NEWSನಮ್ಮಜಿಲ್ಲೆನಮ್ಮರಾಜ್ಯ

ಶಕ್ತಿಯೋಜನೆ-ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆಯಾದ ಹಣವೆಷ್ಟು: ಶಾಸಕರಿಗೆ ಸಾರಿಗೆ ಸಚಿವರು ಕೊಟ್ಟ ಉತ್ತರವೇನು?

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಹಲವು ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಶಕ್ತಿಯೋಜನೆಯಡಿ ನಾಲ್ಕೂ ಸಾರಿಗೆ ನಿಗಮಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಹಣ ಮತ್ತು ನಿಗಮಗಳು ಕೊಟ್ಟಿರುವ ಪ್ರಸ್ತಾವನೆಗೆ ಕೂಲಂಕಷವಾಗಿ ಉತ್ತರ ನೀಡಿದ್ದಾರೆ.

ಶಾಸಕರಿಗೆ ಸಚಿವರು ಕೊಟ್ಟ ಉತ್ತರದ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 3,169.09 ಲಕ್ಷ ಫಲಾನುಭವಿಗಳೀಗೆ ಸರ್ಕಾರದಿಂದ 62511.66 ಲಕ್ಷ ರೂ. ಸಹಾಯಧನ ಬಿಡುಗಡೆಯಾಗಿದೆ. ಬಿಎಂಟಿಸಿಯಲ್ಲಿ 3,425.01 ಲಕ್ಷ ಫಲಾನುಭವಿಗಳಿಗೆ 29465.09 ಲಕ್ಷ ರೂ. ಸಹಾಯ ಧನ ಬಿಡುಗಡೆಯಾಗಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ 2,456.63 ಲಕ್ಷ ಫಲಾನುಭವಿಗಳೀಗೆ 41746.46 ಲಕ್ಷ ರೂ. ಸಹಾಯಧನ ಬಿಡುಗಡೆಯಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1,506.98 ಲಕ್ಷ ಫಲಾನುಭವಿಗಳಿಗೆ 33221.78 ಲಕ್ಷ ರೂ. ಸೇರಿ 166945.00 ಲಕ್ಷ ರೂ. ಸಹಾಯ ಧನ ಬಿಡುಗಡೆಯಾಗಿದೆ.

ಇನ್ನು ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಎಸ್‌ಆರ್‍‌ಟಿಸಿಗೆ 90 ಹೊಸ ಕರ್ನಾಟಕ ಸಾರಿಗೆ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ನಿಗಮಕ್ಕೆ ವಿಶೇಷ ಬಂಡವಾಳ ನೆರವಿನಡಿ 100 ಕೋಟಿ ರೂ. ಅನುದಾನ ಒದಗಿಸಿರುವ ಸರ್ಕಾರವು ಸಾಮಾನ್ಯ ಮಾದರಿಯ ಒಟ್ಟು 250 ಹೊಸ ಬಸ್‌ ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. 25 ಹೊಸ ಸಾಮಾನ್ಯ ಬಸ್‌ಗಳನ್ನು ಡಿಸೆಂಬರ್‍‌ ಅಂತ್ಯದೊಳಗೆ ಸೇರ್ಪಡೆಗೊಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆದಾಯ ಹೆಚ್ಚಿಸಿಕೊಂಡ ನಾಲ್ಕೂ ನಿಗಮಗಳು: ಶಕ್ತಿ ಯೋಜನೆ ಜಾರಿಯಿಂದಾಗಿ ಕೆಎಸ್‌ಆರ್‍‌ಟಿಸಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 3.36 ಕೋಟಿ ರೂ. ಬಿಎಂಟಿಸಿಗೆ 0.95 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1.87 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1.56 ಕೋಟಿ ರೂ. ಆದಾಯ ಹೆಚ್ಚಿದೆ. ಒಟ್ಟಾರೆಯಾಗಿ ಜೂನ್‌ನಿಂದ ನವೆಂಬರ್ ಅಂತ್ಯಕ್ಕೆ 7.74 ಕೋಟಿಯಷ್ಟೇ ಪ್ರತಿ ದಿನ ಸರಾಸರಿ ಆದಾಯ ಬಂದಿದೆ.

