
ದೊಡ್ಡಬಳ್ಳಾಪುರ: ಕನ್ನಡ ಪರಂಪರೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಆಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನಸವಾಡಿಯಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 26ನೇ ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ನ್ನಡಭಾಷೆಯನ್ನು ಉಳಿಸಿ ಬೆಳೆಸಲು ಈ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
ಕನ್ನಡದದ ದಾರ್ಶನಿಕ ಕವಿಗಳಾದ ರನ್ನ, ಪಂಪ, ಹಾಗೂ ಜ್ಞಾನ ಪೀಠ ಪುರಸ್ಕೃತರಾದ ಕುವೆಂಪು, ಮಾಸ್ತಿವೆಂಕಟೇಶ ಅಯ್ಯಂಗಾರ್, ದಾರಾಬೇಂದ್ರೆ, ಚಂದ್ರಶೇಖರ ಕಂಬಾರ ಮುಂತಾದ ಕವಿಗಳು ಈ ನಾಡಿಗೆ ತನ್ನದೇ ಆದ ಕನ್ನಡ ಸೇವೆ ಮಾಡುವ ಮೂಲಕ ಅವರ ಸಾಹಿತ್ಯ ಹಾಗೂ ಕವನಗಳನ್ನು ಜ್ಞಾನದ ರೂಪದಲ್ಲಿ ಈ ನಾಡಿನ ಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಕನ್ನಡದ ಇತಿಹಾಸ ಈ ರಾಷ್ಟ್ರದ ಭಾಷೆಯಾಗಿದ್ದು ಕನ್ನಡದ ಶಾಸನಗಳು ಐತಿಹಾಸಿಕವಾಗಿ ಹೆಸರುವಾಸಿಯಾಗಿವೆ. ಈ ನೆಲ, ಜಲ, ಭಾಷೆ, ನಾಡಿಗಾಗಿ ನಾವು ಸದಾ ಜೊತೆಯಾಗಿ ಕೆಲಸಮಾಡಬೇಕಿದೆ ಎಂದರು.
ಕನ್ನಡದ ಪರಂಪರೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ದವಾಗಿದ್ದು ಈ ಕನ್ನಡ ಸಾಹಿತ್ಯ ಪರಿಷತ್ತು ಗೆ ಎಲ್ಲಾರೀತಿಯ ಸಹಕಾರ ಹಾಗೂ ನೆರವನ್ನು ಕಲ್ಪಿಸಲು ಪ್ರಾಮಣಿಕ ಪ್ರಯತ್ನ ವನ್ನು ಮಾಡಲಾಗುವುದು ಎಂದರು.
ಪ್ರತಿಯೊಬ್ಬರಲ್ಲಿ ಕನ್ನಡದ ಬಗ್ಗೆ ಪ್ರತೀ ಬರಬೇಕು ಮತ್ತು ನಾವು ಈ ಭಾಷೆಯನ್ನು ಹೆಚ್ಚಾಗಿ ಬಳಸುವುದಲ್ಲದೆ ನಮ್ಮ ಮುಂದಿನ ಪೀಳಿಗೆಯ ಜನ ಈ ಭಾಷೆಯನ್ನು ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಸೂಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಟಿ.ಕೆಂಪಣ್ಣ,ಹಿರಿಯ ಸಾಹಿತಿಗಳಾದ ಚನ್ನಬಸಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷರಾದ ರಾಜಣ್ಣ, ತಹಶಿಲ್ದಾರ್ ವಿಭಾ ರಾಥೋಡ್,ಡಿವೈಎಸ್ಪಿ ರವಿ, ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು,ಹಾಗೂ ಕನ್ನಡಪರ ಚಿಂತಕರಾದ ಚುಂಚೇಗೌಡ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.