NEWSನಮ್ಮರಾಜ್ಯ

ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟ ರೆಸಾರ್ಟ್ ರಾಜಕೀಯ- ಹೈಟೆಕ್ ಟಿಟಿಯಲ್ಲಿ ಮತದಾರರ ಟೂರ್‌

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಇಷ್ಟು ದಿನಗಳ ಕಾಲ ಶಾಸಕರು ರಾಜಕಾರಣದಲ್ಲಿ ರೆಸಾರ್ಟ್ ರಾಜಕೀಯ ನಡಿತ್ತಾ ಇತ್ತು. ಆದರೆ ಇದೀಗ ಸಹಕಾರ ಕ್ಷೇತ್ರಕ್ಕೂ ಸಹ ರೆಸಾರ್ಟ್ ರಾಜಕೀಯ ಕಾಲಿಟ್ಟಿದ್ದು ಇನ್ನಷ್ಟು ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆಯುತ್ತಿದೆ.

ಹೌದು! ಬೆಳಗಾವಿ (ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಸದ್ಯ ಮತದಾನದ ಹಕ್ಕು ಪಡೆದ ಪಿಕೆಪಿಎಸ್ ನಿರ್ದೇಶಕರಿಗೆ ಟೂರ್ ಭ್ಯಾಗ್ಯವನ್ನು ಸ್ಪರ್ಧಾಕಾಂಕ್ಷಿಗಳು ಒದಗಿಸಿಕೊಟ್ಟಿದ್ದಾರೆ.

ಗೋವಾ, ಮಹಾರಾಷ್ಟ್ರ, ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಪಿಕೆಪಿಎಸ್ ಸದಸ್ಯರು ಟೂರ್ ಹೊರಟಿದ್ದಾರೆ. ಡಿಸಿಸಿ ಬ್ಯಾಂಕ್‌ನ 16 ಸ್ಥಾನಗಳ ಪೈಕಿ 9 ನಿರ್ದೇಶಕರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಇನ್ನೂ 7 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ನಿಪ್ಪಾಣಿ, ಹುಕ್ಕೇರಿ, ಅಥಣಿ, ರಾಯಭಾಗ, ರಾಮದುರ್ಗ, ಕಿತ್ತೂರು, ಬೈಲಹೊಂಗಲದಲ್ಲಿ ಚುನಾವಣೆ ನಡೆಯಲಿದೆ.

ಜಾರಕಿಹೊಳಿ ಹಾಗೂ ಕತ್ತಿ ಸವದಿ ಬಣಗಳ ಮಧ್ಯೆ ಡಿಸಿಸಿ ಬ್ಯಾಂಕ್ ತೆಕ್ಕೆಗೆ ಪಡೆಯಲು ಜಿದ್ದಾಜಿದ್ದಿಯೂ ನಡೆದಿದೆ. ಅಡ್ಡ ಮತದಾನ, ಮತದಾರರ ಸೆಳೆಯುವ ಭೀತಿಯ ಕಾರಣ ಮತದಾರರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಇನ್ನು ಅಕ್ಟೋಬರ್ 19ಕ್ಕೆ ನಡೆಯುವ ಈ ಚುನಾವಣೆಗೆ ಮತದಾನ ಮಾಡಲು ನೇರವಾಗಿ ಮತದಾರರು ಪ್ರವಾಸ ಮುಗಿಸಿಕೊಂಡು ಬರಲಿದ್ದಾರೆ.

ಹೈಟೆಕ್ ಟಿಟಿಯಲ್ಲಿ ಬೇರೆ ಬೇರೆ ರಾಜ್ಯಗಳ ರೆಸಾರ್ಟ್‌ಗಳಿಗೆ ಮತದಾರರನ್ನು ಶಿಫ್ಟ್ ಮಾಡಲಾಗಿದ್ದು, ಮತದಾರರು ಭದ್ರತಾ ಸಿಬ್ಬಂದಿ ಕಣ್ಗಾವಲಿನಲ್ಲಿಯೇ ಇರಲಿದ್ದಾರೆ. ಇನ್ನು ಈ ರೆಸಾರ್ಟ್‌ಗೆ ತೆರಳುವ ಮತದಾರರಿಗೆ ಮೊಬೈಲ್ ಬಳಕೆಗೆ ಅವಕಾಶ ಇಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement
Megha
the authorMegha

Leave a Reply

error: Content is protected !!