ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು ಗ್ರಾಮಾಂತರ: ಎತ್ತಿನಹೊಳೆ ನೀರು ಸಂಗ್ರಹದ ಜಲಾಶಯ ನಿರ್ಮಾಣಕ್ತೆ ಭೂಮಿ ನೀಡುವ ಲಕ್ಕೇನಹಳ್ಳಿ ಭಾಗದ ರೈತರ ಹಿತ ಕಾಪಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೊಡ್ದಬಳ್ಳಾಪುರ ತಾಲೂಕು ಲಕ್ಕೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಆದ್ಯತೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 14.5 ಟಿ.ಎಂ.ಸಿ ನೀರನ್ನು ನೀಡಬೇಕಾಗಿದೆ ಹಾಗಾಗಿ ಯಾವುದೇ ತಾಲೂಕಿನ ಕೆರೆಗಳನ್ನು ತುಂಬಿಸಬಾರದು. ಅದಕ್ಕಿಂತ ಮೊದಲು ಲಕ್ಕೇನಹಳ್ಳಿ ಭಾಗದಲ್ಲಿ ಸಮತೋಲನ ಜಲಾಶಯ ಆಗುವುದರಿಂದ ನಿಮ್ಮ ಬೇಡಿಕೆಯ ಕೆರೆಗಳನ್ನು ತುಂಬಿಸಲು ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಇನ್ನು ಈ ಭಾಗದ ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಕಸ ವೈಜ್ಞಾನಿಕ ವಿಲೇವಾರಿಗೆ ಒಂದು ದಿನದ ಕಸವನ್ನು ಮೂರು ದಿನದಲ್ಲಿ ಸುಡಲಾಗುವುದು ಅದರಿಂದ ಗ್ಯಾಸ್ ಕರೆಂಟ್ ಉತ್ಪಾದನೆ ಮಾಡಲಾಗುವುದು, ಈಗಾಗಲೇ ನಗರದ ಒಳಗೆ ಕಸ ಸುಡುವ ಮೂಲಕ ಯಾವುದೇ ರೀತಿಯ ವಾಸನೆ ಪರಿಸರ ಮಾಲಿನ್ಯ ಆಗದಂತೆ ಕಸ ವಿಲೇವಾರಿ ತಂತ್ರಜ್ಞಾನಗಳು ಕೆಲ ನಗರಗಳಲ್ಲಿ ಚಾಲ್ತಿಯಲ್ಲಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಎತ್ತಿನ ಹೊಳೆ ಯೋಜನೆಗೆ ಜಮೀನು, ಮನೆ ಕಳೆದುಕೊಳ್ಳುವ ರೈತರಿಗೆ ಗರಿಷ್ಠ ಪರಿಹಾರವನ್ನು ಒಂದು ತಿಂಗಳೊಳಗಾಗಿ ನೀಡಬೇಕು ಹಾಗೂ ಭೂಮಿ ಕಳೆದುಕೊಳ್ಳುವ ರೈತರಿಗೆ ಕನಿಷ್ಟ ಎರಡು ಎಕರೆ ಭೊಮಿಯನ್ನು ಲಭ್ಯವಿರುವ ಕಡೆ ನೀಡಬೇಕು ಎಂದರು.
ಶಾಸಕ ಧೀರಜ್ ಮುನಿರಾಜು ಜಲಾಶಯ ನಿರ್ಮಾಣದಿಂದ ಗ್ರಾಮಗಳು ಮುಳುಗಡೆ ಆಗದಂತೆ ಸಹಕರಿಸಿ ಭಾಧಿತರಾಗುವ ರೈತರ ನೆರವಿಗೆ ಸರ್ಕಾರ ನಿಲ್ಲಬೇಕೆಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಮುಖಂಡರುಗಳು, ಅಧಿಕಾರಿಗಳು ಸಾರ್ವಜನಿಕರು ಇದ್ದರು.

Related
