ನ್ಯೂಡೆಲ್ಲಿ: ವಿವಿಧ ಬೇಡಿಕೆಗಳ ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ ದೇಶದ ಅನ್ನದಾತರು


ನ್ಯೂಡೆಲ್ಲಿ: ದೇಶದ ರೈತರ ಬೃಹತ್ ರ‍್ಯಾಲಿ ಸೋಮವಾರ ದೆಹಲಿಯಲ್ಲಿ ನಡೆದು ಜಂತರ್ ಮಂತರ್‌ನಲ್ಲಿ ಸಮಾವೇಶಗೊಂಡಿತು.
ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯತರ ಸಂಘಟನೆಯ ಕರೆಯ ಮೇರೆಗೆ ಸಹಸ್ರಾರು ರೈತರು ಜಂತರ್ ಮಂತರ್ ನಲ್ಲಿ ಕಿಸಾನ್ ಮಹಾಪಂಚಾಯತ್ ರ‍್ಯಾಲಿ ನಡೆಸಿದರು ದೇಶದ ಹಲವು ರಾಜ್ಯಗಳಿಂದ ರೈತರು ತಂಡೋಪ ತಂಡವಾಗಿ ರ‍್ಯಾಲಿಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದರು.
ಕೃಷಿ ಉತ್ಪನ್ನಗಳಿಗೆ MSP ಗ್ಯಾರಂಟಿ ಕಾನೂನು ಸೇರಿದಂತೆ ರೈತಪರ ಬೇಡಿಕೆಗಳ ಅನುಷ್ಠಾನಕ್ಕಾಗಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ “ಕಿಸಾನ್ ಮಹಾಪಂಚಾಯತ್”ನಲ್ಲಿ ಕರ್ನಾಟಕದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಬಣದ ವಿವಿಧ ಜಿಲ್ಲೆಗಳ ನೂರಾರು ರೈತರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ (SKM) ರಾಜಕೀಯೇತರ ರಾಷ್ಟ್ರಮಟ್ಟದ ವೇದಿಕೆ ನೇತೃತ್ವದ ಜಗಜಿತ್ ಸಿಂಗ್ ದಲೆವಾಲಾ ವಹಿಸಿದರು, ಇದರಲ್ಲಿ ದೇಶದಾದ್ಯಂತದ ಮಧ್ಯ ಪ್ರದೇಶ, ಬಿಹಾರ್, ಹರಿಯಾಣ, ಪಂಜಾಬ್, ಕರ್ನಾಟಕ ಹಾಗೂ ತಮಿಳುನಾಡು ಮತ್ತಿತರ ರಾಜ್ಯಗಳ ರೈತ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡಿವೆ.
ಹೋರಾಟದ ಮುಖ್ಯ ಬೇಡಿಕೆಗಳು: 1. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಖಾತರಿ ಕಾನೂನು ಜಾರಿಯಾಗಬೇಕು. 2. ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು.
3. ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಗಳಲ್ಲಿ ಹೈನುಗಾರಿಕೆ, ಕೋಳಿ ಹಾಗೂ ಕುರಿ ಸಾಕಾಣಿಕೆ ಉದ್ಯಮಗಳನ್ನು ಹೊರಗಿಡಬೇಕು. 4. ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳುವ ನೀತಿ ಕೈಬಿಡಬೇಕು. 5. ರೈತ ಹೋರಾಟದಲ್ಲಿ ಭಾಗವಹಿಸಿದ ರೈತರ ಮೇಲಿರುವ ಎಲ್ಲಾ ಪೊಲೀಸು ದೂರುಗಳನ್ನು ರದ್ದುಪಡಿಸಬೇಕು.

ಕರ್ನಾಟಕದಿಂದ ರೈತರ ಮುಖಂಡರಾದ ಸುರೇಶ್ ಪಾಟೀಲ್ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಬಸವರಾಜ್ ಪಾಟೀಲ್, ರಮೇಶ್ ಹೂಗಾರ್, ಶಿವರಾಜ್ ನಾಯಕ್ ಮುಂತಾದವರು ಭಾಗವಹಿಸಿದರು.
Related
