NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಸಂಘಟನೆಗಳ ಕೆಲ ಮುಖಂಡರಿಗೆ ನೌಕರರ ಸುಲಿಗೆ ಮಾಡುವುದೇ ಪ್ಲಾನ್‌!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳು ಎಂದು ಹೇಳಿಕೊಳ್ಳುವ AITUC, ಕೂಟ ಸೇರಿದಂತೆ ಇತರ ಸಂಘಟನೆಗಳ ಕೆಲ ಮುಖಂಡರು ಸಾರಿಗೆ ನೌಕರರಿಗೆ ಆಸೆ ಹುಟ್ಟಿಸಿ ಸುಲಿಗೆ ಮಾಡುವುದರಲ್ಲೇ ನಿರತರಾಗಿದ್ದಾರೆ.

ಆದರೆ, ಈವರೆಗೂ ನೌಕರರ ಪರವಾದ ಯಾವುದೇ ಒಂದೇ ಒಂದು ಕೆಲಸವನ್ನು ಸಮರ್ಪಕವಾಗಿ ಮಾಡಿಲ್ಲ. ಇನ್ನು ಈ ಕೆಲಸ ಆಗಬೇಕು ಎಂದರೆ ನೀವು ಆರ್ಥಿಕವಾಗಿ ನಮಗೆ ಬೆಂಬಲ ನೀಡಿ, ಒಂದು ತಿಂಗಳ ವೇತನ ಹೆಚ್ಚಳದ ಹಣವನ್ನು ನಮಗೆ ಕೊಡಿ ನಾವು ನಿಮ್ಮ ಪರವಾಗಿ ಹೋರಾಡಿ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಪುಂಗಿ ಊದುವ ಮೂಲಕ ಯಾಮಾರಿಸಿಕೊಂಡು ಬರುತ್ತಿದ್ದಾರೆ.

ಇತ್ತ 148/2005 ಪ್ರಕರಣದ ತೀರ್ಪಿನಂತೆ ನಿಮಗೆ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವೇತನ ಕೊಡುವುದಕ್ಕೆ ಒಪ್ಪಿದರೆ ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನ ಪಡೆಯುತ್ತೀರಿ. ಈಗ ಕಾಲ ಕೂಡಿ ಬಂದಿದೆ. ಆದರೆ, ಈ ಬಗ್ಗೆ ಹೋರಾಟ ಮಾಡುವುದಕ್ಕೆ ನಮ್ಮ ಬಳಿ ಹಣವಿಲ್ಲ, ಹೀಗಾಗಿ ಸಮಸ್ತ ನೌಕರರು ದೇಣಿಗೆ ನೀಡಿ ಎಂದು ನಾಚಿಗೆ ಬಿಟ್ಟು ಕೇಳುತ್ತಾರೆ.

ಅಂದರೆ, ಈ ಹಿಂದಿನಿಂದಲೂ ಇದೇ ರೀತಿ ಹೇಳಿಕೊಂಡು ಹೇಳಿಕೊಂಡು ನೌಕರರಿಂದ ಹಗಲು ದರೋಡೆ ಮಾಡಿಯೇ ಇವರು ಜೀವನ ಸಾಗಿಸುತ್ತಿದ್ದಾರೆ. ಆದರೂ ಈವರೆಗೂ ನೌಕರರಿಗೆ ಅನುಕೂಲಕರವಾಗುವಂತ ಯಾವುದೆ ಕೆಲಸವನ್ನು ಸಮರ್ಪಕವಾಗಿ ಮಾಡಿಲ್ಲ. ಇನ್ನು ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಗಳನ್ನು ಬಿಟ್ಟರೆ ಇವರು ಇತರ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಈವರೆಗೂ ಈ ರೀತಿಯ ಸಹಾಯ ಮಾಡಿ ಎಂದು ಹೇಳಿಲ್ಲ.

