NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಬಗೆಗಿನ ರಾಜ್ಯ ಸರ್ಕಾರದ ವಿರೋಧಿ ನಡೆಗೆ ನಿವೃತ್ತ ನೌಕರರ ಹಿತಾರಕ್ಷಣಾ ವೇದಿಕೆ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಕೂಡಲೇ ತಮ್ಮ 38 ತಿಂಗಳ ವೇತನ ಪರಿಷ್ಕರಣಾ ಬಾಕಿಯನ್ನು ನೀಡಬೇಕು, ಜನವರಿ 01, 2024 ರಿಂದ ಅನ್ವಯವಾಗುವಂತೆ ಸರ್ಕಾರ ನೌಕರರ ಮುಖಂಡರೊಂದಿಗೆ ಚರ್ಚಿಸಿ ವೇತನ ಜಾರಿ ಮಾಡಬೇಕು ಎಂದು ನಿವೃತ್ತ ನೌಕರರ ಹಿತಾರಕ್ಷಣಾ ವೇದಿಕೆ ಆಗ್ರಹಿಸಿದೆ.

ಮಂಗಳವಾರ (ಜ.13) ನಗರದ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರ ಹಿತಾರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ನೀಡಿತ್ತು.

ರಾಜ್ಯ ಸರ್ಕಾರದ ಕಾನೂನು ವಿರೋಧಿ ನಡೆಯನ್ನು ತಾರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಕೂಡಲೇ ತಮ್ಮ 38 ತಿಂಗಳ ವೇತನ ಪರಿಷ್ಕರಣಾ ಬಾಕಿಯನ್ನು ನೀಡಬೇಕು, ಜನವರಿ 01-2024ರಿಂದ ಅನ್ವಯವಾಗುವಂತೆ ಕೈಗಾರಿಕಾ ಒಪ್ಪಂದವನ್ನು ಸರ್ಕಾರ ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ, ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನಾ ನಿರತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದು ಮುಗಿಲು ಮುಟ್ಟಿತು. ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ವಿಫಲವಾದಲ್ಲಿ, ಹಾಲಿ ಸೇವೆಯಲ್ಲಿರುವ ನೌಕರರು ಹೆಸ್ಮಾ ಕಾಯ್ದೆಗೆ “ಡೋಂಟ್ ಕೇರ್ ಹೇಳಿ” ನಮ್ಮೊಂದಿಗೆ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಹೇಳಿದ ಅವರಿಗೂ ಕರೆ ನೀಡಿದರು.

ಅಂತಿಮವಾಗಿ, ಕೆಎಸ್ಆರ್‌ಟಿಸಿ ನಿರ್ದೇಶಕರಾದ (ಸಿಬ್ಬಂದಿ) ನಂದಿನಿ ದೇವಿ, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರಾದ ಮಂಜುಳಾ ನಾಯಕ್ ಮತ್ತು ಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ ಪ್ರತಿಭಟನಾ ಸ್ಥಳಕ್ಕಾಗಮಿಸಿ, ರಾಜ್ಯ ಸರ್ಕಾರದ ಪರವಾಗಿ ಮನವಿ ಪತ್ರ ಸ್ವೀಕರಿಸಿದರು. ವೇಳೆ ನಿರ್ದೇಶಕರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುತ್ತಾ, ವಾಸ್ತವಾಂಶವನ್ನು ಜವಾಬ್ದಾರಿತವಾಗಿ, ವರದಿ ಮಾಡಿ, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ.

ಒಂದು ಪ್ರತಿಭಟನೆಯಿಂದ ಸಮಸ್ಯೆಗಳು ಬಗೆಹರಿಯಲ್ಲ: ಸಭೆಯಲ್ಲಿ ಮುಖಂಡರು ಮಾತನಾಡಿ, ಈ ಒಂದು ಪ್ರತಿಭಟನೆಯಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ, ಬದಲಾಗಿ, ಪ್ರತಿ ಜಿಲ್ಲೆ ಜಿಲ್ಲೆಗಳಲ್ಲಿಯೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆಯನ್ನು, ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆ ಅನ್ವಯ, ರೂ 1,000 ನೀಡಿ, ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿಕೊಂಡು, ನಮ್ಮ ಕಾರ್ಯಕ್ರಮವನ್ನು ರೂಪಿಸಿಕೊಂಡು, ಆಗಿಂದಾಗ್ಗೆ ಸಭೆ, ಸಮಾವೇಶಗಳನ್ನು ನಡೆಸಿದಲ್ಲಿ, ನಮ್ಮ ಗುರಿ ಮುಟ್ಟಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮವಾಗಿ ವಂದನಾರ್ಪಣೆಯೊಂದಿಗೆ ಪ್ರತಿಭಟನೆ ಸಂಜೆ ಪೂರ್ಣಗೊಂಡಿತ್ತು. ಭಾಗವಹಿಸಿದ್ದ ಎಲ್ಲರಿಗೂ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವೇದಿಕೆ ವತಿಯಿಂದ ಮಾಡಲಾಗಿತ್ತು.

ಇನ್ನು ಈ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಲು ಕಾರಣೀಭೂತರಾದ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರು ಎಂದರೆ ತಪ್ಪಾಗಲಾರದು. ತಮ್ಮ ಎಲ್ಲ ದೈನಂದಿನ ಸಮಸ್ಯೆಗಳು ಹಾಗೂ ಕೆಲಸ ಕಾರ್ಯಗಳನ್ನು ಬದಿಗಿಟ್ಟು, ಅದರಲ್ಲೂ 2020ರ ನಂತರ ನಿವೃತ್ತರಾದ ನೌಕರರು, ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಪದಾಧಿಕಾರಿಗಳಾದ ನಂಜುಂಡೇಗೌಡ, ಶಂಕರ್ ಕುಮಾರ್, ಡೋಲಪ್ಪ, ರಂಗನಾಥ್ ಆರ್, ನಾಗರಾಜ, ರುಕ್ಮೇಶ್, ಕೃಷ್ಣಮೂರ್ತಿ ಹಾಗೂ ಅಪಾರ ಕಾರ್ಯಕರ್ತರು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ನ ಅಧ್ಯಕ್ಷ ಬ್ರಹ್ಮಚಾರಿ ಹಾಗೂ ಹಲವಾರು ಸದಸ್ಯರು ಭಾಗವಹಿಸಿದ್ದರು.

ಅಲ್ಲದೆ ನೌಕರರ ಮಹಾಮಂಡಲದ ಪದಾಧಿಕಾರಿಗಳಾದ ಜಯ ದೇವರಾಜೇ ಅರಸು, ದೇವರಾಜ ಅರಸ್, ಮಂಜುನಾಥ್ ಕೆ.ಎಲ್., ನಾರಾಯಣಸ್ವಾಮಿ, ಬೇವಿನಕಟ್ಟಿ ಎನ್.ಎಚ್., ಹೊಸಮನಿ ಸಿ.ಎಚ್., ಕುಲಕರ್ಣಿ ಆರ್.ಎನ್. ಅವರು ಪ್ರತಿಭಟನೆಯ ಮುಂದಾಳತ್ವವಹಿಸಿದ್ದರು.

Megha
the authorMegha

Leave a Reply

error: Content is protected !!