NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರು ಇಟ್ಟಿರುವ ಬೇಡಿಕೆ ತಪ್ಪಲ್ಲ- ಸಿಎಂ, ಸಾರಿಗೆ ಸಚಿವರು ಸ್ಪಂದಿಸಬೇಕು: ಡಿಸಿಎಂ ಡಿಕೆಶಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಇಟ್ಟಿರುವ ಬೇಡಿಕೆ ತಪ್ಪಲ್ಲ. ಸಿಎಂ ಹಾಗೂ ಸಾರಿಗೆ ಸಚಿವರು ಅವರ ಬೇಡಿಕೆಗೆ ಸ್ಪಂದಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಕೂಡ ಸಾರ್ವಜನಿಕರ ಸೇವೆ ಮಾಡುವುದಕ್ಕೆ ಬಂದಿರುವುದು ಹೀಗಾಗಿ ಸರ್ಕಾರದೊಂದಿಗೆ ಅವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇನ್ನು ಜನರಿಗೆ ತೊಂದರೆ ಕೊಡುವ ಕೆಲಸ ಆಗಬಾರದು ಈ ನಿಟ್ಟಿನಲ್ಲಿ ಸಾರಿಗೆ ಸಚಿವರ ಹಾಗೂ ಮುಖ್ಯಮಂತ್ರಿಗಳು ನೌಕರರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಅದಕ್ಕೂ ಮೊದಲು ನೌಕರರು ಕೂಡ ಸರ್ಕಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಬಸ್‌ ಸಂಪೂರ್ಣವಾಗಿ ನಿಂತಿಲ್ಲ ನಿಂತಿದ್ದರೆ ಜನತೆಗೆ ಸಮಸ್ಯೆ ಆಗುತ್ತಿತ್ತು ಎಂದು ಹೇಳಿದ್ದಾರೆ.

ಇನ್ನು ನೌಕರರ ಬೇಡಿಕೆ ಬಗ್ಗೆ ನಮಗೆ ಮಾಹಿತಿ ಶೇರ್‌ ಆಗಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ನೌಕರರ ಬೇಡಿಕೆ ಏನು ಎಂದು ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಕರೆದು ಪರಿಹಾರ ಮಾಡುತ್ತಾರೆ ಆ ಬಗ್ಗೆ ನಮಗೆ ಏನು ಗೊತ್ತಿಲ್ಲ ಎಂದಷ್ಟೇ ಗೃಹ ಸಚಿವರು ಹೇಳಿದರು.

Advertisement
Megha
the authorMegha

Leave a Reply

error: Content is protected !!