ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲು ಸರಿ ಸುಮಾರು 1.15 ಲಕ್ಷ ನೌಕರರು ಕರ್ತವ್ಯ ನಿರ್ವಾಹಿಸುತ್ತಿದ್ದಾರೆ. ನಾವೆಲ್ಲ ಹಬ್ಬ-ಹರಿದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಇರದೆ, ಮಳೆ-ಗಾಳಿ-ಬಿಸಿಲು ಎನ್ನದೆ ಅತೀ ಒತ್ತಡದಲ್ಲಿ ಕಷ್ಟಪಟ್ಟು ದುಡಿಯುವ ವರ್ಗವಾಗಿದ್ದರು ನಮಗೆ ಸರ್ಕಾರಿ ಮತ್ತು ಇತರೆ ನಿಗಮ ಮಂಡಳಿಗಳ ನೌಕರರ ವೇತನಕ್ಕೆ ಹೋಲಿಸಿದರೆ ಸಿಗುವ ವೇತನ ಅತ್ಯಲ್ಪ.
ಇದರ ಜತೆಗೆ ಹಲವು ಸೌಲಭ್ಯಗಳಿಂದ ವಂಚಿತರಾದರು ನಾವು ಕಾಯ-ವಚಾ-ಮನಸ್ಸ ದುಡಿಯುವ ಕಾರಣದಿಂದಲ್ಲೇ ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿರುವುದು. ಹೀಗಾಗಿ ನಮಗೆ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಇನ್ನು ಕಳೆದ 40 ವರ್ಷಗಳಿಂದ ನಡೆಯುತ್ತಿದ ಅವೈಜ್ಞಾನೀಕ ವೇತನ ಪರಿಷ್ಕರಣೆಯಿಂದ ಬೇಸತ ಸಾರಿಗೆ ನೌಕರರು ಬುದ್ಧ-ಬಸವಣ್ಣ-ಅಂಬೇಡ್ಕರ್ ವಿಚಾರದಂತೆ ಸಮಾನ ಕೆಲಸಕ್ಕೆ, ಸಮಾನ ವೇತನ ಮತ್ತು ಸೌಲಭ್ಯಗಳಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಿದ ಸಂಧರ್ಭದಲ್ಲಿ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವ ಬದಲು ಹೋರಾಟವನ್ನು ಹತ್ತಿಕ್ಕುವ ಸಾಲುವಾಗಿ ಗುಬ್ಬಿಯ ಮೇಲೆ ಬ್ರಹ್ಮಸ್ತ್ರ ಉಪಯೋಗಿಸುವಂತೆ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿ ಹತ್ತಿಕ್ಕಲಾಯಿತ್ತು.
ಅದರೂ ಸಾರಿಗೆ ನೌಕರರು ಎದೆಗುದ್ದದೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು ಅವರ ಅಧಿಕಾರಾವಧಿ ಮುಗಿದ ತಕ್ಷಣ ಯಾವಾಗ ಕಾಂಗ್ರೆಸ್ ಪಕ್ಷ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ ಮತ್ತು ಸೌಲಭ್ಯಗಳನ್ನು ನೀಡುವ ಭರವಸೆ ನೀಡಿರುವುದನ್ನು ನೋಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಹಲವು ವರ್ಷಗಳ ನ್ಯಾಯಯುತ ಬೇಡಿಕೆ ಈಡೇರುವ ಭರವಸೆಯಿಂದ ನಾವು ನಮ್ಮ ಕುಟುಂಬ ಸದಸ್ಯರು, ಬಂಧುಬಳಗ ಮತ್ತು ಕರ್ತವ್ಯ ಸಮಯದಲ್ಲಿ ಪ್ರಯಾಣಿಕರಿಗೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿ ಸಾರಿಗೆ ನೌಕರರು ಮಾಡಿದ ಅಳಿಲು ಪ್ರಯತ್ನದಿಂದ ನಮೆಲ್ಲರ ಮಹಾದಾಸೆಯಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ನೌಕರರು ಪಟ್ಟ ಖುಷಿಗೆ ಮೀತಿಯೆ ಇರಲಿಲ್ಲ.
