NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ವೇತನ ಆಯೋಗದಂತೆ ಸಂಬಳ ಹೆಚ್ಚಳಕ್ಕೆ ಕ್ರಮವಹಿಸಿ: ನೂತನ ಎಂಡಿಗೆ APSSWA ಸಂಘ ಮನವಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ನೌಕರರಿಗೆ ಬಿಡಿಎ ಹಾಗೂ ಡಿಎ ಕೊಡಲು ಆದೇಶಿಸಿದಕ್ಕೆ ಸಂಸ್ಥೆಯ ಲೆಕ್ಕಪತ್ರ ಹಾಗೂ ಸಿಬ್ಬಂದಿ ಮೇಲ್ವಿಚಾರಕ ಮತ್ತು ಅಧೀಕ್ಷಕರ ಕ್ಷೇಮಾಭಿವೃದ್ಧಿ ಸಂಘ (APSSWA) ದಿಂದ ಅಭಿನಂದಿಸಲಾಯಿತು.

ಬುಧವಾರ ಎಂಡಿ ಅಕ್ರಮ್‌ ಪಾಷ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಹೂಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.

ಇನ್ನು ಪದಗ್ರಹಣ ಅದ ತಕ್ಷಣವೇ ನೌಕರರಿಗೆ ಬಿಡಿಎ ಹಾಗೂ ಡಿಎ ಕೊಡಲು ಆದೇಶಿಸಿರುವುದು ಸಂತಸದ ಬೆಳವಣಿಗೆ ಅದಂತೆ ಮುಂದುವರಿದು ಸರ್ಕಾರದ ವೇತನ ಆಯೋಗದಂತೆ ಸಾರಿಗೆ ನೌಕರರ ವೇತನ ಹೆಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು.

ಸಂಘದಿಂದ ಮಂಡಿಸಿದ ಎಲ್ಲ ಸಂಗತಿಗಳನ್ನು ಶಾಂತಚಿತ್ತದಿಂದ ಆಲಿಸಿದ ವ್ಯವಸ್ಥಾಪಕ ನಿರ್ದೇಶಕರು ಈಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಭರಸೆ ನೀಡಿದರು.

ಈ ಸಂದರ್ಭದಲ್ಲಿ ಲೆಕ್ಕಪತ್ರ, ಸಿಬ್ಬಂದಿ ಮೇಲ್ವಿಚಾರಕ, ಅಧೀಕ್ಷಕ ಸಂಘದ ಅಧ್ಯಕ್ಷ ವಿಜಯ ಚಿಕ್ಕೋಣ, ಉಪಾಧ್ಯಕ್ಷ ಯಲ್ಲಪ್ಪ ದಳಪತಿ, ಕಾನೂನು ಸಲಹೆಗಾರ ತಿಪ್ಪೇಶ್ವರ ಅಣಜಿ, ಚಂದ್ರಾ ಹಾಗೂ ಪ್ರವೀಣ ಬಾದರದಿನ್ನಿ ಇದ್ದರು.

Deva
the authorDeva

1 Comment

  • ಹುಚ್ರು ಯಾವ್ದು ಆಗೋದಿಲ್ಲ ಕೊಟ್ಟಿರೋದು ಮಾಡ್ಕೊಂಡ್ ಇರಿ 😁

Leave a Reply

error: Content is protected !!