ಬೆಂಗಳೂರು: ತಿರುಪತಿ ಗಿರಿವಾಸ, ಶಂಖಚಕ್ರಧಾರಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ- ಸುಧಾಮೂರ್ತಿ ದಂಪತಿ ನೀಡಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಬಹಳಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಇನ್ನು ಈ ದಂಪತಿ ಮೊದಲಿನಿಂದಲೂ ಆರ್ಥಿಕವಾಗಿ ಸದೃಢರಾಗಿದ್ದರೂ ಕೂಡ ಅತ್ಯಂತ ಸರಳ ಜೀವನವನ್ನು ಇಂದಿಗೂ ನಡೆಸುತ್ತಲೇ ಅನೇಕರಿಗೆ ಮಾದರಿಯಾಗಿದ್ದಾರೆ.
ಸುಧಾಮೂರ್ತಿ ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ನಲವತ್ತು ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.