Please assign a menu to the primary menu location under menu

ಕೃಷಿನಮ್ಮರಾಜ್ಯರಾಜಕೀಯ

ಒಕ್ಕಲಿಗರಿಗೆ ಮಾರಕವಾಗಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ..!!

ವಿಜಯಪಥ ಸಮಗ್ರ ಸುದ್ದಿ

” ಒಕ್ಕಲಿಗರಿಲ್ಲದ ಊರು, ಮಕ್ಕಳಿಲ್ಲದ ಮನೆ ಉಪಯೋಗವಿಲ್ಲದ ಸಂಪತ್ತು” ಎನ್ನುವ ಹಿರಿಯರ ನಾಣ್ಣುಡಿಯಂತೆ, ತಾನು ಬೆಳೆದ ಬೆಳೆಯನ್ನು ಸಮಾಜಕ್ಕೆ ನೀಡಿ, ತಿನ್ನುವ ಅನ್ನವನ್ನು ಸಮಾಜಕ್ಕೆ ಹಂಚಿ, ಸರ್ವರನ್ನು ತನ್ನವರೆಂದು ಅಪ್ಪಿಕೊಳ್ಳುವ ಒಕ್ಕಲಿಗರ ಬದುಕು ಶತ ಶತಮಾನಗಳಿಂದಲ್ಲೂ ಒಂದು ರೀತಿಯಲ್ಲಿ ಕೆಂಡ ಮುಚ್ಚಿದ ಅಜ್ಞಾತವಾಸವೇ ಆಗಿದೆ.

ಇತೀಚೆಗೆ ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯೂ ಕೂಡ ಮೇಲ್ನೋಟಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆದರೂ ಕೂಡ ಅಂತರಾಳದಲ್ಲಿ ಒಕ್ಕಲಿಗರ ಅಸ್ತಿತ್ವವೇ ಬುಡಮೇಲಾಗುವುದು ಕಂಡುಬರುತ್ತಿದೆ. ಬೆಂಗಳೂರು, ವಿಧಾನಸೌಧ, ವಿಧಾನಸೌಧ ಕಟ್ಟಿದ ಒಕ್ಕಲಿಗರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಗಿಸುವ ಹುನ್ನಾರ ಕಂಡುಬರುತ್ತಿದೆ.

ಒಕ್ಕಲಿಗರು ಈ ವರದಿಯನ್ನು ವಿರೋಧಿಸಲು ಕಾರಣವೇನು …??
1. ಸಂಪೂರ್ಣ ಮಾಹಿತಿಯ ಕೊರತೆ: ಕಾಂತರಾಜ್ ಆಯೋಗವು 2014 -15ರಲ್ಲಿ ಸಿದ್ದಪಡಿಸಿದ 55 ಅಂಶಗಳ ನಮೂನೆ (ಫಾರ್ಮ್ಯಾಟ್) ಸ್ವರೂಪವು ಅವೈಜ್ಞಾನಿಕವಾಗಿದ್ದು, ಒಕ್ಕಲಿಗರನ್ನು ಹಲವು ಉಪಪಂಗಡಗಳಾಗಿ ಮಾರ್ಪಡಿಸಿ (ಗಂಗಡಕಾರ ಒಕ್ಕಲಿಗ, ಮರಸು ಒಕ್ಕಲಿಗ, ದಾಸ ಒಕ್ಕಲಿಗ, ಹೊಸ ದೇವರು ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ) ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಜತೆಯಲ್ಲಿ ಯಾವುದೇ ಮನೆಮನೆಗೂ ಸರ್ವೆ ಮಾಡಿ ಮಾಹಿತಿಯನ್ನ ಪಡೆಯದೇ ಇರುವದರಿಂದ, ಇದು ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರ ಮಾಹಿತಿ ಪೂರ್ಣವಾಗಿ ಆಯೋಗಕ್ಕೆ ಸಿಕ್ಕಿರುವುದಿಲ್ಲ.