ಹೌದು! ಇಲ್ಲಿ ಚಾಲನಾ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಷ್ಟೇ ವೇತನ ಇತರ ಸೌಲಭ್ಯ ಕೊಡಿಸಲು ಹೋರಾಡುತ್ತಿದ್ದಾರೆಯೇ ಈ ಸಂಘಟನೆಗಳ ಮಹಾನ್‌ ನಾಯಕರು. ಒಮ್ಮೆ ವೇತನ ಹೆಚ್ಚಳವಾದರೆ ಎಲ್ಲ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಇತರ ಕಚೇರಿ ಸಿಬ್ಬಂದಿಗಳಿಗೂ ಹೆಚ್ಚಳವಾಗುವುದಿಲ್ಲವೇ? ಹೀಗಿದ್ದಾಗಲೂ ಏಕೆ ಬರಿ ಚಾಲನಾ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳಷ್ಟೇ ಈ ಸಂಘಟನೆಗಳಿಗೆ ದೇಣಿಗೆ ಕೊಡಬೇಕು? ಅಧಿಕಾರಿಗಳಿಂದಲೂ ಸಂಗ್ರಹಿಸಬಹುದಲ್ಲವೇ?

ಇನ್ನು 2024ರ ಜನವರಿ 23ರಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ಮಾಡಿ ಅಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರನ್ನು ಸನ್ಮಾನಿಸುವುದಕ್ಕೆ ಈ ಕೂಟದ ಜತೆ ಸೇರಿಕೊಂಡಿರುವ ಸಮಾನ ಮನಸ್ಕರ ವೇದಿಕೆಯ ಕೆಲ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಓಕೆ ಮಾಡಿ. ಆದರೆ, ಸಾರಿಗೆ ನೌಕರರಿಗೆ ಈ ಮೂವರಿಂದ ಈವರೆಗೂ ಎಷ್ಟು ಪ್ರಯೋಜನವಾಗಿದೆ? ಸಾರಿಗೆ ನಿಗಮಗಳು ಮತ್ತು ನೌಕರರ ಸಮಸ್ಯೆಗೆ ಇವರು ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎಂದು ಸ್ವಲ್ಪ ಹೇಳುತ್ತೀರಾ?

ಈ ತ್ರಿಮೂರ್ತಿಗಳು ಸಾರಿಗೆ ನಿಗಮಗಳಿಗೆ ಕೊಡಬೇಕಿರುವ ಬಾಕಿ 4500 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಇನ್ನು 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚವಾಗಿರುವುದರ ಅರಿಯರ್ಸ್‌ಅನ್ನು ಈವರೆಗೂ ಕೊಡುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಿರುವಾಗ ಈ ಸನ್ಮಾನ, ಸಾರಿಗೆ ಸಂಭ್ರಮ ಮಾಡುತ್ತಿರುವುದು ಏತಕ್ಕಾಗಿ?

ಇನ್ನು ಈ ಸಾರಿಗೆ ಸಂಭ್ರಮ ಮಾಡುವುದಕ್ಕೆ ಸುಮಾರು 50 ಲಕ್ಷ ರೂಪಾಯಿ ಖರ್ಚಾಗಲಿದೆ. ಹೀಗಾಗಿ ಚಾಲನಾ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳಿಂದ ಒಂದೊಂದು ಘಟಕದಲ್ಲಿ ಕನಿಷ್ಠ 30 ಸಾವಿರ ರೂಪಾಯಿವರೆಗೆ ಹಣ ಸಂಗ್ರಹಿಸುವಂತೆ ಕೆಲ ಕೂಟದ ಪದಾಧಿಕಾರಿಗಳಿಗೆ ಕೂಟ ಅದ್ಯಕ್ಷರು ತಿಳಿಸಿದ್ದಾರೆ ಎನ್ನಲಾಗಿದೆ.

