ಗುಂಡ್ಲುಪೇಟೆ: ತಾಲೂಕಿನ ತಗ್ಗಲೂರು ಗ್ರಾಮದ ತಮ್ಮಯಪ್ಪ ಎಂಬವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ 5 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ತಗ್ನಲೂರು ಸುತ್ತಮುತ್ತ ಚಿರತೆ ಹಾವಳಿ ಇದ್ದ ಕಾರಣ ಬಫರ್ ವಲಯದ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು ಕೊನೆಗೂ ಭಾನುವಾರ ಬೆಳಗೆ, ಚಿರತೆ ಬೋನಿನಲ್ಲಿ ಬಂದಿಯಾಗಿದೆ. ಈ ಮೂಲಕ ತಾಲೂಕಿನ ತಗ್ಗಲೂರಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟು ನಿರಾಳರಾಗಿದ್ದಾರೆ.
ಜಾನುವಾರುಗಳ ಮೇಲೆ ದಾಳಿ ನಡೆಸಿ ಚಿರತೆ ಆತಂಕ ಮೂಡಿಸಿತ್ತು. ಕೊನೆಗೂ ಅರಣ್ಯ ಇಲಾಖೆಯಿರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ತಾಲೂಕಿನ ತಗ್ಗಲೂರು, ಭೋಗಯ್ಯನಹುಂಡಿ, ಕಾಳನಹುಂಡಿ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಚಿರತೆ ಉಪಟಳದಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಈಗ ನಿರಾಳರಾಗಿದ್ದಾರೆ.
ಇನ್ನು ಚಿರತೆಯನ್ನು ತಮಿಳುನಾಡು ಗಡಿಭಾಗದ ಬಂಡೀಪುರ ವಲಯದ ಅರಣ್ಯದೊಳಗೆ ಬಿಡಲಾಗಿದೆ ಎಂದು ಬಫರ್ ವಲಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
Related


Megha








