ಎಂಬ ಆರೋಪವನ್ನು ಘಟಕದ ನೌಕರರು ಮಾಡಿದ್ದಾರೆ.

ಕಳೆದ 2022ರ ಅಕ್ಟೋಬರ್‌ 22 ರಂದು NWKRTC: ಮಂತ್ಲಿ ಕೊಡದ ನೌಕರರಿಗೆ ಕಿರುಕುಳ ಕೊಡುವ ಶಿರಸಿ ವಿಭಾಗ ಭಟ್ಕಳ ಘಟಕದ ಡಿಎಂ ಎಂಬ ಶೀರ್ಷಿಕೆಯಡಿ ವಿಜಯಪಥದಲ್ಲಿ ವರದಿ ಪ್ರಸಾರವಾಗಿತ್ತು.

ಈ ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಅಧೀಕ್ಷಕರು ಸಾರಿಗೆ ನೌಕರರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಬಗ್ಗೆ ನಮ್ಮ ಹೆಮ್ಮೆಯ ಆನ್‌ಲೈನ್‌ ಪತ್ರಿಕೆ ವಿಜಯಪಥದಲ್ಲಿ ಹಿಂದೊಮ್ಮೆ ವಿಸ್ತೃತವಾಗಿ ವರದಿ ಬಂದಿದೆ. ವರದಿ ಬಂದ ಬಳಿಕ ಭಟ್ಕಳ ಘಟಕಕ್ಕೆ ಸಂಸ್ಥೆಯ ಸೆಕ್ಯೂರಿಟಿ ಅಧಿಕಾರಿಗಳು ಬಂದು 8 ದಿನ ತನಿಖೆ ಮಾಡಿದ್ರು.

ಆ ವೇಳೆ ಅಧಿಕಾರಿಗಳಿಗೆ ನೌಕರರು ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಅಧೀಕ್ಷಕರ ನಡೆಯ ವಿರುದ್ಧ ಹೇಳಿಕೆಗಳನ್ನು ಮೌಖಿಕವಾಗಿ ಮತ್ತು ಲಿಖಿತವಾಗಿಯೂ ಕೊಟ್ಟಿದ್ದಾರೆ. ಆದರೂ ಡಿಎಂ ಮತ್ತು ಸಂಚಾರ ಅಧೀಕ್ಷಕರ ವಿರುದ್ಧ ಏನು ಕ್ರಮವನ್ನು ಈವರೆಗೂ ಸಂಸ್ಥೆ ತೆಗೆದು ಕೊಂಡಿಲ್ಲ. ಇದನ್ನು ನೋಡಿದರೆ ತಪ್ಪು ಮಾಡಿದವರನ್ನು ಅಧಿಕಾರಿಗಳೇ ರಕ್ಷಣೆ ಮಾಡಲು ನಿಂತಂತೆ ಕಾಣುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನು ಬಂದಪುಟ್ಟ ಹೋದಪುಟ್ಟ ಎಂಬ ರೀತಿ 8 ದಿನ ಘಟಕದಲ್ಲಿ ಇದ್ದು ತನಿಖೆ ಮಾಡಿ ಹೋದ ಅಧಿಕಾರಿ ಏನು ಮಾಡಲು ಸಾಧ್ಯವಿಲ್ಲ ಎಂದು ಘಟಕ ವ್ಯವಸ್ಥಾಪಕರು ಮತ್ತು ಸಂಚಾರಿ ಅಧೀಕ್ಷಕರು ನೌಕರರ ಮೇಲೆ ಇನ್ನಷ್ಟು ದಬ್ಬಾಳಿಕೆ ಮಾಡುತ್ತಿದ್ದಾರೆ ಮತ್ತು ಈ ಇಬ್ಬರು ಅಧಿಕಾರಿಗಳು ಎಲ್ಲ ನೌಕರರ ಬಳಿ ನೀವೆಲ್ಲ ನಮ್ಮ ಮೇಲೆ ತನಿಖೆ ಮಾಡಿಸಿದ್ರಿ. ಆದರೆ ನಮ್ಮ ಬಳಿ ನೀವು ಏನು ಕಿತ್ತು…ಳ್ಳಲು ಆಗಿಲ್ಲ. ನಮಗೆ ಕೇವಲ 500 ರೂಪಾಯಿ ದಂಡ ಮಾತ್ರ ಹಾಕಿ ಅಧಿಕಾರಿಗಳು ಬಂದದಾರಿಯಲ್ಲೇ ವಾಪಸ್‌ ಹೋಗಿದ್ದಾರೆ ಎಂದು ಅವಾಜ್‌ ಹಾಕುತ್ತಿದ್ದಾರಂತೆ.

