NEWSನಮ್ಮಜಿಲ್ಲೆಸಂಸ್ಕೃತಿ

ಪಿರಿಯಾಪಟ್ಟಣ: ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ಜರುಗಿದ ಶ್ರೀ ಮಸಣೀಕಮ್ಮನವರ ಬ್ರಹ್ಮ ರಥೋತ್ಸವ

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ದ ಚಂಗಾಳ್ವರ ನಾಡಿನ ಅಧಿದೇವತೆ, ಪಿರಿಯಾಪಟ್ಟಣದ ಗ್ರಾಮದೇವತೆ ಶ್ರೀ ಮಸಣೀಕಮ್ಮನವರ (ಪಿರಿಯಾಪಟ್ಟಣದಮ್ಮ) ಬ್ರಹ್ಮ ರಥೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ಲಕ್ಷಾಂತರ ಭಕ್ತಾಧಿಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

15 ದಿನಗಳ ಹಿಂದೆಯೇ ದೇವಾಲಯದ ವಿಧಿವಿಧಾನದಂತೆ ಮುಹೂರ್ತ ಕಾರ್ಯ ನೆರವೇರಿಸಿದ ನಂತರ ಪ್ರತಿದಿನ ದೇವಾಲಯದಲ್ಲಿ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ ಕಳೆದ ಸೋಮವಾರದಿಂದ ಬೆಳಿಗಿನ ಜಾವ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಕೈಂಕರ್ಯ ಹಾಗೂ ವಿಶೇಷ ಪೂಜೆ ಹೋಮ ಹವನಾದಿಗಳು ನಡೆದಿದ್ದು, ಗುರುವಾರ ಬೆಳಗ್ಗೆ 10.30ರಿಂದ 12.15 ಗಂಟೆಯೊಳಗೆ ಸಲ್ಲುವ ಬ್ರಾಹ್ಮೀ ಮುಹೂರ್ತದ ವೃಷಭ ಲಗ್ನದಲ್ಲಿ ಮಸಣೀಕಮ್ಮನವರ ಬ್ರಹ್ಮ ರಥೋತ್ಸವವನ್ನು ಭಕ್ತ ಸಾಗರದ ನಡುವೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹೂಗಳಿಂದ ಅಂಲಕೃತಗೊಂಡ ರಥದಲ್ಲಿ ಮಸಣೀಕಮ್ಮದೇವಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮುಖಾಂತರ ಮೆರವಣಿಗೆ ನಡೆಸಲಾಯಿತು. ನಂತರ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಲಕ್ಷಾಂತರ ಭಕ್ತರು ಭಕ್ತಿಪರವಶತೆಯಿಂದ ತೇರನ್ನು ಎಳೆದು ಹಣ್ಣು ಜವನ ಎಸೆದು ಪುನೀತರಾದರು.

ಹರಿದು ಬಂದ ಭಕ್ತಸಾಗರ: ಪಿರಿಯಾಪಟ್ಟಣ ತಾಲೂಕಿನ ಅಧಿದೇವತೆಯಾದ ಶ್ರೀ ಮಸಣೀಕಮ್ಮ ದೇವರ ರಥೋತ್ಸವಕ್ಕೆ ಹೊರ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ತೇಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸರದಿ ಸಾಲಿನಿಂದ ದೇವಾಲಯದ ಅವರಣ ಜನಜಂಗುಳಿಯಿಂದ ಕೂಡಿತ್ತು.

ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ: ಪಟ್ಟಣದ ಬಿ.ಎಂ.ರಸ್ತೆಯ ಉಪ್ಪಾರಗೇರಿ ಗೇಟ್ ಭಗೀರಥ ಸರ್ಕಲ್‌ನಿಂದ ಹಿಡಿದು ಪಟ್ಟಣದ ಬಸ್ ನಿಲ್ದಾಣದ ವೃತ್ತದ ವರೆಗೆ ಪಟ್ಟಣದ ಉಪ್ಪಾರಬೀದಿ, ಒಳಕೋಟೆ, ಕರಿಬಸಪ್ಪ ಬಡಾವಣೆ, ದೇವೇಗೌಡನ ಕೊಪ್ಪಲಿನ ಉಪ್ಪಾರ ಸಮಾಜ, ಮಸಣಿಕೇರಿ, ಕೆ.ವೆಂಕಟೇಶ್ ಅಭಿಮಾನಿ ಬಳಗ, ಅಪ್ಪು ಅಭಿಮಾನಿ ಬಳಗ, ಆಟೋ-ಕಾರು ಚಾಲಕರ ಸಂಘ.

