NEWSಕೃಷಿಮೈಸೂರು

ರೈತರ ಮಕ್ಕಳೆಂದು ಅಧಿಕಾರಕ್ಕೆ ಬಂದ ಜನರಿಂದ ರೈತರ ಒಕ್ಕಲಪಿಸುವ ಕೆಲಸ: ಕುರುಬೂರು ಶಾಂತಕುಮಾರ್ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ
  • ಕೂರ್ಗಳ್ಳಿ ಗ್ರಾಮ ಘಟಕ ಉದ್ಘಾಟನೆ

ಮೈಸೂರು: ರೈತರ ಮಕ್ಕಳೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಜನರು ಬಳಿಕ ರೈತರ ಒಕ್ಕಲಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಕೂರ್ಗಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಸಂಘಟನೆಗಳ ಒಕ್ಕೂಟದ ಗ್ರಾಮ ಘಟಕವನ್ನು ಗಿಡ ನೆಟ್ಟು ನೀರೆರೆಯುವ ಮೂಲಕ ಉದ್ಘಾಟಿಸಿದ ಬಳಿಕ ಮಾಡಿದರು.

ಫಲವತ್ತಾದ ಕೃಷಿ ಭೂಮಿಗಳನ್ನು ರೈತರಿಂದ ಕಿತ್ತುಕೊಂಡು ಕೈಗಾರಿಕೆಗಳಿಗೆ ದಾನ ಮಾಡುತ್ತಿರುವ ಸರ್ಕಾರದ ನೀತಿಯ ವಿರುದ್ಧ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕು. ಎಲ್ಲ ಪಕ್ಷದ ಅಧಿಕಾರಸ್ತರು ಹಸಿರು ಶಾಲು ಹಾಕಿಕೊಂಡು ರೈತರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಇನ್ನು ಇದೇ ಆಗಸ್ಟ್ 25 ರಂದು ದೆಹಲಿಯಲ್ಲಿ ನಡೆಯಲಿರುವ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯತರ ಸಂಘಟನೆಯೇತರ ರೈತರ ಬೃಹತ್ ರ‍್ಯಾಲಿಯಲ್ಲಿ ಕರ್ನಾಟಕದಿಂದಲೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಸಿರು ಶಾಲು ಮಹತ್ವ ಕುರಿತು ಮಾತನಾಡಿ, ಗ್ರಾಮ ಘಟಕಗಳು ಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಬದಲು ರೈತರ ನೆರವಿಗೆ ಶ್ರಮಿಸಬೇಕು, ಆಗಮಾತ್ರ ಘಟಕ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಮೈಸೂರ್ ತಾಲೂಕ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ವರ್ಕೂಡು ನಾಗೇಶ್ ಕೂರ್ಗಳ್ಳಿ ಗ್ರಾಮ ಘಟಕದ ಅಧ್ಯಕ್ಷ ರವಿ, ಧನಂಜಯ್, ಶಿವರಾಜ್,ರಾಮು ಪ್ರಕಾಶ್, ಅಣ್ಣಯ್ಯ ,ರಾಜೇಂದ್ರ ,ನಾಗಣ್ಣ,ತಿಮ್ಮೇಗೌಡ, ಮನು, ಕೃಷ್ಣ, ವಾಜ ಮಂಗಲ ಮಹದೇವ್, ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್, ಸಾಥಗಳ್ಳಿ ಬಸವರಾಜ್, ಕಾಟೂರ್ ಮಹದೇವಸ್ವಾಮಿ, ನಾಗೇಶ್, ಕೆಂಡಗಣ್ಣಪ್ಪ, ಸಿದ್ದರಾಮ, ಗಿರೀಶ್ ಸೇರಿದಂತೆ ನೂರಾರು ರೈತರು ಇದ್ದರು.

Megha
the authorMegha

Leave a Reply

error: Content is protected !!