ನಾವು ಕೇವಲ 500 ರೂಪಾಯಿ ಮಾತ್ರ ದಂಡ ಕಟ್ಟಿದ್ದೇವೆ (We paid a fine of only ₹500) ಆದರೆ, ಸಂಸ್ಥೆ ತನಿಖೆ ಮಾಡಲು 35 ಸಾವಿರ ರೂಪಾಯಿಯನ್ನು ತನಿಖಾಧಿಕಾರಿಗೆ ಸಂಬಳ ಕೊಡಲು ಖರ್ಚು ಮಾಡಿದೆ. ನೀವೆಲ್ಲ ಸೇರಿ ಸಂಸ್ಥೆಗೆ ನಷ್ಟ ಮಾಡಿದ್ದು ಬಿಟ್ಟರೆ ಇನ್ನೇನು ಮಾಡೋಕೂ ಆಗಿಲ್ಲ ಅಂತ ದಿನೇದಿನೆ ಹಂಗಿಸುತ್ತಿದ್ದಾರೆ ಎಂದು ನೌಕರರು ಖಿನ್ನತೆಗೆ ಒಳಗಾಗುತ್ತಿದ್ದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಇದಿಷ್ಟೇ ಅಲ್ಲದೆ ಪತ್ರಿಕೆಗಳಲ್ಲಿ ವರದಿ ಬಂದ ಬಳಿಕ ಕೆಲವು ನೌಕರರನ್ನು ಟಾರ್ಗೆಟ್ ಮಾಡಿ ಹಿಂಸಿಸುತ್ತಿದ್ದಾರೆ. ಲೋಕಲ್‌ನಲ್ಲಿ 8 ಬಸ್ ಓಡುವಲ್ಲಿ 3/4 ಬಸ್ ಬಿಡುತ್ತಿದ್ದಾರೆ. ಶಾಲಾ ಮಕ್ಕಳು ಕಿಕ್ಕಿರಿದು ತುಂಬಿ ಬಸ್‌ಗಳ ಎರಡು ಬಾಗಿಲಲ್ಲಿ ನೇತಾಡುತ್ತಿರುತ್ತಾರೆ. ಇನ್ನು ಚಾಲಕರು ಮತ್ತೂ ತುಂಬಿದರೆ ಬಾಗಿಲಲ್ಲಿ ಮಕ್ಕಳು ಆಯಾತಪ್ಪಿ ಬಿದ್ದು ಅನಾಹುತ ಆಗಬಹುದೇನೊ ಎಂದು ಮುಂದಾಲೋಚನೆ ಮಾಡಿ ಬಸ್‌ ತುಂಬಿರುವುದರಿಂದ ಮುಂದೆ ಹೋದರೆ ಅಂತ ಚಾಲಕರಿಗೆ ತಕ್ಷಣ ಡ್ಯೂಟಿ ಬದಲಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಇನ್ನು ಆಗುವ ಅನಾಹುತಕ್ಕೆ ಸಂಸ್ಥೆ ಅಥವಾ ಘಟಕ ವ್ಯವಸ್ಥಾಪಕರು ಜವಾಬ್ದಾರಿ ಹೊತ್ತರೆ ಚಾಲಕರು ಬೇಕಿದ್ರೆ ಟಾಪ್ ಅಲ್ಲೂ ಕೂರಿಸಿಕೊಂಡು ಹೋಗಲು ತಯಾರಿದ್ದಾರೆ. ಆದರೆ ಸಂಸ್ಥೆಯಲ್ಲಿ ಅನಾಹುತ ಸಂಭವಿಸಿದರೆ ಚಾಲಕ ಮತ್ತು ನಿರ್ವಾಹಕ ಮಾತ್ರ ಜವಾಬ್ದಾರಿ ಹೊರಬೇಕಿದೆ. ಇನ್ನು ಬಸ್‌ ಮಾರ್ಗಗಳ ಸಂಖ್ಯೆಯನ್ನು ಕಡಿಮೆ ಮಾಡಿ ನೌಕರರಿಗೆ ಹಿಂಸೆ ನೀಡುತ್ತಿರುವುದರ ವಿರುದ್ಧ ಕೇಳುವುದಕ್ಕೂ ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ಕೆಲ ಸಿಬ್ಬಂದಿಗಳು ಲಂಚಕೊಡೋದಿಲ್ಲ ಎಂದು ಹಣ ಕೊಡದವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೆ ತನಿಖೆ ಮಾಡಿದ್ದಾಗ ಫೋನ್ ಪೆನಲ್ಲಿ ಹಣ ತಕೊಂಡ ಸಾಕ್ಷಿ ಸಿಕ್ಕರೂ ನೌಕರರ ಹಿಂಸಿಸುವ ಇವರಿಗೆ ಈವರೆಗೂ ಸಂಸ್ಥೆ ಏನು ಮಾಡಿಲ್ಲ.

