NEWSಕೃಷಿನಮ್ಮರಾಜ್ಯ

ರೈತರ ಸಾಲ ಮನ್ನಾಗೆ ತಿಂಗಳ ಗಡುವು ನೀಡಿ ಎಚ್ಚರಿಸಿದ ಸಂಯುಕ್ತ ಕಿಸಾನ್ ಮೋರ್ಚಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರೈತರ ಸಾಲ ಮನ್ನಾಗೆ ಒಂದು ತಿಂಗಳ ಗಡುವು ನೀಡುವು ನೀಡಿದ್ದು, ಈ ಒಂದು ತಿಂಗಹಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರೈತರು ದೆಹಲಿ ಚಲೋ ಹಮ್ಮಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಬೇಕಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದೆ.

ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ಮಹಾ ಅಧಿವೇಶನವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟನೆ ಮಾಡಿದ ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಮಾತನಾಡಿ, ಪ್ರಜಾಸತ್ತಾತ್ಮಕವಾಗಿರುವ ಸಂಸತ್ತಿನಲ್ಲಿ ನಡೆಯುವ ಕುತಂತ್ರಗಳ ವಿರುದ್ಧ ನಾವು ಜಾಗೃತರಾಗಬೇಕಾಗಿದೆ ಎಂದು ರೈತರಿಗೆ ಕಿವಿ ಮಾತು ಹೇಳಿದರು.

ಇನ್ನು ರೈತ ಸಂಕುಲ ಉಳಿಸಲು ನಮ್ಮ ಹೋರಾಟ ಅನಿವಾರ್ಯವಾಗಿದೆ. ಪಂಜಾಬಿನಿಂದ ಬಾಂಬೆತನಕ 500 ಜನ ರೈತರ ಜೊತೆಗೂಡಿ ಹೋರಾಟ ನಡೆಸಿ ಮುಂಬೈನಲ್ಲಿ ಯಶಸ್ವಿಯಾಗಿದ್ದೇವೆ. ಫೆಬ್ರವರಿ 26ರಂದು ದೆಹಲಿಯಲ್ಲಿ ರೈತರ ಕಹಳೆ ಮೊಳಗಿಸೋಣ, ಕರ್ನಾಟಕ ರೈತ ಹೋರಾಟಕ್ಕೆ ದೇಶಕ್ಕೆ ಮಾದರಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಬನ್ನಿ ಎಂದು ಮನವಿ ಮಾಡಿದರು.

ಸಂಯುಕ್ತ ಕಿಸಾನ್ ಮೋರ್ಚಾದ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಮಾತನಾಡಿ, ರೈತರು ದೇಶದ ಜನರ ಅನ್ನಕ್ಕಾಗಿ ಸಾಲ ಮಾಡಿದ್ದು, ಆ ಹಣವನ್ನು ಭೂಮಿಗೆ ಹಾಕಿದ್ದಾರೆ. ಪ್ರಕೃತಿಯ ತೊಂದರೆಯಿಂದ ಸಾಲದ ಹಣ ವಾಪಸ್ ಬಂದಿಲ್ಲ. ಅದಕ್ಕೆ ರೈತರು ಹೊಣೆಯಲ್ಲ, ಆದ್ದರಿಂದ ರೈತರ ಸಾಲಮನ್ನಾ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಸಾಲ ಮನ್ನಾಗೆ ಒಂದು ತಿಂಗಳ ಗಡುವು ನೀಡುತ್ತೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದ ರೈತರು ದೆಹಲಿ ಚಲೋ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬರಗಾಲದ ಭಿಕ್ಷೆ ನೀಡಲು ಹೊರಟಿದೆ ಸರ್ಕಾರ, ರೈತರು ಸ್ವಾಭಿಮಾನಿಗಳು, ಹಗುರವಾಗಿ ನಡೆದುಕೊಂಡರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಪ್ರಧಾನಿಗಳೇ ಭರವಸೆ ನೀಡಿ ಒಂದು ವರ್ಷವಾದರೂ ಸಾಧ್ಯವಾಗಿಲ್ಲ. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದು ದೇಶದ್ರೋಹದ ಕೆಲಸ ಎಂದು ಆಡಳಿತಗಾರರು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಭಾರತ ದೇಶ ಇಂದು ಸ್ವಾವಲಂಬಿಯಾಗಿ ಹೊರದೇಶಕ್ಕೆ ಆಹಾರ ದಾನ ಮಾಡುತ್ತಿದ್ದೇವೆ. ಇದು ರೈತರ ಶ್ರಮದಿಂದ ಸಾಧ್ಯವಾಗಿದೆ ಎಂಬುದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುವುದು ದುರ್ದೈವದ ಸಂಗತಿಯಾಗಿದೆ ಎಂದರು.