ಪಿರಿಯಾಪಟ್ಟಣ ತರಕಾರಿ ಮಾರಾಟಗಾರರ ಸಂಘ, ಜೈನ್ ಮತ್ತು ವೀರಶೈವ ಸಮಾಜದ ಬಂದುಗಳು, ಬೆಟ್ಟದಪುರ ಸರ್ಕಲ್ ಯುವಕರ ಸಂಘದವರು ವಿವಿಧ ಭಾಗಗಳಿಂದ ಜಾತ್ರೆಗೆಂದು ಬಂದಿದ್ದ ಅಮ್ಮನವರ ಭಕ್ತರು ಸೇರಿದಂತೆ ನೂರಾರು ಸ್ಥಳೀಯ ಸಂಘ ಸಂಸ್ಥೆಗಳು ಜಾತ್ರೆಗೆ ಬಂದಂತಹ ಭಕ್ತ ಸಮೂಹಕ್ಕೆ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಮಾಡಿದವು.

ಈ ವೇಳೆ ಬಾತು, ಮೊಸರನ್ನ, ಪುಳಿಯೋಗರೆ, ಮಜ್ಜಿಗೆ, ಪಾನಕ, ಕಲ್ಲಂಗಡಿ ಹಣ್ಣು ಮೈಸೂರು ಪಾಕ್, ಜಿಲೇಬಿ ಮತ್ತು ತಿಂಡಿಗಳನ್ನು ವಿತರಿಸಿದರು. ಹಲವೆಡೆ ಪಾನಕ ಮಜ್ಜಿಗೆ ವಿತರಣೆ ಮಾಡಿದರಲ್ಲದೆ ಹಲವೆಡೆ ಜ್ಯೂಸ್ ಮತ್ತು ಐಸ್ಕ್ರೀಂಗಳನ್ನು ವಿತರಣೆ ಮಾಡುವ ಮೂಲಕ ದೇವರಿಗೆ ತಮ್ಮ ಭಕ್ತಿ ಮತ್ತು ಹರಕೆ ಸಮರ್ಪಿಸಿದರು.

ಬಿಗಿ ಬಂದುಬಸ್ತ್: ಜಾತ್ರಾ ಮಹೋತ್ಸವಸ ಅಂಗವಾಗಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದ ಕಾರಣ ದೇವಾಲಯದ ಆವರಣ, ಸಂತೇಮಾಳ ಹಾಗೂ ಬಿ.ಎಂ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮದ್ಯಾಹ್ನ ರಥ ಬಿ.ಎಂ.ರಸ್ತೆಗೆ ಬಂದ ಕೂಡಲೇ ಮೈಸೂರು-ಮಡಿಕೇರಿ ಮುಖ್ಯರಸ್ತೆಯಲ್ಲಿ ಸಾಗರದ ರೀತಿಯಲ್ಲಿ ಜನಸಂದಣೆ ತುಂಬಿಹೋಯಿತು.

ರಥವನ್ನು ಬಿ.ಎಂ.ರಸ್ತೆಯ ಬದಿಯಲ್ಲಿಯೇ ನಿಲುಗಡೆ ಮಾಡಿದ್ದರ ಪರಿಣಾಮ ಬಿ.ಎಂ.ರಸ್ತೆ ಭಾಗಶಃ ಬಂದ್ ಆಗಿತ್ತಾದರೂ. ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಕೈಗೊಂಡು ಪಾದಯಾತ್ರಿಗಳು, ವಾಹನ ಚಾಲಕರು ಸಂಚರಿಸಲು ಪೊಲೀಸ್ ಸಿಬ್ಬಂದಿಗಳು ಅನುವು ಮಾಡಿಕೊಟ್ಟರು.

ಅಮ್ಮನವರ ಉತ್ಸವ ಹಾಗೂ ಮೆರವಣಿಗೆ: ಶ್ರೀ ಮಸಣೀಕಮ್ಮನವರ ಉತ್ಸವ ಗುರುವಾರ ಸಂಜೆಯಿಂದ ಪಟ್ಟಣದಲ್ಲಿ ಹಾಗೂ ಮಾ.15ರ ಶುಕ್ರವಾರರಂದು ಪಟ್ಟಣದ ಒಳಕೋಟೆ, ಕರಿಬಸಪ್ಪ ಬಡಾವಣೆ, ಪೇಟೆಬೀದಿ, ಸಣ್ಣಯ್ಯನಬೀದಿ, ಬಿ.ಎಂ.ರಸ್ತೆ, ದೇವೇಗೌಡನ ಕೊಪ್ಪಲು, ಉಪ್ಪಾರಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿ ಮಾ.16ರ ಶನಿವಾರರಂದು ರಾತ್ರಿ 8 ಗಂಟೆಗೆ ಪಟ್ಟಣದ ಉಪ್ಪಾರಬೀದಿ ಒಳಕೋಟೆ ಮಧ್ಯದಲ್ಲಿರುವ ಚಿಕ್ಕಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ.
l ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ

Leave a Reply

error: Content is protected !!
LATEST
ಆಗಸದಲ್ಲೇ ಡಿಕ್ಕಿ ಹೊಡೆದುಕೊಂಡ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಪತನ: 10 ಮಂದಿ ಮೃತ KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು