NEWSನಮ್ಮಜಿಲ್ಲೆನಮ್ಮರಾಜ್ಯ

BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ ಕಳೆದ 2023ರ ಮಾರ್ಚ್‌ನಿಂದ ಈವರೆಗೂ ನಿವೃತ್ತರಾದ ನೌಕರರಿಗೆ ಅಂದಾಜು 400 ಕೋಟಿ ರೂ.ಗಳವರೆಗೆ ಗ್ರಾಚ್ಯುಟಿ ಮತ್ತು Encashment leave (EL) ಗಳಿಕೆ ರಜೆ ನಗದೀಕರಣದ ಹಣವನ್ನು ನೌಕರರಿಗೆ ಪಾವತಿಸದೆ ನಿವೃತ್ತ ನೌಕರರು ಕಳೆದ 18 ತಿಂಗಳಿನಿಂದಲೂ ಕೇಂದ್ರ ಕಚೇರಿಗೆ ಅಲೆಯುವಂತೆ ಮಾಡಿಎ.

ಇತ್ತ 2020ರ ಜನವರಿ 1ರಿಂದ ಅನ್ವಯವಾಗುವಂತೆ ಕಳೆದ 2023ರ ಮಾರ್ಚ್‌ನಿಂದ ಜಾರಿಗೆ ಬಂದ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಬಾಕಿಯನ್ನು ಕೊಡಬೇಕು. ಜತೆಗೆ 2020 ಜನವರಿಯಿಂದ ಫೆಬ್ರವರಿ 2023ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೂ ಯಾವುದೇ ಹಿಂಬಾಕಿ ಕೊಡದೆ ಸುಖಾಸುಮ್ಮನೆ ಅಲೆಯುವಂತೆ ಮಾಡಿದೆ.

ಇನ್ನು 2023ರ ಮಾರ್ಚ್‌ನಲ್ಲಿ ಮತ್ತು ಏಪ್ರಿಲ್‌ನಲ್ಲಿ ನಿವೃತ್ತರಾದ ನೌಕರರಿಗೆ ಗ್ರಾಚ್ಯುಟಿ ಹಣ ಕೊಟ್ಟಿದೆ. ಆದರೆ, ಗಳಿಕೆ ರಜೆ ನಗದೀಕರಣದ ಹಣವನ್ನು ಈವರೆಗೂ ಕೊಟ್ಟಿಲ್ಲ. ಇನ್ನು ಮೇ 2023ರಿಂದ ಈವರೆಗೂ ನಿವೃತ್ತರಾಗಿರುವ ಸಂಸ್ಥೆಯ 1500ಕ್ಕೂ ಹೆಚ್ಚು ನೌಕರರ ಗ್ರಾಚ್ಯುಟಿ ಮತ್ತು EL ಈ ಎರಡರ ಹಣವೂ ಕೈಸೇರಿಲ್ಲ ಎಂದು ನೌಕರರು ಪರಿತಪ್ಪಿಸುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಇನ್ನು ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ ಬಂದಮೇಲೆ ಕೊಡುತ್ತೇವೆ ಎಂದು ನಿವೃತ್ತ ನೌಕರರಿಗೆ ಹೇಳಿ ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಗ್ರಾಚ್ಯುಟಿ ಮತ್ತು EL ಹಣ ಯಾವಾಗ ಬರುತ್ತದೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಕೇಂದ್ರ ಕಚೇರಿ ನಿತ್ಯ ನೂರಾರು ಮಂದಿ ನಿವೃತ್ತ ನೌಕರರು ಅಲೆಯುತ್ತಿದ್ದಾರೆ.

ಕಳೆದ 2023ರ ಮಾರ್ಚ್‌ನಿಂದ EL ತಲಾ 2.5 ಲಕ್ಷದಿಂದ 6ಲಕ್ಷ ರೂ.ಗಳವರೆಗೂ ಬರಬೇಕಿದೆ, ಇನ್ನು ಗ್ರಾಚ್ಯುಟಿ 18ರಿಂದ 20 ಲಕ್ಷ ರೂ.ಗಳ ವರೆಗೂ ಬರಬೇಕಿದೆ. ಅಂದರೆ ಅಂದಾಜು 400 ಕೋಟಿ ರೂಪಾಯಿಯನ್ನು ನಿವೃತ್ತರಿಗೆ ಸಕಾಲಕ್ಕೆ ಪಾವತಿಸದೆ ಸಂಸ್ಥೆ ನೌಕರರನ್ನು ಅಲೆಸುವುದರಲ್ಲೇ ಕಾಲಕಳೆಯುತ್ತಿದೆ.

ಇನ್ನು ನಮಗೆ 300 EL ಹಣ 6 ಲಕ್ಷ ರೂಪಾಯಿ ಬರಬೇಕು. ಜತೆಗೆ ಗ್ರಾಚ್ಯುಟಿ ಹಣ 19 ಲಕ್ಷ ರೂಪಾಯಿವರೆಗೂ ಬರಬೇಕು. ಅಂದರೆ ಈ ಗ್ರಾಚ್ಯುಟಿ ಮತ್ತು EL ಎರಡನ್ನು ಸೇರಿಸಿದರೆ ಒಟ್ಟು ನನಗೇ 25 ಲಕ್ಷ ರೂಪಾಯಿವರೆಗೆ ಬರಬೇಕಿದೆ ಎಂದು 16 ತಿಂಗಳ ಹಿಂದೆಯೇ ನಿವೃತ್ತರಾದ ಹೆಸರೇಳಲಿಚ್ಛಿಸದ ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

ಇನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌.ರಾಮಚಂದ್ರನ್ ಅವರನ್ನು ನಿವೃತ್ತ ನೌಕರರು ಭೇಟಿ ಮಾಡಿದ್ದು ಇನ್ನು 3 ತಿಂಗಳು ಸುಮ್ಮನಿರಿ ಅಂದರೆ ಡಿಸೆಂಬರ್‌ಗೆ ಸರ್ಕಾರ ಹಣ ಬಿಡುಗಡೆ ಮಾಡಲಿದ್ದು ಆ ವೇಳೆ ಒಂದೇ ಬಾರಿಗೆ ಎಲ್ಲ ಹಣವನ್ನು ಪಾವತಿಸುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಾರೆ ಸರ್ಕಾರ ಸಾರಿಗೆ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಜತೆಗೆ 30-40ವರ್ಷಗಳು ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೂ 400 ಕೊಟಿ ರೂ. ಗ್ರಾಚ್ಯುಟಿ ಮತ್ತು ಗಳಿಕೆ ರಜೆ ನಗದೀಕರಣದ ಬಾಕಿ ಉಳಿಸಿಕೊಂಡು ನಿತ್ಯ ನೌಕರರನ್ನು ಅಲೆಯುವಂತೆ ಮಾಡಿದೆ.

Leave a Reply

error: Content is protected !!
LATEST
ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