NEWSಕೃಷಿನಮ್ಮರಾಜ್ಯ

ರೈತರ ಸಮಸ್ಯೆಗೆ ಮೊಸಳೆ ಕಣ್ಣೀರು ಪರಿಹಾರ ಅಲ್ಲ ಸರ್ಕಾರಗಳ ವಿರುದ್ಧ ಶಾಂತಕುಮಾರ್ ಕಿಡಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರೈತರ ಸಮಸ್ಯೆಗೆ ಮೊಸಳೆ ಕಣ್ಣೀರು ಪರಿಹಾರ ಅಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ನಡೆದ ರೈತ ಜಾಗೃತ ಸಮಾವೇಶವನ್ನು ಹಸಿರು ಬಾವುಟ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಸಮರ್ಪಕ ಯೂರಿಯಾ ರಸಗೊಬ್ಬರ ಪೂರೈಸಲು ಸಾಧ್ಯವಾಗದ ಕೇಂದ್ರ ರಾಜ್ಯ ಸರ್ಕಾರಗಳ ಹಿಬ್ಬಗ್ಗೆ ನೀತಿ ಖಂಡನೆಯ. ದೇಶದ ಜನರಿಗೆ ಆಹಾರ ಬೆಳೆದು ಕೊಡುವ ರೈತರಿಗೆ ಸಕಾಲಕ್ಕೆ ಬೀಜ ರಸಗೊಬ್ಬರ ಪೂರೈಕೆ ಮಾಡುವುದು ಸರ್ಕಾರದ ಕರ್ತವ್ಯ ಅದನ್ನು ಮರೆತು ಎರಡು ಸರ್ಕಾರದ ಪ್ರತಿನಿಧಿಗಳು ದೋಷರೂಪನ ಮಾಡುತ್ತಾ ರೈತರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಆಗಸ್ಟ್ 25ರಂದು ದೆಹಲಿಯಲ್ಲಿ ದೇಶದ ರೈತರ ಬೃಹತ್ ರ‍್ಯಾಲಿ ನಡೆಸಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ಭಾರತ ಅಮೆರಿಕ ನಡುವೆ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಹಾಗೂ ಹೈನುಗಾರಿಕೆಯನ್ನು ಮತ್ತು ಕೋಳಿ ಸಾಕಾಣಿಕೆಯನ್ನು ಹೊರಗಡೆ ಇಡಬೇಕು ಎಂದು ಆಗ್ರಹಿಸಲಾಗುವುದು.

ಅಲ್ಲದೆ ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ದೆಹಲಿ ರೈತ ಹೋರಾಟದಲ್ಲಿ ದಾಖಲಾಗಿರುವ ಎಲ್ಲ ಪೊಲೀಸ್ ಮೊಕ್ಕದಮ್ಮೆಗಳನ್ನು ಕೈಬಿಡಬೇಕು. ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

Advertisement

ಜಾಗೃತ ಸಮಾವೇಶದ ಅಧ್ಯಕ್ಷತೆ ವಹಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಜಿ ಎಂ.ಬಿ. ಚೇತನ್, ಕಬ್ಬು ಬೆಳೆಗಾರರ ಸಂಘ ಹುಟ್ಟಿನಿಂದಲೂ ರೈತರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಹೋರಾಡುತ್ತಾ ಯಶಸ್ವಿಗೊಳಿಸುತ್ತದೆ. ಇಂತಹ ಹೋರಾಟಗಳಿಂದಲೇ ರೈತರಿಗೆ ಶಾಂತಕುಮಾರ್ ಅವರ ಆದರ್ಶಗಳು ಪ್ರಾಮಾಣಿಕತೆ ಮೆಚ್ಚುಗೆ ಆಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ದೂರದರ್ಶನ ಹಿರಿಯ ವರದಿಗಾರರು ಜಯಂತ್ ಅವರು ಮಾತನಾಡಿ, ಶಾಂತಕುಮಾರ್ ಅವರ ನೇತೃತ್ವದ ಹೋರಾಟಗಳು ತಾರ್ಕಿಕ ಅಂತ್ಯಕೆ ಕೊಂಡುಯುವುದಲ್ಲಿ ಯಶಸ್ವಿಯಾಗುತ್ತಿದೇ. ಇದರಿಂದ ಸಂಘಟನೆ ಪ್ರಬಲವಾಗುತ್ತಿದೆ. ಪ್ರೊಫೆಸರ್ ನಂಜುಂಡಸ್ವಾಮಿ, ಜಿ.ಮಾದೇಗೌಡ, ಪುಟ್ಟಣ್ಣಯ್ಯರವರ ಹೋರಾಟದ ಮಾದರಿಯಲ್ಲಿ ಇವರು ಸಾಗುತ್ತಿದ್ದಾರೆ. ಇವರು ಅಪಘಾತವಾಗಿ ಬದುಕಿ ಬಂದಿರುವುದು ಪುನರ್ಜನ್ಮವಾಗಿದೇ. ಇವರ ಆರೋಗ್ಯ ಸುಧಾರಣೆಗೆ ಸುಧಾರಿಸುವುದಕ್ಕೆ ರಾಜ್ಯ ಸರ್ಕಾರದ ನೆರವು ಹೆಚ್ಚಿನ ರೀತಿಯಲ್ಲಿ ದೊರಕಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಹೇಳವರ ಹುಂಡಿ ಸಿದ್ದಪ್ಪ ರೈತ ಜಾಗೃತ ಕಾರ್ಯಗಾರದಲಿ ಮಾತನಾಡಿ, ಶಾಂತಕುಮಾರ ಅವರನ್ನ ಆಸ್ಪತ್ರೆಯಲ್ಲಿ ನೋಡಿದಾಗ ನಿಜವಾಗಿ ನಮ್ಮಗೆ ಆತಂಕವಾಯಿತು. ಆದರೆ ಇಂದು ಚೇತರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಿಜಕ್ಕೂ ಸಂತೋಷದ ವಿಚಾರ ರೈತರ ಅಭಿವೃದ್ಧಿ ಏಳಿಗೆಗಾಗಿ ಮತ್ತಷ್ಟು ಕಾರ್ಯ ನಿರ್ವಹಿಸಲಿ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬರಡನಪುರ ನಾಗರಾಜ್ ಸ್ವಾಗತ ಮಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಕಿರಸೂರು ಶಂಕರ್ ಪ್ರಸ್ತಾವಿಕವಾಗಿ ಮಾತಾಡಿದರು. ಕೆಂಡಗಣ್ಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ನಿವೃತ ಪ್ರಾಂಶುಪಾಲ ಮಹದೇವಯ್ಯ, ವಸಂತ್ ಕುಮಾರ್ ಮಠ, ಕನ್ನಡ ಸಾಹಿತ್ಯದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿ.ಸೋಮಶೇಖರ, ನೀಲಕಂಠಪ್ಪ, ಮುಕ್ಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಪೈಲ್ವಾನ್ ವೆಂಕಟೇಶ್, ವಿಜಯೇಂದ್ರ, ಕೋಟೆ ರಾಜೇಶ್ ಸೇರಿದಂತೆ ರೈತ ಹೋರಾಟ ಕಾರ್ಯಾಗಾರದಲ್ಲಿ 300ಕ್ಕೂ ಹೆಚ್ಚು ರೈತರು ಹಾಗೂ ವಿವಿಧ ಸಂಘದ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!