ವಿಶ್ವ ರೈತ ದಿನದ ಅಂಗವಾಗಿ ರಾಜ್ಯದ ವಿವಿಧ ಭಾಗದ 5 ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ನೀಡಲಾಯಿತು. ಆರಂಭದಲ್ಲಿ ದೆಹಲಿಯಲ್ಲಿ ಹೋರಾಟ ಮಾಡಿದ 750 ಜನ ಪ್ರಾಣ ಕಳೆದುಕೊಂಡವರಿಗಾಗಿ ನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕರ್ನಾಟಕ ಜಲ ಸಂರಕ್ಷಣ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ, ಇದರಿಂದ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ದೇಶದ ಜನರಿಗಾಗಿ ಆಹಾರ ಬೆಳೆಯುವ ರೈತನಿಗೆ 60 ವರ್ಷ ತುಂಬಿದರು ಜೀವನ ಭದ್ರತೆ ಇಲ್ಲ. ಹೀಗಾಗಿ ಪ್ರತಿ ತಿಂಗಳು 5000 ರೂ. ಪಿಂಚಣಿ ಕೊಡಬೇಖು ಎಂದು ಆಗ್ರಹಿಸಿದರು.

ಕೇರಳ ರಾಜ್ಯದ ಕೆ.ವಿ.ಬಿಜು, ಹರಿಯಾಣದ ಅಭಿಮನ್ ಕೋಹರ, ಒಡಿಶಾದ ಸಚಿನ್ ಮಹಾಪಾತ್ರ, ಮಹಾರಾಷ್ಟ್ರದ ಶಂಕರ್ ದರಕರ್, ತಮಿಳುನಾಡಿನ ಪಿ.ಆರ್.ಪಾಂಡೆ, ಬಿಹಾರ್ ಅರುಣ್ ಮಿಶ್ರಾ, ಹರಿಯಾಣದ ಲಕ್ವಿಂಧರ್ ಸಿಂಗ್ ಮಾತನಾಡಿದರು. ರಾಜ್ಯ ಕಬ್ಬು ಬೆಳೆಗಾರ ಸಂಘದ 15ನೇ ವರ್ಷದ ಸ್ಮರಣ ಸಂಚಿಕೆಯನ್ನು ಕಲ್ಮೇಶ ಎಲ್ಲದಗಿ ಬಿಡುಗಡೆ ಮಾಡಿದರು.

ಐಎಎಸ್ ಪದವಿ ಪುರಸ್ಕಾರ ಮಾಡಿದ ರೈತರು ಕಲ್ಮೇಶ ಯಲ್ಲದಗಿ, ಬೆಳಗಾವಿ ಗಜೇಂದ್ರಸಿಂಗ್ ಕನಕಪುರ, ಶೈಲಜಾ ತುಮಕೂರು, ಅಂಗವಿಕಲ ರೈತ ಮಹೇಂದ್ರ ಮೈಸೂರ್, ಈಶ್ವರ್ ಮಿರಾಸಿ, ರವರಿಗೆ ಗೌರವಿಸಲಾಯಿತು, ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ ಅವರು ರೈತರ ಸಾಲ ಮನ್ನಾ ಅರ್ಜಿಗಳ ಒತ್ತಯ ಪತ್ರವನ್ನು ಸ್ವೀಕರಿಸಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಹತ್ತು ಸಾವಿರಕ್ಕೂ ಹೆಚ್ಚು ರೈತರು ಸಾಲಮನ್ನಾ ಕೋರಿಕೆ ಪತ್ರ ಸಲ್ಲಿಸಿದರು. ಗುಲ್ಬರ್ಗದ ರಮೇಶ್ ಹೂಗಾರ್ ಸ್ವಾಗತಿಸಿದರೆ ಕನ್ನಡ ಚಳವಳಿ ಮುಖಂಡ ಗುರುದೇವ ನಾರಾಯಣ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿಕೆಗೆ ಜೆಡಿಎಸ್ ನಾಯಕರಿಂದ ಅದ್ದೂರಿ ಸ್ವಾಗತ ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ - ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ KSRTC: ಬಾನಂದೂರು - ಶ್ರೀಕ್ಷೇತ್ರ ಆದಿ ಚುಂಚನಗರಿ ನಡುವಿನ ಬಸ್‌ ಸಂಚಾರಕ್ಕೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಚಾಲನೆ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಸಂಬಂಧ ಕರೆದಿದ್ದ ಎಂಡಿಗಳ ಸಭೆ ಮುಂದೂಡಿಕೆ KSRTC- 3ನಿಗಮಗಳ 15 ಡಿಸಿಗಳ ವರ್ಗಾವಣೆ ಮಾಡಿ ಆದೇಶ: ಸಿಪಿಎಂ KSRTC: ಅಪಘಾತದಿಂದ ಮೃತಪಟ್ಟ ನಾಲ್ವರು ನೌಕರರ ಕುಟುಂಬಕ್ಕೆ ತಲಾ 1ಕೋಟಿ ರೂ. ಚೆಕ್‌ ವಿತರಣೆ KSRTC: ನಾಳೆಯಿಂದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜನ್ಮಸ್ಥಳ ಬಾನಂದೂರು- ಆದಿ ಚುಂಚನಗಿರಿಗೆ ನೇರ ಬಸ್ ಸೌಕರ್ಯ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