NEWSನಮ್ಮರಾಜ್ಯಲೇಖನಗಳು

ಸಾರಿಗೆ ಸಂಘಟನೆಗಳ ಮುಖಂಡರ ಪ್ರಸ್ತುತ ಸ್ಥಿತಿ- ನನ್ನದೊಂದೊಂದುಕಣ್ಣು, ಕಾಲು ಹೋದರೂ ಸರಿ ಎದುರಾಳಿಗಳ ಎರಡೂ ಕಣ್ಣು, ಕಾಲುಗಳು ಹೋಗಬೇಕು!

ವಿಜಯಪಥ ಸಮಗ್ರ ಸುದ್ದಿ

ಪ್ರಸ್ತುತ ಸಾರಿಗೆ ಸಂಘಟನೆಗಳ ಬಗ್ಗೆ ಕಥೆಯೊಂದು ನೆನಪಾಗುತ್ತೆ ಹಿಂದೆ ಯುಗಾಂತರದಲ್ಲಿ ಇಬ್ಬರು ಋಷಿ ಮುನಿಗಳಿದ್ದರು. ಆದರೆ, ಅವರಿಬ್ಬರೂ ಬದ್ಧ ವೈರಿಗಳು ಒಬ್ಬರನ್ನು ನೋಡಿದರೆ ಇನ್ನೊಬರಿಗೆ ಆಗುತ್ತಿರಲಿಲ್ಲ ಹಾಗೆ ಇಬ್ಬರು ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಬ್ರಹ್ಮ ದೇವರ ಕುರಿತು ತಪಸ್ಸಿಗೆ ಕುರುತ್ತಾರೆ.

ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವಾ ಪ್ರತ್ಯಕ್ಷನಾಗಿ ಮೊದಲ ಋಷಿಯಲ್ಲಿ ಬೇಕಾದ ವರವನ್ನು ಕೇಳು ಎಂದಾಗ ಮೊದಲ ಋಷಿ ಈಗ ನನಗೆ ಏನು ಬೇಡ ಎರಡನೇ ಋಷಿ ನಿನ್ನಲ್ಲಿ ಯಾವ ವರವನ್ನು ಕೇಳುತ್ತಾನೋ ಅದರ ಎರಡರಷ್ಟು ನನಗೆ ನೀಡು ಎನ್ನುತ್ತಾನೆ.

ಇನ್ನು ಹಾಗೆಯೇ ಎರಡನೇ ಋಷಿ ಬಳಿ ಹೋಗಿ ನಿನಗೆ ಏನು ವರಬೇಕು ಕೇಳು ಎಂದಾಗ ಮೊದಲ ಋಷಿ ಏನು ವರ ಕೇಳಿದ ಎಂದಾಗ ಬ್ರಹ್ಮ ದೇವರು ನೀನು ಕೇಳುವ ವರದ ಎರಡರಷ್ಟು ಬೇಕು ಎಂದಿರುವನು ಹಾಗಾಗಿ ನೀನು ವರ ಕೇಳು ಎನ್ನುತಾನೆ ಬ್ರಹ್ಮ ದೇವಾ.

ಆಗ ಮೊದಲ ಋಷಿಯನ್ನು ಮುಗಿಸಬೇಕು ಎಂದುಕೊಂಡು ಎರಡನೇ ಋಷಿ ಬ್ರಹ್ಮ ದೇವರಲ್ಲಿ ನನ್ನ ಒಂದು ಕಣ್ಣು ಒಂದು ಕಾಲು ಹೋಗುವಂತೆ ವರವನ್ನು ಕೊಡು ಎಂದಾಗ ದೇವರು ತಥಾಸ್ತು ಎಂದಾಗ ಈತನ ಒಂದು ಕಣ್ಣು ಒಂದು ಕಾಲು ಹೋಯಿತು ಮೊದಲ ಋಷಿಯ ಎರಡು ಕಣ್ಣುಗಳು ಎರಡು ಕಾಲುಗಳು ಹೋದವು.

ಪ್ರಸ್ತುತ ಸಾರಿಗೆ ಸಂಘಟನೆಗಳ ವಿಷಯದಲ್ಲಿ ಅನಂತ್ ಸುಬ್ಬರಾವ್ ಅವರಿಗೆ ನೌಕರರಿಗೆ ಒಳ್ಳೇದು ಮಾಡುವ ಇರದೇ ಇಲ್ಲ, ಬದಲಾಗಿ ಅವರ ಇತ್ತೀಚಿನ ವಿಡಿಯೋ ಹೇಳಿಕೆಗಳು ಚಂದ್ರು ಹಾಗೂ ಕೂಟವನ್ನು ಮುಗಿಸಿದರೆ ತನ್ನ ಜನ್ಮ ಸಾರ್ಥಕ ಎಂಬ ಭಾವನೆಯಲ್ಲಿದ್ದಾರೆ.

ಉರಿಯುತ್ತಿರುವ ಬೆಂಕಿ ಸ್ಮಶಾನಾದ ಬೆಂಕಿಯಾದರು ಚಳಿ ಕಾಯಿಸಿಕೊಳ್ಳೋಣ ಎಂಬ ಮನಸ್ಥಿತಿಯಲ್ಲಿದ್ದಾರೆ. ಸುಬ್ಬರಾವ್ ಅವರೇ ನೌಕರರು ದಡ್ಡರಲ್ಲ ನಿಮ್ಮ ಪ್ರತಿ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ ಸಾಧ್ಯವಾದರೆ ಒಳ್ಳೇದನ್ನು ಮಾಡಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ.

ನಿಮ್ಮ ಶಕ್ತಿ ಏನೇ ಇರಲಿ ಯುದ್ಧರಂಗದಲ್ಲಿ ಓಡುತ್ತಿರುವ ರಥದ ಚಕ್ರಕ್ಕೆ ಅಳವಡಿದ ಸಣ್ಣ ಲಾಕ್ ತಪ್ಪಿದರೆ ರಥ ಉರುಳುತ್ತದೆ ತಮ್ಮ ಅನುಭವ ಒಳ್ಳೇದಕ್ಕೆ ಉಪಯೋಗಿಸಿ ಅದು ಸಾರಿಗೆ ನೌಕರರಿಗೆ ಪೂರಕವಾಗಿ ಇರಲಿ.. ಧನ್ಯವಾದಗಳು ಎಂದು ಸಾರಿಗೆ ನೌಕರರು ಸಾಮಾಜಿಕ ಜಾಲತಾಣದಲ್ಲಿ ಈ ಒಂದು ನೀತಿಕಥೆಯನ್ನು ಹರಿಯಬಿಟ್ಟಿದ್ದಾರೆ.

Megha
the authorMegha

Leave a Reply

error: Content is protected !!