KSRTC: ನೌಕರರಿಗೆ 56 ತಿಂಗಳ ಹಿಂಬಾಕಿ ಕೊಟ್ಟಿಲ್ಲ, 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡಿಲ್ಲ- ಯಾವ ಪುರುಷಾರ್ಥಕ್ಕೆ ಸರ್ಕಾರದ ಶಕ್ತಿ ಯೋಜನೆ ಸಂಭ್ರಮಾಚರಣೆಯೋ- ನಾಚಿಕೆ ಆಗಬೇಕು..

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ರಾಜ್ಯದ ನಾಲ್ಕೂ ಸಾರಿಗೆ ನಿಮಗಳಿಗೆ ಆದಾಯ, ಸರ್ಕಾರಕ್ಕೆ ಕೀರ್ತಿಯ ಶಕ್ತಿ ಬಂದಿದೆ. ಆದರೆ, ಈ ಯೋಜನೆ ಯಶಸ್ಸಿಗೆ ಶ್ರಮಿಸಿದ ಹಾಗೂ ಈಗ್ಲೂ ದುಡಿಯುತ್ತಿರುವ ನೌಕರರಿಗೆ ಮಾತ್ರ ಕಳೆದ 5ವರ್ಷಗಳಿಂದ ಸರಿಯಾಗಿ ವೇತನ ಹೆಚ್ಚಿಸದೆ ಅವರ ಶಕ್ತಿಯನ್ನು ಹನನ ಮಾಡಲಾಗುತ್ತಿದೆ.
ಹೌದು ಚುನಾವಣಾ ಪೂರ್ವದಲ್ಲಿ ನೌಕರರಿಗೆ ಕೊಟ್ಟ ಭರವಸೆಯಾದ ಹಾಗೂ ನೌಕರರ ಪ್ರಮುಖವೂ ಆದ ವೇತನ ಹೆಚ್ಚಳದ ಬೇಡಿಕೆಯನ್ನು ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ಈಡೇರದೆ ಸರ್ಕಾರ ತಾತ್ಸಾರ ಮಾಡಿಕೊಂಡೇ ಬರುತ್ತಿದೆ. ಇದರಿಂದ ನೌಕರರು ನಿಶ್ಯಕ್ತರಾಗುತ್ತಿದ್ದಾರೆ.
ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದಿದ್ದರು ಕೂಡ ಅವರ ಪರಿಶ್ರಮದಿಂದ ಯಶಸ್ವಿಯಾಗಿರುವ ಶಕ್ತಿ ಯೋಜನೆ ಸಂಭ್ರಮಕ್ಕೆ ಇದೇ ಜು.14ಕ್ಕೆ ಅಂದರೆ ನಾಳೆ ಈ ಯೋಜನೆ 2ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ರೂಪಿಸಿದ್ದು, ಸರ್ಕಾರ ತನ್ನ ಶಕ್ತಿಯನ್ನು ವಿಪಕ್ಷಗಳಿಗೆ ತೋರಿಸಲು ಮುಂದಾಗಿದೆ.
ಈಗಾಗಲೇ 500 ಕೋಟಿ ಮಹಿಳಾ ಪ್ರಯಾಣಿಕರು ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಪ್ರತಿ ಘಟಕ ವ್ಯಾಪ್ತಿಯಲ್ಲಿ ಯಶೋಗಾಥೆ ಮತ್ತು ಸಂಭ್ರಮಾಚರಣೆ ಹಮ್ಮಿಕೊಂಡಿದೆ ಸರ್ಕಾರ. ಇದಕ್ಕಾಗಿ ರಾಜ್ಯವ್ಯಾಪಿ ಪೂರ್ವ ತಯಾರಿಯೂ ಈಗಾಗಲೇ ಭರದಿಂದ ಸಾಗಿದ್ದು ಇದಕ್ಕೆ ಕೋಟಿ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಆದರೆ, ನೌಕರರ ಬೇಡಿಕೆ ಈಡೇರಿಸುವುದಕ್ಕೆ ಮಾತ್ರ ಕಿವಿ ಕೇಳದಂತೆ, ಕಣ್ಣು ಕಾಣದಂತೆ ಇನ್ನು ಬಾಯಿ ಬಿಡದಂತೆ ಜಾಣ ಮೌನವಹಿಸಿರುವುದು ಮಾತ್ರ ನಾಚಿಕೆಗೇಡಿನ ಪರಮಾವಧಿಯಾಗಿದೆ.
