NEWSನಮ್ಮಜಿಲ್ಲೆಸಂಸ್ಕೃತಿ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ – ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು ವಿಜಯಪಥ   ಪ್ರಕಟ ಮಾಡುತ್ತಿದೆ. ಇನ್ನು ಬೆಂಗಳೂರಿನ ಇಸ್ಕಾನ್‌ ದೇವಾಲಯ ಸೇರಿದಂತೆ ಹಲವೆಡೆ ಕೃಷ್ಣ ಜನ್ಮಾಷ್ಟಮಿ ವಿಶೇಷ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ.

ಹೌದು! ರಾಜ್ಯವಷ್ಟೇ ಅಲ್ಲ ಶ್ರೀಕೃಷ್ಣ ಜನ್ಮಾಷ್ಟಮಿಯಾದ ಇಂದು ದೇಶ – ವಿದೇಶಗಳಲ್ಲೂ ಅತ್ಯಂತ ಭಕ್ತಿ ಭಾವ ಮತ್ತು ವಿಜೃಂಭಣೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಶ್ರೀಕೃಷ್ಣನು ವಿಷ್ಣುವಿನ 8ನೇ ಅವತಾರವಾಗಿದ್ದು, ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನಿಸಿದರು ಎಂದು ಪ್ರತೀತಿ. ಹೀಗಾಗಿ ಈ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತ ಬರುತ್ತಿದ್ದೇವೆ.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದ ಪೂಜೆಯು ಮನೆಗೆ ಶಾಂತಿ, ಸಮೃದ್ಧಿ, ಸಂತಾನ ಭಾಗ್ಯ ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಮಕ್ಕಳು ಕೃಷ್ಣನನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಜತೆಗೆ ಕೃಷ್ಣನ ಜೀವನ ಚರಿತ್ರೆಯ ಕಥೆಗಳನ್ನು ಹೇಳುವುದರಿಂದ ಅವರಿಗೆ ಜೀವನ ಮೌಲ್ಯವನ್ನು ತಿಳಿಸಬಹುದು. ಈ ಹಿನ್ನೆಲೆಯಲ್ಲಿ ಬಹುತೇಕ ತಾಯಿಯವರು ದೇವಕಿ ನಂದನ ಕೃಷ್ಣನ ವೇಷದಲ್ಲಿ ತಮ್ಮ ಮಕ್ಕಳನ್ನು ನೋಡಲು ಇಷ್ಟಪಡುತ್ತಾರೆ. ಹೀಗಾಗಿ ಕೃಷ್ಣನ ವೇಷಭೂಷಣ ತೋಡಿಸಿ ಶೃಂಗರಿ ಸಂತಸಪಡುತ್ತಾರೆ.

ಮಕ್ಕಳಿಗೆ ಕೃಷ್ಣ ವೇಷ ತೊಡಿಸಿದಾಗ ಆ ನಿಷ್ಕಲ್ಮಷ ಮನಸ್ಸಿನ ಮಕ್ಕಳು ಥೇಟ್‌ ಭಗವಾನ್ ಸ್ವರೂಪದಂತೆಯೇ ಕಾಣುವರು. ಅದರಂತೆ ಬೆಂಗಳೂರಿನ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯ ಬಿ.ಜೆ.ದಿಲೀಪ್ ಕುಮಾರ್ ಹಾಗೂ ಪತ್ರಕರ್ತೆ ಅರುಣಾ ಶಿರಗುಪ್ಪಿ ದಂಪತಿಯ ಪುತ್ರ ಲಿಶಾನ್ ಡಿ. ಜೈನ್‌ ಕೃಷ್ಣನ ಕಲರ್ ಪುಲ್ ಡ್ರೇಸಿಂಗ್‌ನಲ್ಲಿ ಮಿಂಚುತ್ತಿದ್ದು ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾನೆ.

ಲಿಶಾನ್ ಶ್ರೀಕೃಷ್ಣನಾಗಿ ಜೋಕಾಲೆಯಲ್ಲಿ ಒಂದೆಡೆ ತೂಗುತ್ತಿದ್ದರೇ, ಗೋಪಿಕೆಯರಾದ ಅದ್ವಿಕಾ ಹಾಗೂ ಭುವಿಕಾ ಜತೆ ತುಂಟಾಟವಾಡುತ್ತಿದ್ದಾನೆ. ಹೂವಿನ ಪೇಟಾ ಅಥವಾ ರೂಮಾಲು ತೊಟ್ಟು ತಲೆಗೆ ನವಿಲು ಗಿರಿ ಇಟ್ಟುಕೊಂಡು ಮಿಂಚುತ್ತಿದ್ದಾರೆ. ಮತ್ತೊಂದೆಡೆ ಬೆಣ್ಣೆ ಕಡೆಯುವ ಮುರಾರಿ ವೇಷದಲ್ಲಿ ಲಿಶಾನ್ ಮಿಂಚಿದ್ದಾನೆ.

Megha
the authorMegha

Leave a Reply

error: Content is protected !!