ಇನ್ನು 2022-23ರಲ್ಲಿ ಕೆಎಸ್‌ಆರ್‍‌ಟಿಸಿಗೆ 9.21 ಕೋಟಿ ರೂ. ಬಿಎಂಟಿಸಿಗೆ 4.44 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆಗೆ 4.73 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 4.36 ಕೋಟಿ ರೂ. ಪ್ರತಿ ದಿನ ಸರಾಸರಿ ಆದಾಯ ಬಂದಿತ್ತು. ಒಟ್ಟಾರೆ ಪ್ರತಿ ದಿನ ಸರಾಸರಿ 30.48 ಕೋಟಿ ಆದಾಯ ಬಂದಂತಾಗಿದೆ ಎಂದು ವಿವರಿಸಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಪ್ರತಿ ದಿನ ಸರಾಸರಿ ಮಹಿಳಾ ಪ್ರಯಾಣಿಕರ ಸಂಖ್ಯೆ ನಾಲ್ಕೂ ನಿಗಮಗಳಲ್ಲಿ 61.12 ಲಕ್ಷವಿದ್ದು, ಪ್ರತಿ ದಿನದ ಟಿಕೆಟ್‌ ಮೌಲ್ಯ 15.13 ಕೋಟಿ ರೂ. ಸೇರಿ ಅಂದಾಜು ವಾರ್ಷಿಕವಾಗಿ 5,525.58 ಕೋಟಿ ರೂ. ವೆಚ್ಚವಾಗಲಿದೆ. ಶಕ್ತಿ ಯೋಜನೆಗೆ ಜೂನ್ 2023ರಿಂದ ಅಕ್ಟೋಬರ್‍‌ ಅಂತ್ಯಕ್ಕೆ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟಾರೆ 137470.99 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ ಎಂಬ ವಿವರವನ್ನು ನಿಡಿದ್ದಾರೆ.

2023ರ ಜೂನ್‌ 11ರಿಂದ 2023ರ ನವೆಂಬರ್‌ 30ರ ಅಂತ್ಯಕ್ಕೆ ನಾಲ್ಕು ನಿಗಮಗಳಿಗೆ 252162.71 ಲಕ್ಷ ರೂ. ವೆಚ್ಚವಾಗಿದೆ ಎಂದು ಸರ್ಕಾರಕ್ಕೆ ಕಳಿಸಿದೆ. ಈ ಪೈಕಿ ಈ ಯೋಜನೆಯಡಿಯಲ್ಲಿ 2023ರ ಜೂನ್‌ 11ರಿಂದ 2023ರ ನವೆಂಬರ್‌ 30ರ ಅಂತ್ಯಕ್ಕೆ ನಾಲ್ಕೂ ನಿಗಮಗಳಿಗೆ 166945.00 ಲಕ್ಷ ರೂ. ಸಾರಿಗೆ ನಿಗಮಗಳಿಗೆ ಸಹಾಯಧನ ಬಿಡುಗಡೆಯಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಅಧಿಕಾರಿಗಳು- ನೌಕರರಿಗಾಗಿ 436.05 ಕೋಟಿ ರೂ. ಮಾಸಿಕ ವೆಚ್ಚ: ಕೆಎಸ್ಆರ್ಟಿ‌ಸಿಗೆ ಮಾಸಿಕವಾಗಿ ಅಧಿಕಾರಿಗಳು, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಚಾಲಕ, ನಿರ್ವಾಹಕ, ಚಾಲಕ ಕಂ. ನಿರ್ವಾಹಕರಿಗೆ ಮಾಸಿಕ 138.83 ಕೋಟಿ ರೂ. ವೇತನ ನೀಡಬೇಕಿದೆ. ಬಿಎಂಟಿಸಿಗೆ 133.22 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 86.01 ಕೋಟಿ ರೂ. ಕಲ್ಯಣ ಕರ್ನಾಟಕ ಸಾರಿಗೆ ನಿಗಮಕ್ಕೆ 77.99 ಕೋಟಿ ರೂ. ಸೇರಿ ಒಟ್ಟಾರೆ 436.05 ಕೋಟಿ ರೂ. ಮಾಸಿಕ ವೆಚ್ಚ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಶಕ್ತಿ ಯೋಜನೆ ಜಾರಿ ನಂತರ ಕೆಎಸ್‌ಆರ್‌ಟಿಸಿಗೆ 2023-24ನೇ ಸಾಲಿನಲ್ಲಿ 12.57 ಕೋಟಿ ರೂ. ಬಿಎಂಟಿಸಿಗೆ 5.39 ಕೋಟಿ ರೂ. ವಾಯುವ್ಯ ಕರ್ನಾಟಕ ಸಾರಿಗೆಗೆ 6.60 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ 5.92 ಕೋಟಿ ರೂ. ಪ್ರತಿ ದಿನ ಸರಾಸರಿ ಆದಾಯ ಗಳಿಸಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...