ಇನ್ನು ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸರ್ಕಾರಕ್ಕೆ ಉತ್ತಮ ಹೆಸರು ಮತ್ತು ಕೀರ್ತಿ ತಂದ ಯಶಸ್ಸಿನ ಯೋಜನೆಯಾಗಿದೆ. ಈ ಯೋಜನೆಯಿಂದ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು, ದೇಗುಲಗಳು, ಸುಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು ಮಹಿಳೆಯರಿಂದಲೇ ತುಂಬಿ ತುಳಕುತ್ತಿದ್ದು ನಿರೀಕ್ಷೆ ಮೀರಿ ಆದಾಯ ಗಳಿಸಿವೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಶಕ್ತಿ ಯೋಜನೆಗಿಂತ ಮುಂಚೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಸಾವಿರಾರು ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿದ್ದವು. ಕೆಲ ಸಂದರ್ಭದಲ್ಲಿ ಅಂದರೆ ಸುಗ್ಗಿ ರಹಿತ ದಿನಗಳಲ್ಲಿ ಪ್ರಯಾಣಕರಿಲ್ಲದೆ ಸಾರಿಗೆ ಬಸ್‌ಗಳು ಖಾಲಿಖಾಲಿಯಾಗಿಯೇ ಸಂಚರಿಸುತ್ತಿದ್ದವು. ಒಂದು ಹಂತದಲ್ಲಿ ತೀರಾ ನಷ್ಟದಲ್ಲಿದ್ದ
ನಿಗಮಗಳು ತನ್ನ ಅಧಿಕಾರಿಗಳು/ನೌಕರರಿಗೆ ವೇತನ ಕೊಡಲಾರದಷ್ಟು ಅಸಹಾಯಕವಾಗಿದ್ದವು. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಶಕ್ತಿ ಯೋಜನೆ ಸಾರಿಗೆ ನಿಗಮಗಳ ನೆರವಿಗೆ ಬಂದಿದೆಯಲ್ಲದೇ ಆದಾಯದ ಬಲವನ್ನೂ ಕೂಡ ತುಂಬುತ್ತಿದೆ ಆದರೆ, ನೌಕರರಿಗೆ ಇಗಬೇಕಿರುವ ವೇತನ ಸೌಲಭ್ಯ ಮಾತ್ರ ಈವರೆಗೂ ಸಿಕ್ಕಿಲ್ಲ ಇದು ದುರಂತ.
ಇದರ ನಡುವೆ ಸರ್ಕಾರದಿಂದ ಸಾವಿರಾರು ಕೋಟಿ ರೂ. (ಅಂದಾಜು 3.8 ಸಾವಿರ ಕೋಟಿ ರೂ.ಗಳಿಗೂ ಅಧಿಕ) ಶಕ್ತಿ ಯೋಜನೆಯ ಬಾಕಿ ಹಣ ಪಾವತಿಯಾಗಬೇಕಿದೆ. ಇದು ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆಯ ಬಾಕಿ ಹಣ ಪಾವತಿಯ ಮೇಲೆಯೂ ಪರಿಣಾಮ ಬೀರುತ್ತಿದೆ. ಇದನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಿದರೆ ನೌಕರರಿಗೆ 2020 ಜನವರಿ ಒಂದರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಒಂದೇ ಬಾರಿಗೆ ನಾಲ್ಕೂ ನಿಗಮಗಳು ತುಂಬಲಿವೆ.
ಆದರೆ, ಹೇಳುವವರು ಕೇಳುವವರು ಯಾರು ಇಲ್ಲ ಎಂದು ಸರ್ಕಾರ ಇದನ್ನು ಕೊಡದೆ ಕಾಲ ದೂಡಿಕೊಂಡು ಬರುತ್ತಿದ್ದು, ಇದರಿಂದ ನೌಕರರು ಬಸವಳಿಯುತ್ತಿದ್ದಾರೆ. ಇದರ ಜತೆಗೆ 2024ರ ಜನವರಿ 1ರಿಂದ ಮತ್ತೆ ವೇತನ ಹೆಚ್ಚಳವಾಗಬೇಕಿದ್ದು ಅದನ್ನು ಕೂಡ ಮಾಡದೆ ಸರ್ಕಾರ ಭಂಡತನ ಪ್ರದರ್ಶಿಸುತ್ತಿರುವುದರಿಂದ ಇದ್ ಹಿಂಬಾಕಿ ಕೂಡ ಈ ತಿಂಗಳು ವೇತನ ಹೆಚ್ಚಳದ ಘೋಷಣೆ ಮಾಡಿದರೂ ಕೂಡ 18 ತಿಂಗಳ ಹಿಂಬಾಕಿ ಕೊಡಬೇಕಿದೆ.