2. ಸದ್ಯದ ಪರಿಸ್ಥಿತಿಗೆ ವಿರುದ್ಧವಾದ ವರದಿ: ಆಯೋಗವು ಹಮ್ಮಿಕೊಂಡಿದ್ದ ಸಮೀಕ್ಷೆಯು 2024ರ ಪರಿಸ್ಥಿತಿಗೆ ಸಂಬಂಧಪಟ್ಟಿರುತ್ತೆ. ಕಳೆದ 10 ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಮುಖ್ಯವಾಗಿ, ಜನಸಂಖ್ಯೆಯ ಹೆಚ್ಚಳ (2014ರಲ್ಲಿ ಸುಮಾರು 6.5 ಕೋಟಿ, 2024ರಲ್ಲಿ ಸುಮಾರು 7.5 ಜನಸಂಖ್ಯೆ) ಶೈಕ್ಷಣಿಕ, ಆರ್ಥಿಕ ಸ್ಥಿತಿಗಳು, ಜನರ ಜೀವನ ಮಟ್ಟ ಎಲ್ಲವೂ ಕೂಡ ಬದಲಾವಣೆ ಆಗಿರುವುದರಿಂದ ಕಾಂತರಾಜ ಆಯೋಗದ ವರದಿಯು ಅವೈಜ್ಞಾನಿಕವಾಗಿದೆ.

3. ಕಾಲಮಿತಿಯೊಳಗೆ ಸಲ್ಲಿಕೆಯಾಗದ ವರದಿ: ಸರ್ಕಾರಿ ಆದೇಶ ಸಂಖ್ಯೆ: ಹಿಂವಕ 271/BCA 2013(Part 1) ದಿನಾಂಕ 23-01-2014 ರಂದು ಹೊರಡಿಸಿದ ಆದೇಶದಂತೆ 30 ದಿನದ ಒಳಗೆ ವರದಿಸಲ್ಲಿಸಲು ಸೂಚಿಸಿತು ಆದರೆ 10 ವರ್ಷಗಳಾದರೂ ಕೂಡ ವರದಿ ಸಲ್ಲಿಕೆ ಮಾಡದೇ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು, ಹಿಂದುಳಿದ ವರ್ಗಗಳ ಮತ ಕ್ರೂಡೀಕರಿಸುವ ಉದ್ದೇಶದಿಂದ ಜಯಪ್ರಕಾಶ್ ಹೆಗ್ಡೆ ಅವರಿಗೆ ಅಧಿಕಾರದ ಅವಧಿಯನ್ನು ನೆಪಮಾತ್ರಕ್ಕೆ ವಿಸ್ತರಿಸಿ ಕಾಂತರಾಜ್ ಆಯೋಗ ಸಿದ್ಧಪಡಿಸಿದ ವರಿದಿಯನೇ ಸ್ವೀಕಾರ ಮಾಡಲು ಹೊರಟಿರುವುದು ರಾಜಕೀಯ ಪ್ರತಿಷ್ಠೆಗೆ ವಿನಃ ಯಾವ ಜನಾಂಗಕ್ಕೂ ನ್ಯಾಯ ಒದಗಿಸುವ ಉದ್ದೇಶ ಇರುವುದಿಲ್ಲ.

4. ಜಾತಿ ಗಣತಿ ಮಾಡಿಸಿರುವುದು: ಕಾಂತರಾಜ ಆಯೋಗವು ಕೇವಲ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಮಾತ್ರ ಪಡೆಯದೇ ಜಾತಿ ಗಣತಿ ಮಾಡಿಸಿರುವುದು ಕಂಡು ಬಂದಿದೆ, ಸಂವಿಧಾನದ ಆರ್ಟಿಕಲ್ 271 ಷೆಡ್ಯೂಲ್ 7 ರಲ್ಲಿ ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ (Central List) ಇದೆ. ಆದರೆ, ರಾಜ್ಯ ಸರ್ಕಾರ ಕಾನೂನನ್ನು ಗಾಳಿಗೆ ತೂರಿ, ಜಾತಿ ಗಣತಿ ಮಾಡಿಸಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಕಾಂತರಾಜ್ ಆಯೋಗ / ಜಯಪ್ರಕಾಶ್ ಹೆಗ್ಡೆ ಅವರು ನೀಡಿರುವ ವರದಿಯು ಕಾನೂನುಬಾಹಿರವಾಗಿದೆ.

