ಐಟಿ ಇಕ್ಕಳಕ್ಕೆ ಸಿಲುಕಿ ಕಾನ್ಫಿಡೆಂಟ್ ಕಳೆದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಸಿ.ಜೆ. ರಾಯ್ ಸಾಮ್ರಾಜ್ಯದ ಮೌಲ್ಯ 8,500 ಕೋಟಿ

ಬೆಂಗಳೂರು: ಸಾವಿರಾರು ಕೋಟಿ ಮೌಲ್ಯದ ಕಾನ್ಫಿಡೆಂಟ್ ಗ್ರೂಪ್ (Confident Group) ಕಟ್ಟಿದ್ದ ಸರದಾರ ಐಟಿ ಇಕ್ಕಳಕ್ಕೆ ಸಿಲುಕಿ ಕಾನ್ಫಿಡೆಂಟ್ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಸಿ.ಜೆ.ರಾಯ್ (CJ Roy) ಎಂಬ ಅತಿಮಾನುಷ ಶಕ್ತಿ 8,500 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ್ದರು.

ಡಾ. ಚಿರಿಯನ್ ಕಂಡತ್ ಜೋಸೆಫ್ ರಾಯ್ ಅಲಿಯಾಸ್ ಸಿಜೆ ರಾಯ್ ಬಿಲಿಯನೇರ್ ಆಗಿದ್ದೇ ರೋಚಕ. ಎಚ್ಪಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಾಮಾನ್ಯ ಉದ್ಯೋಗಿಯೊಬ್ಬ ನೋಡ ನೋಡ್ತಿದ್ದಂತೆ ಸಾವಿರಾರು ಕೋಟಿ ಮೌಲ್ಯದ ಉದ್ಯಮ ಕಟ್ಟಿ ಹೆಮ್ಮರವಾಗಿ ಬೆಳೆಸಿ ಬಿಟ್ಟಿದ್ದು ಸುಲಭದ ಮಾತಲ್ಲ.
ಕೇರಳದ ಕೊಚ್ಚಿಯಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದ ಸಿಜೆ ರಾಯ್, ಎಚ್ಪಿ ಕಂಪನಿಯಲ್ಲಿ ಕೆಲಸ ಬಿಟ್ಟು ಉದ್ಯಮ ಆರಂಭಿಸಿದರು. 2006ರಲ್ಲಿ ರಿಯಲ್ ಎಸ್ಟೇಟ್ ಉತ್ತುಂಗದಲ್ಲಿದ್ದ ಸಾಲ-ಮುಕ್ತ ನೀತಿಯಡಿ ಉದ್ಯಮವನ್ನು ಬೆಂಗಳೂರು, ಕೇರಳ, ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಹಲವಾರು ನಿವಾಸ, ವಾಣಿಜ್ಯ, ಟೌನ್ಶಿಪ್ ನಿರ್ಮಾಣ ಮಾಡಿದರು. ಅಮೆರಿಕಾ ಮತ್ತು ಯುಎಇಗೆ ಬಿಸಿನೆಸ್ ವಿಸ್ತರಿಸಿದರು.
ಕಾನ್ಪಿಡೆಂಡ್ ಗ್ರೂಪ್ 159ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿ, ಕೋಟ್ಯಂತರ ಗ್ರಾಹಕರಿಗೆ ಮನೆಗಳನ್ನು ಒದಗಿಸಿತು. ಇದನ್ನೂ ಓದಿ: ಸಿನಿ ರಂಗದೊಂದಿಗೆ ಸಿಜೆ ರಾಯ್ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ. ರಿಯಲ್ ಎಸ್ಟೇಟ್ ಜತೆ ಜತೆಗೆ ಹಾಸ್ಪಿಟಾಲಿಟಿ, ನಿರ್ಮಾಣ ಕ್ಷೇತ್ರ, ಶಿಕ್ಷಣ, ಸಿನಿಮಾ ಮೊದಲಾದ ವ್ಯವಹಾರಗಳಲ್ಲಿ ವ್ಯಾಪಕವಾಗಿ ಬಿಸಿನೆಸ್ ಮಾಡಿದರು.
ಸಿಜೆ ರಾಯ್ ಆಸ್ತಿ ಮೌಲ್ಯವೇ 8,500 ಕೋಟಿ ಎಂದು ಅಂದಾಜಿಸಲಾಗಿದೆ. ರೋಲ್ಸ್ ರಾಯ್, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಲಕ್ಸುರಿ ಕಾರುಗಳ ಸಂಗ್ರಹವನ್ನ ಹೊಂದಿದ್ದರು. ಮಲಯಾಳಂ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಹೂಡಿಕೆ ಮಾಡಿ ಸಕ್ಸೆಸ್ ಕಂಡಿರು. 2012ರಲ್ಲಿ ಮೋಹನ ಲಾಲ್ ನಟನೆಯ ಕ್ಯಾಸನೋವಾ ಚಿತ್ರವು ಹಣ, ಕೀರ್ತಿ ಎರಡನ್ನೂ ಗಳಿಸಿಕೊಟ್ಟಿತ್ತು. ಬಹಳ ಕಾಲದವರೆಗೆ ಬಿಗ್ಬಾಸ್ ಮಲಯಾಳಂ ಮತ್ತು ಇತರ ರಿಯಾಲಿಟಿ ಶೋ ಗಳಿಗೆ ಪ್ರಾಯೋಜಕ್ತವ ನೀಡಿದ್ದರು.
ಇಷ್ಟೆಲ್ಲಾ ಸಾಮ್ರ್ಯಾಜ್ಯ ಕಟ್ಟಿದ್ದ ಸಿಜೆ ರಾಯ್, 2026 ಜನವರಿ 30ರಂದು ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ 57ನೇ ವಯಸ್ಸಿನಲ್ಲಿ ಪತ್ನಿ, ಪುತ್ರ ಮತ್ತು ಪುತ್ರಿಯನ್ನ ಅಗಲಿದ್ದು ಸಾವಿರಾರು ಕೋಟಿಯ ಸಾಮ್ರ್ಯಾಜ್ಯವನ್ನ ಬಿಟ್ಟು ತೆರಳಿದ್ದಾರೆ. ಇದಕ್ಕೆ ದೇಶದಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ನೀಚ ನಡೆಯು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Related