ಅಂದರೆ 2020 ಜನವರಿ 1ರಿಂದ ಅನ್ವಯವಾಗುವಂತೆ 2023 ಮಾರ್ಚ್‌ನಲ್ಲಿ ಹೆಚ್ಚಳ ಮಾಡಿರುವ ಶೇ.15ರಷ್ಟು ವೇತನದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿಒಯಿಂದ ಈವರೆಗೂ ಅಂದರೆ ಜುಲೈ ವರೆಗೂ 18 ತಿಂಗಳ ಹಿಂಬಾಕಿ ಸೇರಿ ಒಟ್ಟು 56ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಣ ಬಾಕಿ ಉಳಿಸಿಕೊಂಡಿದೆ.
ಇನ್ನು 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ವಿಳಂಬದಿಂದ ಅಧಿಕಾರಿಗಳು/ನೌಕರರು ಪೂರ್ಣ ಶಕ್ತಿ ಕಳೆದುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಶಾಲೆ, ಕಾಲೇಜುಗಳ ಪ್ರವೇಶ ಶುಲ್ಕಗಳು ಮಿತಿ ಮೀರಿವೆ. ಜೀವನಶೈಲಿ ದುಬಾರಿಯಾಗುತ್ತಿದೆ. ಇತ್ತ ಅಧಿಕಾರಿಗಳು/ನೌಕರರು ನಿಗಮದಿಂದ ಬಾಕಿ ಹಣ ಮತ್ತು ವೇತನ ಹೆಚ್ಚಳವನ್ನೇ ಎದುರು ನೋಡುತ್ತಿದ್ದಾರೆ.
ಇನ್ನೊಂದೆಡೆ ನಿಗಮಗಳಲ್ಲಿರುವ ಬಹುತೇಕ ಹಳೆಯ ಗುಜರಿ ಸೇರುವ ಬಸ್‌ಗಳನ್ನು ಪದೇಪದೆ ರಿಪೇರಿ ಮಾಡಿಸಿ ಓಡಿಸುತ್ತಿರುವುದರಿಂದ ಚಾಲನಾ ಸಿಬ್ಬಂದಿಗಳು ತಮ್ಮ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಈ ಎಲ್ಲದರ ನಡುವೆ ಇತ್ತ ಸರ್ಕಾರ ಮಾತ್ರ ತನ್ನ ಶಕ್ತಿ ಪ್ರದರ್ಶನ ಮಾಡಲಿಕ್ಕೆ ಸಂಭ್ರಮಾಚರಣೆಯಲ್ಲಿ ತೊಡಗುತ್ತಿದೆ. ಇದು ಯಾವ ಪುರುಷಾರ್ಥಕ್ಕೆ ಎಂಬುವುದು ಮಾತ್ರ ಗೊತ್ತಾಗುತ್ತಿಲ್ಲ.
4 ಸಾರಿಗೆ ನಿಗಮಗಳ ಅದಧಿಕಾರಿಗಳು/ನೌಕರರು ಸಮಸ್ಯೆಯ ಸರಮಾಲೆಯನ್ನೇ ಹೊತ್ತುಕೊಂಡು ಸಂಸಾರದ ನೊಗ ಎಳೆಯಲಾದೆ ತೊಂದರೆ ಎಂಬ ಕೂಪದಲ್ಲಿ ಮಿಂದೇಳುತ್ತಿದ್ದಾರೆ. ಆದರೂ ಅವರ ನೋವಿಗೆ ಸ್ಪಂದಿಸದ ಮೂರನ್ನು ಬಿಟ್ಟ ರಾಜ್ಯ ಸರ್ಕಾರ ಈ ಸಂಭ್ರಮಾಚರಣೆಗೆ ಮುಂದಾಗಿದೆ. ನಾಚಿಕೆ ಆಗಬೇಕು ಈ ನರಸತ್ತ ಸರ್ಕಾರಕ್ಕೆ.
