ಮುಂಬೈ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಬಸ್‌ನಲ್ಲೇ ಮಗುವಿಗೆ ಜನ್ಮನೀಡಿ ಬಳಿಕ ಕಿಟಕಿಯಿಂದ ಆ ನಮಜಾತ ಶಿಶುವನ್ನು ಎಸೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ನಗರದ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ.
ಋತಿಕಾ ಧೇರೆ (19) ಮಗವಿಗೆ ಚಲಿಸುತ್ತಿದ್ದ ಬಸ್‌ನಲ್ಲೇ ಜನ್ಮನೀಡಿದ ಬಳಿಕ ಹೊರಗೆಸೆದು ಕೊಂದ ಪಾಪಿ. ಇನ್ನು ಈಕೆಯ ಪತಿ ಎಂದು ಹೇಳಿಕೊಂಡು ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಲ್ತಾಫ್ ಶೇಖ್ ಎಂಬಾತನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ಗರ್ಭಿಣಿ ಋತಿಕಾ ಧೇರೆ ತನ್ನ ಪತಿ ಎಂದು ಹೇಳಿಕೊಂಡು ಅಲ್ತಾಫ್ ಶೇಖ್ ವ್ಯಕ್ತಿಯ ಜೊತೆಗೆ ಖಾಸಗಿ ಟ್ರ್ಯಾವೆಲ್ಸ್‌ನ ಸ್ಲೀಪರ್ ಕೋಚ್‌ನಲ್ಲಿ ಪುಣೆಯಿಂದ ಪರ್ಭಾನಿ ನಗರಕ್ಕೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಂಗಳವಾರ (ಜು.15) ಬೆಳಗ್ಗೆ 6:30ರ ಸುಮಾರಿಗೆ ಆಕೆಗೆ ಹೆರಿಗೆ ನೋವು ಶುರುವಾಗಿದ್ದು, ಚಲಿಸುತ್ತಿದ್ದ ಬಸ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ್ದಾಳೆ.
ಬಳಿಕ ಆ ಇಬ್ಬರು ಸೇರಿಕೊಂಡು ಆ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ, ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಬಸ್‌ನಿಂದ ಹೊರೆ ಎಸೆದಿದ್ದರಿಂದ ಶಿಶು ಅಸುನೀಗಿದೆ.
ಇತ್ತ ವಾಹನ ಚಲಾಯಿಸುತ್ತಿದ್ದ ಚಾಲಕ ಕಿಟಿಕಿಯಿಂದ ಏನ್ನೋ ಹೊರಗೆ ಎಸೆದರಲ್ಲ ಎಂಬುದನ್ನು ಗಮನಿಸಿ ಬಸ್‌ನಿಲ್ಲಿ ಬಂದು ಈ ಬಗ್ಗೆ ವಿಚಾರಿಸಿದಾರೆ. ಈ ವೇಳೆ ಆಕೆಯ ಪತಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಕಾರಣ ನನ್ನ ಹೆಂಡತಿ ವಾಂತಿ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿ ಚಾಲಕನನ್ನು ನಂಬಿಸಿದ್ದಾನೆ.
ಇನ್ನು ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್‌ನಿಂದ ಏನೋ ಹೊರಗೆ ಬಿತ್ತಲ್ಲ ಎಂದು ಅದನ್ನು ಗಮನಿಸಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅದೇ ತಾನೆ ಜನಿಸಿದ ಗಂಡು ಮಗು ಪತ್ತೆಯಾಗಿದೆ.
ಕೂಡಲೇ ಆತ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಸ್ಥಳೀಯ ಪೊಲೀಸರ ತಂಡ ಬಸನ್ನು ತಡೆದು, ವಾಹನವನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ.
ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮಹಿಳೆ ಹಾಗೂ ಶೇಖ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಮಗೆ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಎಸೆದಿದ್ದೇವೆ. ರಸ್ತೆಗೆ ಎಸೆದ ಬಳಿಕ ಅದು ಸಾವನ್ನಪ್ಪಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಋತಿಕಾ ಧೇರೆ ಹಾಗೂ ಶೇಖ್ ಇಬ್ಬರು ಮೂಲತಃ ಪರ್ಭಾನಿ ನಗರದವರು. ಕಳೆದ ಒಂದೂವರೆ ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಅವರಿಬ್ಬರು ದಂಪತಿ ಎಂದು ಹೇಳಿಕೊಂಡಿದ್ದಾರೆ. ಆದರೆ ಯಾವುದೇ ದಾಖಲೆಗಳಿಲ್ಲ. ಪೊಲೀಸರು ಮಹಿಳೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪರ್ಭಾನಿಯ ಪತ್ರಿ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 94 (3), (5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ನೋಟಿಸ್ ಕೂಡ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related

You Might Also Like
BMTC ಚಾಲನಾ ಸಿಬ್ಬಂದಿಗಳ ಡ್ಯೂಟಿ ರೋಟಾ ಕೌನ್ಸೆಲಿಂಗ್ಗೆ ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ವಾಯುವ್ಯ ಹಾಗೂ ಕೇಂದ್ರೀಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ಹೊಸದಾಗಿ ಕೌನ್ಸೆಲಿಂಗ್...
KSRTC: ಆಗಸ್ಟ್ 5ರಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪಕ್ಕ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ...
ಆ.5ರಿಂದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ: ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ...
KSRTC ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ: ಹಲವು ಪ್ರಯಾಣಿಕರಿಗೆ ಗಾಯ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಸಕಲೇಶಪುರ ತಾಲೂಕಿನ ವೆಂಕಟಿಹಳ್ಳಿ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ....
ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರಿಗೆ ನ್ಯಾಯ ಸಮ್ಮತ ಪರಿಹಾರ ನೀಡಲು ಪಟ್ಟು: ಡಿಸಿ ಕಚೇರಿ ಬಳಿ ರೈತ ಮುಖಂಡರ ಪ್ರತಿಭಟನೆ
ಮೈಸೂರು: 66/11 ಕೆ.ವಿ. ಮತ್ತು 220 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ನಿಗಮದ ತಂತಿ ರೈತರ ಜಮೀನಿನ ಮೇಲೆ ಹಾದು ಹೋಗಿರುವುದರಿಂದ ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ...
ಬಿ.ಸರೋಜಾದೇವಿ ಮೇರು ನಟಿ: ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಿ.ಸರೋಜಾದೇವಿ ಒಬ್ಬ ಮೇರು ನಟಿ. ಪಂಚಭಾಷೆ ತಾರೆಯಾಗಿ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ ಎಂದು ಮುಖ್ಯಮಂತ್ರಿ...
ದೇವನಹಳ್ಳಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಕೈಬಿಟ್ಟಿದ್ದೇವೆ: ಸಿಎಂ
ಬೆಂಗಳೂರು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಭಾಂಗಣದಲ್ಲಿ...
KKRTC ವೋಲ್ವೋ ಬಸ್ – ಟ್ರಕ್ ನಡುವೆ ಭೀಕರ ಅಪಘಾತ: ಚಾಲಕನ ಕಾಲಿಗೆ ತೀವ್ರಪೆಟ್ಟು
ಚಿತ್ರದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೋಲ್ವೋ ಬಸ್ ಹಾಗೂ ಟ್ರಕ್ ನಡುವೆ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕನ ಕಾಲು ಮುರಿದಿದ್ದು,...
KSRTC “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ”: ನೌಕರರಿಗೆ 38 ತಿಂಗಳ ಹಿಂಬಾಕಿ, 2024ರ ವೇತನ ಹೆಚ್ಚಳ ಮಾಡಲಾಗದಿದ್ದರೂ ಸರ್ಕಾರದಿಂದ “ಶಕ್ತಿಯ” ಒಣಾಡಂಬರ..!
ಬೆಂಗಳೂರು: "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಅಂದಂಗೆ ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ...