ಬೆಂಗಳೂರು: ಏನೇ ಆದರೂ ಮೊದಲು ನಾನೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬಣ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಆಫರ್ ನೀಡಿದ್ದು, ನೀವು ಹೇಳಿದವರಿಗೆ ಮಂತ್ರಿಸ್ಥಾನ ಕೊಡುತ್ತೇವೆ. ಜತೆಗೆ ನಿಮ್ಮನ್ನು ಈಗ ಡಿಸಿಎಂ ಮಾಡಿ ಮುಂದಿನ ದಿನಗಳಲ್ಲಿ ಸಿಎಂ ಮಾಡುತ್ತೇವೆ ಎಂದು ಹೇಳಿದೆ.
ಆದರೆ, ಇದಕ್ಕೆ ಒಪ್ಪದ ಡಿಕೆಶಿ ನಾನು ಏಕೆ ಆಫರ್ ಒಪ್ಪಿಕೊಳ್ಳಬೇಕು. ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದಾಗಿನಿಂದಲೂ ನೀವೆ ಅಧಿಕಾರ ಅನುಭವಿಸುತ್ತಿದೀರಿ. ಹೀಗಾಗಿ ನಾನು ಈಗ ಇದನ್ನು ಒಪ್ಪಿಕೊಳ್ಳುವುದಿಲ್ಲ, ನೀವು ಅಧಿಕಾರ ಮಾಡಿಕೊಂಡೇ ಬರುತ್ತಿದ್ದು, ನಮಗೆ ಅವಕಾಶವೇ ಸಿಕ್ಕಿಲ್ಲ ಎಂದು ಸಿದ್ದು ಬಣಕ್ಕೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟಿಗೆ ಶ್ರಮಿಸಿದ್ದೇನೆ ಏನು ಏನೇ ಮಾಡಿದರೂ ನನಗೆ ಮೊದಲ ಅವಧಿಯಲ್ಲೇ ಸಿಎಂ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸಿಮ್ಲಾದಲ್ಲಿರುವ ಸೋನಿಯಾಗಾಂಧಿ ಅವರು ಇಂದು ಮಧ್ಯಾಹ್ನದ ವೇಳೆ ದೆಹಲಿಗೆ ಆಗಮಿಸಲಿದ್ದು ಅವರೊಂದಿಗೆ ಡಿಕೆಶಿ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲದರ ನಡುವೆ ಸಿದರಾಮಯ್ಯ ಅವರ ಬಣ ಡಿಕೆಶಿ ಅವರಿಗೆ ಆಫರ್ ಕೊಟ್ಟಿರುವುದು ಈಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಇವರಾರು ನನಗೆ ಆಫರ್ ಕೊಡುವುದಕ್ಕೆ ಎಂಬ ನಿಟ್ಟಿನಲ್ಲೂ ಡಿಕೆಶಿ ಮತ್ತು ಬಣ ಒಳಗೊಳಗೆ ಕುದಿಯುತ್ತಿದೆ ಎಂದು ಹೇಳಲಾಗುತ್ತಿದೆ.