CRIMENEWSಬೆಂಗಳೂರು

BMTC ಬಸ್‌ ಬಾಗಿಲಿಗೆ ಸಿಲುಕಿದ ಕೈ- ಬಿದ್ದು ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು

ಸಾಂದರ್ಭಿಕ ಚಿತ್ರ.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್‌ ಬಸ್‌ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಇಂದು ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿದೆ.

ಸಂಪಂಗಿ (64) ಮೃತಪಟ್ಟವರು. ಪ್ರಯಾಣಿಕ ಸಂಪಂಗಿ ಬಸ್‌ ಹತ್ತುವ ಸಮಯಲ್ಲಿ ಚಾಲಕ ಬಾಗಿಲು ಬಂದ್‌ ಮಾಡಿದ್ದಾನೆ. ಈ ವೇಳೆ ಬಂದ್‌ ಮಾಡಿದ್ದರಿಂದ ಸಂಪಂಗಿಯ ಕೈ ಬಾಗಿಲಿನ ಒಳಡೆ ಸಿಲುಕಿಕೊಂಡಿದ್ದರೆ ದೇಹ ಹೊರಗಡೆ ಇತ್ತು.

ಅದನ್ನು ಗಮನಿಸದೆ ಚಾಲಕ ಬಸ್‌ ಮುಂದಕ್ಕೆ ಚಲಾಯಿಸಿದ್ದರಿಂದ ಸಂಪಂಗಿ ಬಾಗಿಲಿನಿಂದ ಕೈ ಎಳೆದುಕೊಂಡು ಬಿಸಿಕೊಳ್ಳುವ ವೇಳೆ ಆಯತಪ್ಪಿ ಚಕ್ರದ ಅಡಿಗೆ ಬಿದ್ದು ಹಸುನೀಗಿದ್ದಾರೆ.

ಎಲೆಕ್ಟ್ರಿಕ್‌ ಬಸ್‌ ಜಯನಗರ ಬಸ್‌ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಮೃತ ಸಂಪಂಗಿಯ ಕುಟುಂಬಸ್ಥರನ್ನು ಸಂಪರ್ಕಿಸಿದ ಬಳಿಕ ಮೃತದೇಹವನ್ನು ಕಿಮ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ.

Megha
the authorMegha

Leave a Reply

error: Content is protected !!