NEWSನಮ್ಮಜಿಲ್ಲೆಬೆಂಗಳೂರು

ನಾಳೆ ಫೋನ್-ಇನ್ ಕಾರ್ಯಕ್ರಮ ನಾಗರಿಕರು ಸಮಸ್ಯೆ ತಿಳಿಸಿ: ರಾಜೇಂದ್ರ ಚೋಳನ್ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾಳೆ ಅಂದರೆ ಜನವರಿ 5ರ ಸೋಮವಾರ ಸಂಜೆ 6 ರಿಂದ 7 ಗಂಟೆಯವರೆಗೆ ನಾಗರಿಕರು ದೂರವಾಣಿ ಮೂಲಕ ಕರೆ ಮಾಡಿ ಆಯುಕ್ತರಿಗೆ ನೇರವಾಗಿ ಅಹಲವಾಲು ಸಲ್ಲಿಸಬಹುದು.

ಕರೆ ಮಾಡಬೇಕಾದ ಸ್ಥಿರ ದೂರವಾಣಿ ಸಂಖ್ಯೆ: 080-22975803 ಆಗಿದೆ. ಜಿಬಿಎ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ಈ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಈ ಮೂಲಕ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತಂತೆ ದೂರವಾಣಿ ಮೂಲಕ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಅಹವಾಲು ಸಲ್ಲಿಸಬೇಕಾದ ವಿಷಯಗಳು: * ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು * ಬೀದಿ ದೀಪಗಳ ನಿರ್ವಹಣೆ * ಕಸ ವಿಲೇವಾರಿ * ಒಣಗಿದ / ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ * ಉದ್ಯಾನವನಗಳ ನಿರ್ವಹಣೆ

* ಇ-ಖಾತಾ ಸಂಬಂಧಿತ ವಿಷಯಗಳು * ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು * ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ ತೆರವು * ಚರಂಡಿ ಶುದ್ಧೀಕರಣ * ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯ ಕಲ್ಪಿಸುವ ಅಹವಾಲುಗಳು.

ನಾಳೆ ದೂರವಾಣಿ ಮೂಲಕ ಕರೆ ಮಾಡಿ ನೇರವಾಗಿ ಆಯುಕ್ತ ರಾಜೇಂದ್ರ ಚೋಳನ್ ಅವರೊಂದಿಗೆ ಮಾತನಾಡಿ ನಾಗರಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ನಾಗರಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಮಾನ್ಯ ಆಯುಕ್ತರು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು.

Megha
the authorMegha

Leave a Reply

error: Content is protected !!