NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ವೇತನ ಕನಿಷ್ಠ 36,000 ರೂ.ಗೆ ಹೆಚ್ಚಿಸುವ ಮೂಲಕ ಸರಿ ಸಮಾನ ವೇತನ ಕೊಡಿ: ಸಿಡಿದೇಳುತ್ತಿರುವ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನವನ್ನು ಕನಿಷ್ಠ 36,000 ರೂ.ಗಳಿಗೆ ಹೆಚ್ಚಿಸುವ ಜತೆಗೆ ವೇತನ ಆಯೋಗದಂತೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನಿಗದಿ ಮಾಡಬೇಕು ಎಂದು ಸಮಸ್ತ ಸಾರಿಗೆ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಕಳದೆ 5 ವರ್ಷಗಳಿಂದ ಸರಿಯಾಗಿ ವೇತನ ಪರಿಷ್ಕರಣೆಯಾಗದೆ ನೌಕರರು ಸಂಕಷ್ಟದಲ್ಲಿದ್ದೇವೆ. ಹೀಗಾಗಿ 7ನೇ ವೇತನ ಆಯೋಗದಂತೆ ಸರ್ಕಾರ ಕನಿಷ್ಠ ವೇತನವನ್ನು 36,000 ರೂ.ಗೆ ಹೆಚ್ಚಿಸಬೇಕು ಎಂದು ನಾಲ್ಕೂ ನಿಗಮಗಳ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಇನ್ನು ಈ ಜತೆಗೆ ಕಳೆದ 2020 ಜನವರಿ 1ರಿಂದ ಜಾರಿಗೆ ಬಂದಿರುವ ವೇತನ ಹೆಚ್ಚಳದ ಶೇ.15ರಷ್ಟರ 38 ತಿಂಗಳ ಮೂಲ ವೇತನದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಕೂಡ ಕಾನೂನಾತ್ಮಹವಾಗಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದಿನಿಂದಲೂ ಟ್ರೇಡ್‌ ಯೂನಿಯನ್‌ಗಳು ಬರಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಷ್ಟೇ ಹೋರಾಟದಲ್ಲಿ ಭಾಗವಹಿಸಬೇಕು ಕಾರಣ ಇವರೆಲ್ಲ ಕಾರ್ಮಿಕರು ಎಂದು ಸಂಸ್ಥೆಯಲ್ಲಿ ಬೇಡದ ನಿಯಮವನ್ನು ಹಾಕಿ ಹೋರಾಟ ಮಾಡಿಕೊಂಡು ಬರುತ್ತಿರುವುದರಿಂದ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ. ಇದರಿಂದ ನಾವು ಕೂಡ ಸಂಸ್ಥೆಯಲ್ಲಿ ಬರಿ ದುಡಿಯುವ ಎತ್ತುಗಳಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಮ್ಮ ಸಂಸ್ಥೆಗಳಲ್ಲಿ ಜಂಟಿ ಕ್ರಿಯಾ ಸಮಿತಿ ಎಂಬ ಬಣ ನಮಗೆ ಅಗ್ರಿಮೆಂಟ್‌ ಮೂಲಕವೇ ವೇತನ ಹೆಚ್ಚಳ ಮಾಡಬೇಕು. ಅದು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಅತ್ತ ನೌಕರರ ಒಕ್ಕೂಟ ಎಂಬ ಬಣ ಸಮಾನವ ವೇತನ ಬೇಕು. ಅದು ನೀವು ಕಳೆದ ವಿಧಾನ ಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.

ಆದರೆ, ಈವರೆಗೂ ಸರ್ಕಾರ ಈ ಎರಡೂ ಬಣಗಳ ಬಡಿದಾಟವನ್ನೇ ಬಂಡವಾಳ ಮಾಡಿಕೊಂಡು ನಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡದೆ ಕಾಲಹರಣ ಮಾಡುತ್ತಿದ್ದೆ. ಹೀಗಾಗಿ ನಾವು ಕೂಡ ಹೋರಾಟ ಮಾಡಬೇಕಾದ ಅನಿವಾರ್ಯತೆ ಈಗ ಬಂದಿದೆ ಎಂದು ಭಾವಿಸಿದ್ದೇವೆ. ಆದರೆ ಸರ್ಕಾರ ನಾವು ಹೋರಾಟ ಮಾಡುವಂತಹ ಸನ್ನಿವೇಶವನ್ನು ತಂದುಕೊಳ್ಳದೇ  ಕೂಡಲೇ ನಮಗೆ ಸಿಗಬೇಕಿರುವ ಸೌಲಭ್ಯವನ್ನು ವೇತನ  ಹೆಚ್ಚಳ ಮಾಡುವ ಮೂಲಕ ನೀಡಬೇಕು  ಎಂದು ಆಗ್ರಹಿಸಿದ್ದಾರೆ.

ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ರಾಜ್ಯ ಸರ್ಕಾರ ನೌಕರರಿಗೆ ಕೊಟ್ಟ ಭರವಸೆ ಈಡೇರಿಸದೆ ಕಾಲದೂಡುತ್ತಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಎಂದಿದ್ದರೂ ತಾವು ನಮಗೆ ಈ ಸೌಲಭ್ಯಗಳನ್ನು ಕೊಡಲೇಬೇಕು. ಹೀಗಾಗಿ ಈ ವಿಳಂಬ ನೀತಿ ಬಿಟ್ಟು ನಮಗೆ ಬರಬೇಕಿರುವ 38 ತಿಂಗಳ ಹಿಂಬಾಕಿಯನ್ನು ಕೊಡಲೇ ಬಿಡುಗಡೆ ಮಾಡಬೇಕು. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಬೇಕು. ಅದಕ್ಕೆ ಮಧ್ಯಂತ್ರ ಪರಿಹಾರವನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಈ ಎಲ್ಲವನ್ನು ಗಮನಿಸುತ್ತಿರುವ ನೌಕರರ ಸಂಘಟನೆಗಳನ್ನು ಹೊರತುಪಡಿಸಿ ನಮ್ಮ ಕುಟುಂಬ ಸದಸ್ಯರ ನೆರವಿನೊಂದಿಗೆ ಖುದ್ದು ಕುಟುಂಬದವರ ಮೂಲಕವೇ ಹೋರಾಟ ಮಾಡಿಸುವುದಕ್ಕೂ ಈಗಾಗಲೇ ಒಂದೆರಡು ಗೌಪ್ಯ ಸಭೆಗಳು ಕೂಡ ಆಗಿವೆ. ಹೀಗಾಗಿ ತಾವು ಜಟಿಲ ಸಮಸ್ಯೆ ತಂದುಕೊಳ್ಳದೆ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಇದಕ್ಕೆ ಇದೇ ಡಿ.26ರವರೆಗೂ ನಾವು ಕಾದು ನೋಡುತ್ತೇವೆ ಮನವಿಕೂಡ ಸಲ್ಲಿಸುತ್ತೇವೆ ಅದಕ್ಕೆ ಸ್ಪಂದಿಸದಿದ್ದರೆ ಬಸ್‌ನಿಲ್ಲಿಸಿ ಹೋರಾಟ ಮಾಡುವುದಕ್ಕೆ ಸಮಸ್ತ ನೌಕರರಿಗೆ ನಾವೇ ಕರೆ ನೀಡುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!