ಯಾರು ಹಣ ಕೊಡಲ್ವೋ ಅಂತವರು ಆನ್ಲೈನ್‌ಅಲ್ಲಿ ರಜೆ ತಕೊಂಡು ಬಳಿಕ ರಜೆ ಮುಗಿಸಿ ಕರ್ತವ್ಯಕ್ಕೆ ಬಂದರೂ ಅವರಿಗೆ ಡ್ಯೂಟಿ ಕೊಡದೆ ಗೈರುಹಾಜರಿ ಹಾಕಿ ಹಿಂದೆ ಪಡೆದ ಆನ್ಲೈನ್ ರಜೆಯನ್ನು ಗೈರು ಹಾಜರಿ ಆಗೋ ಹಾಗೆ ಮಾಡುತ್ತಿದ್ದಾರೆ. ಹೇಳುತ್ತಾ ಹೋದರೆ ತುಂಬಾ ಇದೆ. ದಯವಿಟ್ಟು  ನಮ್ಮ ಘಟಕದ ನೌಕರರಿಗೆ ಈ ಡಿಎಂ ಮತ್ತು ಸಂಚಾರ ಅಧೀಕ್ಷಕರು ಕೊಡುತ್ತಿರುವ ಕಿರುಕುಳವನ್ನು ತಪ್ಪಿಸಲು ಕೂಡಲೇ ಕ್ರಮ ತೆಗೆದುಕೊಂಡು ನ್ಯಾಯ ಕೊಡಿ ಸರ್‌ ಎಂದು ನಿಗಮದ ವ್ಯವಸ್ಥಾಪಕ ನಿದೇಶಕರಿಗೆ  ಮನವಿ ಮಾಡಿದ್ದಾರೆ.

ಸಂಸ್ಥೆಯಲ್ಲಿ ತಪ್ಪು ಮಾಡಿದರೆ ಕೇವಲ ಚಾಲಕ ನಿರ್ವಾಹಕರಿಗೆ ಮಾತ್ರ ಶಿಕ್ಷೆ ಆಗುತ್ತದೆ, ಅಧಿಕಾರಿಗಳಿಗೆ ಶಿಕ್ಷೆ ಆಗುವುದಿಲ್ಲ ಎನ್ನುವುದು ನೌಕರರಿಗೆ ಬೇಸರ ತಂದಿದೆ. ಇತ್ತೀಚಿಗೆ ಕಿರುಕುಳ ಇನ್ನಷ್ಟು ಹೆಚ್ಚಿದ್ದು ಡ್ಯೂಟಿ ರೂಟ್‌ಗಳಿಗೆ ಇರುವ ನಿಯಮವನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಈ ಅಧಿಕಾರಿಗಳು.

ಒಟ್ಟಿನಲ್ಲಿ ಘಟಕ ವ್ಯವಸ್ಥಾಪಕರನ್ನಾದರೂ ವರ್ಗಾವಣೆ ಮಾಡಿ ಇಲ್ಲ ನಮ್ಮನ್ನಾದರು ವರ್ಗಾವಣೆ ಮಾಡಿ. ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಿ ಎಂದು ಎಂಡಿ ಅವರಲ್ಲಿ ನೌಕರರು ಅಳಲು ತೋಡಿಕೊಂಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ KSRTC ಬಸ್‌-ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್...