Thursday, October 31, 2024
NEWSಕೃಷಿನಮ್ಮಜಿಲ್ಲೆ

ತಿ.ನರಸೀಪುರ: ಬೇಜವಾಬ್ದಾರಿ ನೀರಾವರಿ ಸಚಿವರ ಬದಲಾಯಿಸಿ, ಕಾವೇರಿ ಅವಾಂತರ ತಪ್ಪಿಸಿ- ಪ್ರತಿಭಟನಾ ನಿರತ ರೈತರ ಆಗ್ರಹ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಬೇಜವಾಬ್ದಾರಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಖಾತೆ ಬದಲಾಯಿಸಿ ಕಾವೇರಿ ಅವಾಂತರ ತಪ್ಪಿಸಿ ಎಂದು ಪಟ್ಟದ ರಸ್ತೆಯಲ್ಲಿ ರೈತರು ಮಾನವ ಸರ್ಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬುಧವಾರ ಸೆ.20ರಂದು ತಿ.ನರಸಿಪುರದಲ್ಲಿ ಕಬಿನಿ ಕಾವೇರಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರ್ಪಳಿ ನಿರ್ಮಿಸಿ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದರು. ಕಬಿನಿಯಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇನ್ನು ವಚನಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ, ನೀರಾವರಿ ಸಚಿವರನ್ನು ಬದಲಾಯಿಸಬೇಕು. ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಈ ಮೆರವಣಿಗೆ ನೇತೃತ್ವ ವಹಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಅಚ್ಚುಕಟ್ಟು ಭಾಗದ ರೈತರ ಬೆಳೆಗೆ ಭತ್ತ ಬೆಳೆಯಲು ನೀರು ಕೊಡದೆ ತಮಿಳುನಾಡಿಗೆ ಹರಿಸಿ ರೈತರ ಬಲಿ ಪಡೆದ ರಾಜ್ಯ ಸರ್ಕಾರ ಕೂಡಲೇ ಎಕ್ಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜತೆ ನಿಕಟ ಬಾಂಧವ್ಯದ ನೀರಿನ ವ್ಯಾಪಾರ ಮಾಡುವ ನೀರಾವರಿ ಸಚಿವ ಶಿವಕುಮಾರ್ ಅವರ ಸಚಿವ ಖಾತೆಯನ್ನು ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು, ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ, ಆದ್ದರಿಂದ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣ ಪ್ರಾಧಿಕಾರ ಸ್ವತಂತ್ರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬೇಕು. ವಿಶೇಷ ನೀತಿ ನಿಯಮಗಳ ರಚಿಸಬೇಕು, ಈ ಪ್ರಾಧಿಕಾರಕ್ಕೆ ಕಾವೇರಿ ಅಚ್ಚುಕಟ್ಟು ಭಾಗದ ಎಲ್ಲ ರಾಜ್ಯಗಳ ಪರಿಣಿತರು ವಿಷಯ ಪರಿಣಿತರು ರೈತರು ಒಳಗೊಂಡಂತೆ ರಚನೆ ಆಗಬೇಕು ಎಂದರು.

ಪ್ರತಿಭಟನೆಗೂ ಮೊದಲು ನಡೆದ ಸಭೆಯಲ್ಲಿ ಮುಖಂಡರಾದ ಕೆ.ಎನ್. ಪ್ರಭುಸ್ವಾಮಿ , ಬನ್ನಳ್ಳಿಹುಂಡಿ ಸೋಮಣ್ಣ, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ ಪ್ರಸಾದ್ ನಾಯಕ್ ಅಪ್ಪಣ್ಣ ಸಿದ್ದರಾಜು ಪರಶಿವಮೂರ್ತಿ ಮಾತನಾಡಿದರು ಸಭೆಯಲ್ಲಿ ಪ್ರದೀಪ್ ಬೆಳಕು ಸಂಸ್ಥೆಯ ಅರವಿಂದ ಚಂದ್ರಶೇಖರ್ ಮತ್ತಿತರರು ಇದ್ದರು.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...