ಅಂದರೆ, ಸಾರಿಗೆ ನಿಗಮಗಳಲ್ಲಿ ಬರಿ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳಿಗಷ್ಟೇ ವೇತನ ಹೆಚ್ಚಳವಾಗುವುದು ಮತ್ತು ಸಮಸ್ಯೆ ಇರುವುದೇ ಬೇರೆ ಯಾರಿಗೂ ಇಲ್ಲವೇ?. ಹೋರಾಟದ ಜತೆಗೆ ಮಂತ್ರಿ ಮಹೋದಯರಿಗೆ ಸಮಾನ್ಮ ಮಾಡದಿದ್ದರೂ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಈ ಮಂತ್ರಿ ಮಹೋದಯರು ವೇತನ ಹೆಚ್ಚಳ ಮಾಡಿಕೊಡುತ್ತಿದ್ದಾರೆಯೇ? ಇಲ್ಲವಲ್ಲ ಅವರಿಗೂ ನೌಕರರಿಗಾದಾಗಲೇ ವೇತನ ಇತರ ಸೌಲಭ್ಯಗಳು ದೊರೆಯುವುದು. ಆದರೂ ಅವರು ಒಂದೇಒಂದು ನಯಪೈಸೆಯನ್ನು ಖರ್ಚು ಮಾಡದೆ ನೌಕರರ ಹೋರಾಟದ ಫಲವನ್ನಷ್ಟೇ ಪಡೆಯುತ್ತಿದ್ದಾರೆ.

ಅಂದರೆ ಕೆಲ ಸಾರಿಗೆ ಸಂಘಟನೆಗಳ ಮಹಾನ್‌ ನಾಯಕರು ಏಕೆ ಡಿಸಿ, ಡಿಟಿಒ ಸೇರಿದಂತೆ ಇತರ ಅಧಿಕಾರಿಗಳು ಸಿಬ್ಬಂದಿಗಳ ಬಳಿ ಹೋಗಿ ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ದೇಣಿಗೆ ಕೊಡಿ ಎಂದು ಕೇಳುತ್ತಿಲ್ಲ. ಅಂದರೆ ನಿಮ್ಮ ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ ಅನ್ನುವುದು ಅಧಿಕಾರಿಗಳಿಗೆ ಗೊತ್ತಾಗಿದೆ ಎಂದು ಹೋಗುತ್ತಿಲ್ಲವೇ?

ಇನ್ನು ಇಲ್ಲಿ ಚಾಲನಾ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಅಮಾಯಕರು ಅದಕ್ಕೆ, ಇತ್ತ ಕೆಲ ಭ್ರಷ್ಟ ಅಧಿಕಾರಿಗಳನ್ನೂ ಇವರೆ ಸಾಕಬೇಕು. ಜತೆಗೆ ಸಾರಿಗೆಯ ಬಹುತೇಕ ಎಲ್ಲ ಸಂಘಟನೆಗಳ ಮುಖಂಡರನ್ನು ಇವರೆ ಪೋಷಿಸಬೇಕು ಇಲ್ಲದಿದ್ದರೆ ಈ ಸಂಘಟನೆಗಳು ಧೂಳಿಪಟವಾಗುತ್ತವೆ. ಹೀಗಾಗಿ ಈ ನೌಕರರಿಂದ ಹಣವನ್ನು ಪಡೆದು ಬೀದಿಗೂ ತಂದು ನಿಲ್ಲಿಸಿ ಕೈ ಬಿಟ್ಟುಬಿಡುತ್ತೀರಿ ಅಲ್ವಾ?

ಇನ್ನಾದರೂ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಇಂಥ ಭ್ರಷ್ಟರು, ಮೋಸಗಾರರು ನಿಮ್ಮನ್ನು ಯಾಮಾರಿಸುತ್ತಲೆ ಇರುತ್ತಾರೆ. ಹೀಗಾಗಿ ನಿಮಗೆ ನಾನು ಕೊಡುತ್ತಿರುವ ದೇಣಿಗೆಯಿಂದ ನನಗೆ ಮತ್ತು ನಮ್ಮ ಸಹೋದ್ಯೋಗಿಗಳಿಗೆ ಒಳ್ಳೆಯದಾಗಲಿದೆ ಎನಿಸಿದರೆ ಕೊಡಿ. ಇಲ್ಲ ಕಡ್ಡಿ ಮುರಿದಂತೆ ನೀವು ಉತ್ತರಕೊಟ್ಟು ಕಳುಹಿಸಿ. ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ಎಂದು ಪ್ರಜ್ಞಾವಂತ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