Please assign a menu to the primary menu location under menu

NEWSನಮ್ಮಜಿಲ್ಲೆಬೆಂಗಳೂರು

ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವವರ ವಿರುದ್ದ ಕ್ರಮ ಜರುಗಿಸಲು ಮತ್ತು 5 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿರುವುದು ಆಕ್ಷೇಪಾರ್ಹ ನಡೆ. ಇದು ಜನವಿರೋಧಿ ನೀತಿಯಾಗಿದ್ದು ತಕ್ಷಣ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡಲಾಗುತ್ತಿರುವುದರಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ವಿ. ರಾಮ್‌ ಪ್ರಸಾತ್‌ ಮನೋಹರ್‌  ಕಾರಣ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು  ಒಳಚರಂಡಿ ವ್ಯವಸ್ಥೆ ಚೆನ್ನಾಗಿದ್ದರೆ ನೀರು ಸುಗಮವಾಗಿ ಹರಿಹೋಗುತ್ತದೆ. ಜಲಮಂಡಳಿಯ ಈ ನೀತಿಯು ತನ್ನ ಜವಾಬ್ದಾರಿಯನ್ನು ಬದಿಗಿಟ್ಟು ಜನಸಾಮಾನ್ಯರ ಕಿವಿಹಿಂಡುತ್ತಿರುವಂತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನಗರದ ಎಲ್ಲ ಒಳಚರಂಡಿಗಳ ಅಡೆತಡೆಗಳನ್ನು ಪರಿಶೀಲಿಸಿ, ದುರಸ್ತಿಗೊಳಿಸುವುದು ಜಲಮಂಡಳಿ ಕರ್ತವ್ಯ. ಅದನ್ನು ಬಿಟ್ಟು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ವಾಸ್ತವದಲ್ಲಿ ಒಳಚರಂಡಿಗಳಿಗೆ ಅಡೆತಡೆ ಉಂಟಾಗುತ್ತಿರುವುದೇ ಬೃಹತ್ ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆ, ಮಾಲ್‌ಗಳಿಂದ. ಜನಸಾಮಾನ್ಯರಿಗೆ ದಂಡದ ರುಚಿ ತೋರಿಸುವ ಜಲಮಂಡಳಿ ಅಧಿಕಾರಿಗಳು ದೊಡ್ಡ ದೊಡ್ಡ ಬಿಲ್ಡರ್ ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೈಗಾರಿಕೆ ಮತ್ತು ಘನತ್ಯಾಜ್ಯ ಮಿಶ್ರಿತ ನೀರು ಸೇರ್ಪಡೆಯಿಂದ ಕಾವೇರಿ ನೀರು ಕಲುಷಿತಗೊಂಡು ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಲಾಗಿದೆ. ಇದರ ವಿರುದ್ಧ ಏನು ಕ್ರಮ ಕೈಗೊಂಡಿಲ್ಲ? ಉಳ್ಳವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಜಲಮಂಡಳಿ ಅಧ್ಯಕ್ಷರಾಗಿ ಮುಂದುವರಿಯಲು ಅನರ್ಹರಾಗಿದ್ದಾರೆ. ಜಲಮಂಡಳಿಗೆ ದಕ್ಷ ಅಧಿಕಾರಿಯನ್ನು ನೇಮಕ ಮಾಡಿ. ಸಣ್ಣ ಪ್ರಮಾಣದ ಮಳೆಗೂ ಪ್ರವಾಹ ಪರಿಸ್ಥಿತಿ ಉದ್ಭವಿಸುವುದನ್ನು ತಪ್ಪಿಸಿ ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.

ಜಲಮಂಡಳಿ ವ್ಯಾಪ್ತಿಯ ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆಗೊಳ್ಳುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ, ಕೆರೆಗಳ ಶುದ್ಧೀಕರಣಗೊಳಿಸಿಲ್ಲ. ಈಗಾಗಲೇ ಕೆಲವು ಕೆರೆಗಳಲ್ಲಿ ಮೀನುಗಳು ಸೇರಿದಂತೆ ಜಲಚರಗಳು ಸಾಮೂಹಿಕವಾಗಿ ಸಾವನ್ನಪ್ಪಿರುವ ಕುರಿತು ವರದಿಗಳಾಗಿವೆ.

ಕಳೆದ 4 ತಿಂಗಳಿಂದ ಬೆಂಗಳೂರಿಗರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಕೊಡಲಾಗಿಲ್ಲ, ಟ್ಯಾಂಕರ್ ಮಾಫಿಯಾವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ. ಹೀಗೆ ಎಲ್ಲ ವಿಚಾರಗಳಲ್ಲೂ ಅಸಮರ್ಥತೆ ತೋರಿರುವ ರಾಮ್ ಪ್ರಸಾತ್ ಮನೋಹರ್ ಅವರು ದಂಡದ ರೂಪದಲ್ಲಿ ಜನಸಾಮಾನ್ಯರ ಜೇಬಿಂದ ಹಣ ಕೀಳಲು ತನ್ನ ಸಾಮರ್ಥ್ಯವನ್ನು ತೋರ್ಪಡಿಸುತ್ತಿದ್ದಾರೆ. ಇದು ಸ್ವಾಗತಾರ್ಹ ನಡೆಯಲ್ಲ ಎಂದು ಮೋಹನ್ ದಾಸರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಂಡದ ಪ್ರವೃತ್ತಿ ಕೈಬಿಟ್ಟು, ಮಳೆ ನೀರು ಕೊಯ್ಲು ಪದ್ದತಿಯು ಮೂಲಕ ಸಾರ್ವಜನಿಕರು ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಲಮಂಡಳಿ ಮಾಡಬೇಕು. ಅನವಶ್ಯಕವಾಗಿ ಬೆಂಗಳೂರು ನಿವಾಸಿಗಳ ಮೇಲೆ ದಂಡದ ರೂಪದಲ್ಲಿ ಹಗಲು ದರೋಡೆ ಅಂತಹ ಕೃತ್ಯಕ್ಕೆ ಕೈ ಹಾಕಿದಲ್ಲಿ ಬೆಂಗಳೂರಿಗರ ಮನೆಮನೆಗೂ ತೆರಳಿ ಜಾಗೃತಿ ಮೂಡಿಸಿ, ಅವರುಗಳೊಂದಿಗೆ ತೀವ್ರ ಮಟ್ಟದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪತ್ರದ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದಾರೆ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