CRIMENEWSನಮ್ಮಜಿಲ್ಲೆ

KSRTC ಬಸ್‌ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ ಅಮಾನತು: ಎಸ್‌ಪಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಕೂಡ್ಲಿಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕರ್ತವ್ಯ ನಿರತ ಚಾಲಕನ ಮೇಲೆ ಮನಬಂದಂತೆ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಮಂಜುನಾಥ್‌ ಚಪ್ಪಲಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಇಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರೋಪಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಮಂಜುನಾಥ್‌ ತನ್ನ ಬೈಕ್‌ ಕನ್ನಡಿಗೆ ಬಸ್‌ ಟಚ್‌ ಆಗಿಯಿತು ಎಂದು ಹೇಳಿ ಬಸ್‌ ತಡೆದು ನಿಲ್ಲಿಸಿ ಚಪ್ಪಲಿಯಿಂದ ಮನಬಂದಂತೆ ಚಾಲಕರ ರಾಮಲಿಂಗಪ್ಪ ಅವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಯವಾಗಿ ನಿಂದಿಸಿದ್ದ.

ಇದು ಇದೇ ಆ.7ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಸಂಬಂಧ ವಿಷಯ ತಿಳಿದ ಕೂಡಲೇ ವಿಜಯಪಥ ಹರಿಹರ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ ಮಾಹಿತಿ ಕಲೆಹಾಕಿ ವಿವರವಾದ ವರದಿ ಮಾಡಿತ್ತು. ಅಲ್ಲದೆ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿತ್ತು.

ಇನ್ನು ಈತ ನಾನು ಪೊಲೀಸ್‌ ಎಂಬ ದರ್ಪದಲ್ಲೇ ಬಸ್‌ ಹತ್ತಿ ನನ್ನ ಬೈಕ್‌ಗೆ ನೀನು ಟಚ್‌ ಮಾಡಿಕೊಂಡು ಬಂದೆ ಒಂದು ಸ್ವಲ್ಪ ಯಾಮಾರಿದ್ದರು ನಮ್ಮ ಪ್ರಾಣಹೋಗುತ್ತಿತ್ತು ಎಂದು ಅವಾಚ್ಯವಾಗಿ ಬೈದು ಕರ್ತವ್ಯದ ಮೇಲಿರದ ಈ ಪೊಲೀಸ್‌ ಸಿಬ್ಬಂದಿ ಮನಸೋಯಿಚ್ಚೆ KSRTC ಬಸ್‌ ಚಾಲಕನ ಮೇಲೆ ಹಲ್ಲೆ ಮಾಡಿದ್ದ.

ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದ್ದಂತೆ ಹಲ್ಲೆಕೋರ ಪೊಲೀಸ್‌ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಟಾಕ್ಸಿ ಚಾಲಕರ ಅಸೋಶಿಯೇಷನ್‌ ಪದಾಧಿಕಾರಿಗಳು ಕೂಡ ಒತ್ತಾಯಿಸಿದ್ದರು. ಇದನ್ನೂ ಓದಿ: ಕರ್ತವ್ಯ ನಿರತ KSRTC ಚಾಲಕನ ಮೇಲೆ ಅಧಿಕಾರ ಮದವೇರಿ ಚಪ್ಪಲಿಯಿಂದ ಹಲ್ಲೆ ಮಾಡಿದ ಪೊಲೀಸ್‌ ಸಿಬ್ಬಂದಿ!

ಇದರ ನಡುವೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದರು. ಎಲ್ಲವನ್ನು ಗಮನಿಸಿದ ವಿಜಯನಗರ ಎಸ್‌ಪಿ ಅವರು ಹಲ್ಲೆ ಮಾಡಿದ್ದ ಪೊಲೀಸ್‌ ಸಿಬ್ಬಂದಿ ಮಂಜುನಾಥನನ್ನು ಇಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶದ ಪಿಡಿಎಫ್‌ ಪ್ರತಿ: CamScanner 08-09-2025 11.32.59

Megha
the authorMegha

Leave a Reply

error: Content is protected !!