5. ಕಾಂತರಾಜ ವರದಿಯ ಕಾಲಾವಧಿ: ಕರ್ನಾಟಕ ಹಿಂದುಳಿದ ವರ್ಗಗಳ ಕಾಯಿದೆ 1995 ಕಲಂ 9(2) ಹಾಗೂ ಹೆಗ್ಡೆ ಯವರು ನೀಡಿರುವ ವರದಿಯು ಈ ದಿನಕ್ಕೆ ಅಪ್ರಸ್ತುತವಾಗಿದೆ.

6. ಜಯಪ್ರಕಾಶ್ ಹೆಗ್ಡೆಯವರ ಹೇಳಿಕೆಗಳು: ಇತೀಚೆಗೆ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಯವರು ಪತ್ರಿಕಾ ಮಾಧ್ಯಮದ ಮೂಲಕ ಕಾಂತರಾಜ ಆಯೋಗದ ವರದಿಯ ಮೂಲ ಪ್ರತಿಗಳು ಕಳೆದು ಹೋಗಿವೆ ಎಂಬ ಹೇಳಿಕೆ ಸರ್ಕಾರದ ಮೇಲೆ ಕಪ್ಪು ಚುಕ್ಕೆಯಾಗಿದೆ. ಇದು ಬಹಳ ಅನುಮಾನಗಳಿಗೆ ಕಾರಣವಾಗಿದೆ ಮತ್ತು ಅವರು ನೀಡಿರುವ ವರದಿಯು ಕೂಡ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

7. ಆಯೋಗದ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೆ ಇರುವುದು: ಈ ಸಮೀಕ್ಷೆಯಲ್ಲಿ ಇರುವ ಲೋಪ ದೋಷಗಳನ್ನು ಮನಗೊಂಡು ಅಂದಿನ ಹಿಂದುಳಿದ ವರ್ಗಗಳ ಕಾರ್ಯದರ್ಶಿಗಳು ಸಹಿ ಮಾಡದೇ ಇರುವುದು ಕೂಡ ತಾರ್ಕಿಕವಾಗಿ ಸಮೀಕ್ಷೆಯಲಿರುವ ಮಾಹಿತಿಯು ಅಸಮರ್ಪಕವಾಗಿದೆ ಎಂದು ಸಾಬೀತಾಗಿದೆ.

8. ಪತ್ರಿಕಾ ವರದಿಗಳು: 2015 ರಲ್ಲಿ ಪ್ರಕಟಣೆಗೊಂಡ ಪತ್ರಿಕಾ ವರದಿಗಳು, ಸಮೀಕ್ಷೆಗೆ ಸಂಬಂಧಪಟ್ಟಂತೆ ಯಾವುದೇ ತರಬೇತಿ ನೀಡದೆ ಶಾಲಾ ಮಕ್ಕಳಿಂದ ಪ್ರತಿ ವರದಿಗೆ 5 ರೂ. 10 ರೂ.ವರಿಗೆ ಕೊಟ್ಟು, ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ. ಆ ಮಾಹಿತಿಯ ಪ್ರಕಾರ ಆಯೋಗ ನಿಖರವಾಗಿ, ಸಮಂಜಸವಾಗಿ ಹಾಗೂ ವೈಜ್ಞಾನಿಕವಾಗಿದೆ ಮಾಡದೇ ಇರುವುದು ತಿಳಿದು ಬರುತ್ತದೆ.

