ಬಿಜೆಪಿ ಸೇರುತ್ತಾರ ಸುಪ್ರೀಂಕೋರ್ಟ್, ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು?
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಬಾ ಚುನಾವಣೆ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಉತ್ಸಾಹದಿಂದ ಮತಬೇಟೆಯಲ್ಲಿ ತೊಡಗಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರು ನೂರಕ್ಕೆ 200% ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಅದರಲ್ಲೂ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಜತೆಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಖಾತೆ ತೆರೆಯಲಿದೆ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದರು.
ಇನ್ನು ಈ ಎಲ್ಲವನ್ನು ಗಮನಿಸಿದರೆ ಈ ಬಾರಿಯೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲೂ ಹೇಳಿಕೆ ನೀಡಿದ್ದರು. ಇದರಿಂದ ಉತ್ತೇಜಿತರಾಗಿರುವ ಬಿಜೆಪಿಯ ಹಲವು ನಾಯಕರು ಶಿವರಾಜು ಅವರನ್ನು ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದಾರೆ ಎನ್ನಲಾಗಿದೆ.
ಅದರಂತೆ ವಕೀಲ ಶಿವರಾಜು ಅವರು ಕೂಡ ದೊಡ್ಡಮಟ್ಟದಲ್ಲಿ ಪಕ್ಷ ಸೇರ್ಪಡೆ ಬಗ್ಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದರ ಇದರ ಬಗ್ಗೆ ಶಿವರಾಜು ಅವರು ಯಾವುದೇ ಅಧಿಕೃತ್ ಹೇಳಿಕೆ ನೀಡಿಲ್ಲ.
ಇನ್ನು ದೇಶದಲ್ಲಿ ಬಿಜೆಪಿಯ ಆಡಳಿತದಿಂದ ಜನರು ಪ್ರೇರೇಪಿತಗೊಂಡು ಮೋದಿಯವರನ್ನು ಮೊಗದೊಮ್ಮೆ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ ಎಂದು ಶಿವರಾಜು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈವರೆಗೂ ರಾಜ್ಯ ಬಿಜೆಪಿಯ ಹಲವಾರು ಹಿರಿಯ ವ್ಯಕ್ತಿಗಳ ಜತೆ ಒಡನಾಟ ಹೊಂದಿದ್ದು, ಪಕ್ಷದ ಮುಖಂಡರು ಕೂಡ ಪಕ್ಷಕ್ಕೆ ಬರಲೇಬೇಕು ಎಂದು ಆಹ್ವಾನಿಸುತ್ತಿದ್ದಾರೆ. ಆದರೆ, ನಮಗೆ ನ್ಯಾಯವಾದಿ ಆಗಿರುವುದೇ ಇಷ್ಟವಾಗಿದ್ದು, ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿರುವುದರಿಂದ ಸ್ವಲ್ಪ ಕಾಲವಕಾಶ ಕೊಡಿ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.