NEWSಕ್ರೀಡೆದೇಶ-ವಿದೇಶಸಿನಿಪಥ

ತಂದೆಗೆ ಲಘು ಹೃದಯಾಘಾತ: ಇಂದು ನಡೆಯಬೇಕಿದ್ದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನಾ ವಿವಾಹ ಮುಂದೂಡಿಕೆ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಟೀಂ ಇಂಡಿಯಾ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನಾ ಅವರ ವಿವಾಹ ಸಮಾರಂಭದವನ್ನು ಮುಂದೂಡಲಾಗಿದೆ.

ಮಂಧಾನಾ ಅವರ ಹುಟ್ಟೂರು ಸಾಂಗ್ಲಿಯಲ್ಲಿ ಇಂದು ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಮದುವೆ ನಡೆಯುತ್ತಿದ್ದಾಗ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್‌ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಈ ರೀತಿ ತಂದೆ ಅನಾರೋಗ್ಯಕ್ಕೆ ಒಳಗಾದ್ದರಿಂದ ವಿವಾಹ ಸಮಾರಂಭದವನ್ನು ಮುಂದೂಡಲಾಗಿದೆ.

ಶ್ರೀನಿವಾಸ್‌ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ ಎಂದು ತಿಳಿದ ಕೂಡಲೇ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಅಂಬುಲೆನ್ಸ್‌ ಬಂದು ಶ್ರೀನಿವಾಸ್‌ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ, ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಡೆದಿತ್ತು. ಈ ವಿವಾಹ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅರಿಶಿನ ಶಾಸ್ತ್ರದ ವಿಡಿಯೋಗಳಿಂದ ಹಿಡಿದು ವಧು ಮತ್ತು ವರನ ತಂಡಗಳ ನಡುವಿನ ಸ್ನೇಹಪರ ಕ್ರಿಕೆಟ್ ಪಂದ್ಯದವರೆಗೆ, ಮದುವೆಗೆ ಮುನ್ನ ಹಲವು ಮನಮೋಹಕ ಕ್ಷಣಗಳು ಅನಾವರಣಗೊಂಡಿವೆ.

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಸ್ಮೃತಿ ಮತ್ತು ಪಲಾಶ್ ಇಬ್ಬರೂ ಅತ್ಯಂತ ಸುಂದರವಾಗಿ, ಸಂಪೂರ್ಣವಾಗಿ ಕೊರಿಯೋಗ್ರಾಫ್ ಮಾಡಿದ ನೃತ್ಯವನ್ನು ಪ್ರದರ್ಶಿಸಿದ್ದಾರೆ.

ಈ ಮೊದಲು, ಅರಿಶಿನ ಶಾಸ್ತ್ರದಲ್ಲಿ ಸ್ಮೃತಿ ಮತ್ತು ಪಲಾಶ್ ಇಬ್ಬರೂ ಖುಷಿಯಿಂದ ನೃತ್ಯ ಮಾಡಿದ್ದು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಹ ಸಾಥ್ ನೀಡಿ, ವಧುವಿನ ತಂಡವಾಗಿ ಹೆಜ್ಜೆ ಹಾಕಿರುವ ದೃಶ್ಯಗಳು ಹೆಚ್ಚು ವೈರಲ್ ಆಗಿವೆ.

Megha
the authorMegha

Leave a Reply

error: Content is protected !!