9. ಹೊಸ ಸಮೀಕ್ಷೆಗೆ ಆಗ್ರಹ: ಈ ಮೇಲಿನ ಎಲ್ಲ ಅಂಶಗಳನ್ನ ಗಮನಿಸಿದಾಗ ಬಹುಮುಖ್ಯವಾಗಿ ಯಾವುದೇ ಸಮರ್ಪಕ ಮಾಹಿತಿ ಇಲ್ಲದೆ ಇರುವುದು, ವಸ್ತುನಿಷ್ಠವಾಗಿ, ನಿಖರವಾದ ಮಾಹಿತಿಯನ್ನು ಪಡೆಯದೇ ಇರುವದರಿಂದ ಹೊಸ ಸಮೀಕ್ಷೆ ಮಾಡುವ ಮೂಲಕ ಸರ್ವ ಜನರಿಗೂ ನ್ಯಾಯ ಒದಗಿಸಬೇಕಾಗಿದೆ.

10. ಹೊಸ ಜಾತಿಗಳ ಸೇರ್ಪಡೆ: ಕಾಂತರಾಜ ಆಯೋಗವು ಮಾಧ್ಯಮಗಳ ವರದಿಯಂತೆ ಸುಮಾರು 102 ಜಾತಿಗಳನ್ನು ಸೇರ್ಪಡೆ ಮಾಡಿ, ಆ ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಿಸಲಾಗಿದೆ. ಯಾವುದೇ ಜಾತಿ ಸ್ಥಾನಮಾನವಿಲ್ಲದ ಹಲವು ಜಾತಿಗಳನ್ನು ಸೃಷ್ಟಿ ಮಾಡಿ, ಬಹುಸಂಖ್ಯಾತ ಜನಾಂಗವನ್ನು ಒಡೆಯುವ ಹುನ್ನಾರವಾಗಿದೆ.

ಈ ಸಮೀಕ್ಷೆಯು ಒಕ್ಕಲಿಗ ಜನಾಂಗಕ್ಕೆ ಮರಣ ಶಾಸನವಾಗಿದ್ದು, ಪ್ರಾಮಾಣಿಕವಾಗಿ, ನಿಖರವಾಗಿ, ವಸ್ತುನಿಷ್ಠವಾಗಿ ಸಮೀಕ್ಷೆಯನ್ನು ಮಾಡದೇ ಒಕ್ಕಲಿಗರಿಗೆ ನ್ಯಾಯಯುತವಾಗಿ ಸಿಗಬೇಕಿರುವ ರಾಜಕೀಯ ಸ್ಥಾನಮಾನಗಳು, ಶೈಕ್ಷಣಿಕ ಸೌಲಭ್ಯಗಳು, ಉದ್ಯೋಗಾವಕಾಶಗಳು ಈ ಕಪೋಲ ಕಲ್ಪಿತ ವರದಿಯಿಂದ ವಂಚಿತರಾಗಲಿದ್ದಾರೆ.

ಸರ್ವರಿಗೂ ಸಮಬಾಳು ಎನ್ನುವಂತೆ ಕೆಲಸ ಮಾಡುವ ಸರ್ಕಾರ, ಪ್ರಾಮಾಣಿಕವಾಗಿ, ನಿಖರವಾಗಿ ಮತೊಮ್ಮೆ ಸಮೀಕ್ಷೆ ಮಾಡುವ ಮೂಲಕ ಸರ್ವರಿಗೂ ನ್ಯಾಯವನ್ನ ಒದಗಿಸಿಕೊಡಲಿ.

ಲೇಖಕರು:
l ನಂಜೇಗೌಡ ನಂಜುಂಡ
ಸಂಸ್ಥಾಪಕ ಅಧ್ಯಕ್ಷರು: ಒಕ್ಕಲಿಗ ಯುವ ಬ್ರಿಗೇಡ್ ಮತ್ತು NRI ಒಕ್ಕಲಿಗ ಬ್ರಿಗೇಡ್

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