ನಮ್ಮಜಿಲ್ಲೆಶಿಕ್ಷಣ

ಪರೀಕ್ಷಾ ಕೇಂದ್ರದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ (SSLC Exam) ಇಂದು ಆರಂಭವಾಗಿ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ಈ ನಡುವೆ ಪರೀಕ್ಷಾ ಕೇಂದ್ರದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿಯನ್ನು  ತುರ್ತಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿಯ ಸರ್ಕಾರಿ ಪಿಯು ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ನಾಝಿಯಾ ಬಾನು ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ. ಪರೀಕ್ಷೆ ಆರಂಭವಾದ ಕೆಲ ಕ್ಷಣದಲ್ಲೇ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹೊನ್ನಾಳಿ ಜನತಾ ಉರ್ದು ಹೈಸ್ಕೂಲ್ ವಿದ್ಯಾರ್ಥಿನಿ ನಾಝಿಯಾ ಭಾನು ಅವರನ್ನು ಕೂಡಲೇ ಹೊನ್ನಾಳಿ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ವಿದ್ಯಾರ್ಥಿನಿ ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾಳೆ.

ಆರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್​ ನೀಡದ HM: ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿರುವ ಮಾಜಿ ಶಾಸಕ ಮನೋಹರ ಐನಾಪೂರ ಒಡೆತನದ ಡಿಬಿಇ ಸಂಸ್ಥೆಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ಆರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿಲ್ಲ. ಹಾಗಾಗಿ ಅವರು ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾಗಿದೆ. ನ್ಯಾಯಕ್ಕಾಗಿ ಇಬ್ಬರು ವಿದ್ಯಾರ್ಥಿಗಳು ಡಿಸಿ ಕಚೇರಿಗೆ ಆಗಮಿಸಿದ ಘಟನೆ ನಡೆದಿದೆ.

ಶಾಲೆಯ ವಿದ್ಯಾರ್ಥಿಗಳಾದ ದಿನೇಶ ಗೊಡೇಕರ, ರಂಜಾನ್ ಸಿಂದಗಿ, ರೋಷನ್ ರಾಠೋಡ್, ಅಜಿತ್ ಸಣ್ಣಕ್ಕಿ, ಸುವರ್ಣಾ ಹೊಟಕರ, ಅಲ್ತಾನ್ ಹತ್ತರಕಿಹಾಳ ಎಂಬುವವರಿಗೆ ಹಾಲ್ ಟಿಕೆಟ್ ನೀಡದೆ ಶಾಲಾ ಮುಖ್ಯೋಪಾಧ್ಯಾಯರು ಕಾಡಿದ್ದಾರೆ.

ಇದನ್ನು ಪ್ರಶ್ನಿಸಿ ನಿನ್ನೆ ಪೋಷಕರು ಶಾಲಾ ಮುಖ್ಯೋಪಾಧ್ಯಾಯ P.W.ರಾಠೋಡ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮುಖ್ಯೋಪಾಧ್ಯಾಯ ರಾಠೋಡ್ ನಿಮ್ಮ ಮಕ್ಕಳ ಹಾಜರಾತಿ ಶೇಕಡಾ 75 ಕ್ಕಿಂತ ಕಡಿಮೆ ಇದೆ ಹಾಗಾಗಿ ನಾನು ಪರೀಕ್ಷಾ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದಿದ್ದಾರೆ.

ಇದೀಗ ಎಸ್​ಎಸ್​ಎಲ್​ಸಿ 1 ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ 2 ಕ್ಕೆ ಅನುಕೂಲ ಮಾಡಿಕೊಡೋದಾಗಿ ಪೋಷಕರಿಗೆ ಲಿಖಿತ ಪತ್ರ ನೀಡಿಲ್ಲ. ಆದರೆ ಇವರ ಆರೋಪವನ್ನು ವಿದ್ಯಾರ್ಥಿಗಳು ಪೋಷಕರು ಅಲ್ಲಗಳೆದಿಲ್ಲ. ಹಾಜರಾಗಿ ಕಡಿಮೆಯಾಗೋ ಪ್ರಶ್ನೆ ಬರಲ್ಲ. ನಾವೆಲ್ಲಾ ರೆಗ್ಯೂಲರ್ ಆಗಿ ಕ್ಲಾಸ್​ಗೆ ಹಾಜರಾಗಿದ್ದೇವೆ. ಆದರೆ ಶಾಲಾ ಸಿಬ್ಬಂದಿ ನಮ್ಮ ಪರೀಕ್ಷೆ ಅರ್ಜಿಯನ್ನು ಹಾಕದೇ ನಿರ್ಲಕ್ಷ್ಯ ಮಾಡಿದ್ಧಾರೆ. ಅದನ್ನು ಮರೆ ಮಾಚಲು ಹಾಜರಾತಿ ಕಡಿಮೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸುಳ್ಳು ಎಂದು ಅಸಮಾಧಾನ ಹೊರ ಹಾಕಿದ್ದಾರೆ. ನಮಗೆ ಜಿಲ್ಲಾಧಿಕಾರಿಗಳು ನ್ಯಾಯ ನೀಡಬೇಕೆಂದು ಡಿಸಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

Deva
the authorDeva

Leave a Reply

error: Content is protected !!