ಅರ್ಥಿಕ ಅಧಃಪತನಕ್ಕೆ ಹೋಗಿದ್ದ ಸಾರಿಗೆ ನಿಗಮಗಳನ್ನು ಅರ್ಥಿಕವಾಗಿ ಸಧೃಡ ಮಾಡಲು ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದಾಂದ ಶಕ್ತಿ ಯೋಜನೆಯನ್ನು ನೀಡುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ನೌಕರರು ಕಷ್ಟ ಪಟ್ಟು ದುಡಿದ ಪರಿಣಾಮ ಈ ದಿನ ಸರ್ಕಾರಕ್ಕೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಯೋಜನೆ ಎಂಬ ಹೆಗ್ಗಳಿಕೆಗೆ ಶಕ್ತಿ ಯೋಜನೆ ತಲುಪಿದೆ.
ಅದರಿಂದ ಕಳೆದ ಬಾರಿ ತಮ್ಮ ಸರ್ಕಾರ ನೀಡಿದ 165 ಪ್ರಣಾಳಿಕೆ ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿರುವ ತಾವುಗಳೂ ಈ ಬಾರಿ ಸಾರಿಗೆ ಸಂಸ್ಥೆಯಗಳಲ್ಲಿ ಚಾಲ್ತಿಯಲ್ಲಿರುವ ಯಾವುದೇ ಕಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿಯದೆ ತಮ್ಮ ಪಕ್ಷ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಈ ಬಾರಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ( 7 ವೇತನ ಆಯೋಗದ ಮಾದರಿಯಲ್ಲಿ) ನೀಡುವ ಜೊತೆಗೆ ಕಳೆದ ಸರ್ಕಾರ ಬಾಕಿ ಇಟ್ಟಿರುವ 38 ತಿಂಗಳ ಹಿಂಬಾಕಿ ನೀಡುವ ಮೂಲಕ ಪ್ರತಿಯೊಬ್ಬ ಸಾರಿಗೆ ನೌಕರರ ಮನೆ ದೇವರು ಅಗುವ ಜತೆಗೆ ಸಾರಿಗೆ ಸಂಸ್ಥೆಯಲ್ಲಿ ಒಂದು ಇತಿಹಾಸವೆ ನಿರ್ಮಾಣವಾಗಲಿ ಎಂದು ಸಮಸ್ತ ಸಾರಿಗೆ ನೌಕರರ ಪರವಾಗಿ ವಿನಂತಿಸುತ್ತೇವೆ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಡಿಸಿಎಂ ಶಿವಕುಮಾರ್, ನಮ್ಮ ಪಕ್ಷ ಸಾರಿಗೆ ನೌಕರರಿಗೆ ಕೊಟ್ಟಿರುವ ಭರವಸೆಯನ್ನು ಸರ್ಕಾರ ಈಡೇರಿಸಿಯೇ ತಿರುತ್ತದೆ. ಈ ಬಗ್ಗೆ ಯಾವುದೇ ಆತಂಕ ಪಡಬೇಡಿ ಎಂದು ಭರವಸೆ ನೀಡಿದರು. ಅಲ್ಲದೆ ಈ ಸಂಬಂಧ ಸಿಎಂ ಜತೆಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
Related

You Might Also Like
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ...
KSRTC: ಟೈರ್ ಬ್ಲಾಸ್ಟಾಗಿ ಮನೆಗೆ ನುಗ್ಗಿದ ಬಸ್-10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮನೆಗೆ ಬಸ್ ನುಗ್ಗಿದ ಘಟನೆ ತಾಲೂಕಿನ ಸಿದ್ದಾಪುರ...
ಕ್ರೂರವಾಗಿ ಮಹಿಳೆ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟ ಪಾಪಿಗಳು ಎಸ್ಕೇಪ್
ಬೆಂಗಳೂರು: ಅತ್ಯಾಚಾರ ಮಾಡಿದ ಬಳಿಕ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್...
ಬೃಹತ್ ಇ-ಖಾತಾ ಮೇಳಕ್ಕೆ DCM ಡಿಕೆಶಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ
ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಬೃಹತ್ ಇ-ಖಾತಾ ಮೇಳಕ್ಕೆ ಉಪ ಮುಖ್ಯಮಂತ್ರಿ...