Please assign a menu to the primary menu location under menu

NEWSಕೃಷಿನಮ್ಮರಾಜ್ಯ

ರಾಜ್ಯದಲ್ಲಿ ಇನ್ನೂ 6 ದಿನಗಳ ಕಾಲ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಆರು ಇನ್ನೂ ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬಿಸಿಲ ಬೇಗೆಯಿಂದ ಬೆಂದಿದ್ದ ಜನರಿಗೆ ವರುಣ ಕೃಪೆ ತೋರುತ್ತಿದ್ದಾನೆ.

ರಾಜ್ಯ ವಿವಿಧೆಡೆ ಇಂದಿನಿಂದ ಮೇ 16ರ ವರೆಗೆ ಮಳೆಯಾಗುವ ಸಾಧ್ಯತೆಯಿದೆ. ಇಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಮಳೆಯಾಗುವ ಸಂಭವವಿದೆ. ಇನ್ನು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.

ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಇಲಾಖೆ ನೀಡಿದೆ.

ಇನ್ನು ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್