CRIMEದೇಶ-ವಿದೇಶ

ನಡು ರಸ್ತೆಯಲ್ಲಿ ರೌಡಿ ಹತ್ಯೆ- ತಡೆಯಲು ಹೋದ ಪತ್ನಿ ಮೇಲು ಹಲ್ಲೆ

ವಿಜಯಪಥ ಸಮಗ್ರ ಸುದ್ದಿ

ಚೆನ್ನೈ: ನಡು ರಸ್ತೆಯಲ್ಲಿ ರೌಡಿಯೊಬ್ಬನನ್ನು ಕಾರಿನಲ್ಲೇ ಅಟ್ಟಾಡಿಸಿಕೊಂಡು ಬಂದ ನಾಲ್ವರು ರೌಡಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ.

‌ ಜಾನ್ ಅಲಿಯಾಸ್ ಚಾಣಕ್ಯನ್ ಹತ್ಯೆಯಾದ ರೌಡಿ. ಬುಧವಾರ ಬೆಳಗ್ಗೆ ಸೇಲಂನಿಂದ ತಿರುಪುರಕ್ಕೆ ಜಾನ್ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಅಲ್ಲಿಂದ ಅವರು ಮಧ್ಯಾಹ್ನ ಗೌಡಮ್ ಪಾಳ್ಯಮ್ ಬಳಿ ಹೆದ್ದಾರಿಯ ತಲುಪಿದ್ದಾರೆ. ಆತ ಬರುವುದನ್ನೇ ಕಾಯುತ್ತಿದ್ದ ರೌಡಿಗಳು ಕ್ಷಣದಲ್ಲೇ ದಾಳಿ ನಡೆಸಿದ್ದಾರೆ.

ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾರಿನ ಮೇಲೆಯೇ ದಾಳಿ ಮಾಡಿ ಕಾರನ್ನು ಹಿಂಬಾಲಿಸಿಕೊಂಡೆ ನಾಲ್ವರು ಹೋಗಿ ಜಾನ್‌ ಕಾರನ್ನು ತಡೆದು ನಿಲ್ಲಿಸಿ ಮನಬಂದಂತೆ ಮಾರಾಕಾಸ್ತ್ರಗಳಿಂದ ಥಳಿಸಿದ್ದಾರೆ.

ಈ ವೇಳೆ ಪತಿಯನ್ನು ಉಳಿಸಿಕೊಳ್ಳಲು ಅಡ್ಡ ಬಂದ ಪತ್ನಿ ಮೇಲು ಸಹ ದಾಳಿ ಮಾಡಿದ್ದಾರೆ. ಜಾನ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಾರಿಯಲ್ಲಿ ಹೋಗುತ್ತಿದ್ದವರು ಕೊಲೆ ಮಾಡುತ್ತಿರುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಚಿತ್ತೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೌಡಿಗಳ ಹೆಡೆಮುರಿ ಕಟ್ಟಲು ಶೋಧಕಾರ್ಯದಲ್ಲಿ ತೊಡಗಿದ್ದಾರೆ.

Deva
the authorDeva

Leave a Reply

error: Content is protected !!