ಇತ್ತ ಚುನಾವಣ ಪೂರ್ವದಲ್ಲಿ ಶೂರರಂತೆ ಭರವಸೆ ಕೊಟ್ಟು ಈಗ ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಸಮೀಪಿಸುತ್ತಿದ್ದರೂ ಕೂಡ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸದೆ ಕಾಲ ಕಳೆದುಕೊಂಡು ಬರುತ್ತಿದೆ. ಈ ಎಲ್ಲದ ನಡುವೆ ವೇತನ ಹೆಚ್ಚಳ, ಸರ್ಕಾರಿ ನೌಕರರನ್ನಾಗಿಸುವುದು, ಬಾಕಿ ಹಣ ಬಿಡುಗಡೆ ಸೇರಿ ಇತರ ಬೇಡಿಕೆಗಳ ಈಡೇರಿಕೆ ಸಂಬಂಧ ಸಚಿವರು ಹಾಗೂ ಮುಖ್ಯಮಂತ್ರಿಗಳು, ಸಾರಿಗೆ ಅಧಿಕಾರಿಗಳ ಮಟ್ಟದಲ್ಲಿ ಪದೇಪದೆ ಸಭೆಗಳು ನಡೆಯುತ್ತಿದ್ದರೂ ಫಲ ಕೊಡುತ್ತಿಲ್ಲ.
ಸ್ಪಷ್ಟ ನಿರ್ಧಾರಕ್ಕೆ ಬರದ ಸರ್ಕಾರ ಸಂಘಟನೆಗಳ ಮುಖಂಡರ ದಾರಿಯನ್ನು ತಪ್ಪಿಸಿ ಬರೀ ಕಾಲ ದೂಡುತ್ತಲೇ ಬರುತ್ತಿರುವುದು ಅಧಿಕಾರಿಗಳು/ನೌಕರರನ್ನು ಕೆರಳಿಸುತ್ತಿದೆ. ಇದೇ ಜು.4ರಂದು ನಡೆದ ಸಭೆಯಲ್ಲಿ ಸಿಎಂ ಇದ್ದಕ್ಕಿದ್ದಂತೆ ಮುಂದೂಡಿ ಹೋಗಿರುವುದು ನೌಕರರಲ್ಲಿ ಹಲವು ಅನುಮಾನ ಸೃಷ್ಟಿಸಿದೆ. ಹೀಗಾಗಿ ಸರ್ಕಾರದ ಯೋಜನೆಗಳು ಶಕ್ತಿಯುತವಾಗಿ ಅನುಷ್ಠಾನಗೊಳ್ಳುತ್ತಿದ್ದು, ದುಡಿಯುವ ನೌಕರರ ವರ್ಗ ಮಾತ್ರ ಕೆಲಸಕ್ಕೆ ತಕ್ಕ ವೇತನವಿಲ್ಲದೇ ನಿಶ್ಶಕ್ತಿಯಾಗುತ್ತಿದೆ.
ಸರ್ಕಾರದ ಶಕ್ತಿ ಯೋಜನೆ ಸಂಭ್ರಮಾಚರಣೆ ಮಾಡುವುದಕ್ಕೆ ನಮ್ಮ ಸಹಕಾರ ಮತ್ತು ಸಹಮತವಿದೆ. ಆದರೆ, ಈ ಶಕ್ತಿ ಯೋಜನೆಗೆ ಶಕ್ತಿ ಮೀರಿ ದುಡಿಯುವ ಮೂಲಕ ನಿರೀಕ್ಷೆಗೂ ಮೀರಿ ಯಶಸ್ವಿಯಾಗುವುದಕ್ಕೆ ಕಾರಣರಾಗಿರುವ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿರುವುದು ಭಾರಿ ನೀವುಂಟು ಮಾಡುತ್ತಿದೆ ಎಂದು ನಾಲ್ಕೂ ಸಾರಿಗೆ ನಿಗಮಗಳ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related


You Might Also Like
ಆ.31ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕ ಶೇ.1 ರಿಂದ ಶೇ.2ರಷ್ಟು ಪರಿಷ್ಕರಿಸಿ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಆ.31ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ...
ಎಂಎಸ್ಪಿ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟದಿಂದ ಪಾರು ಮಾಡಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ಗೆ ಮನವಿ
ಮೈಸೂರು: ಸುತ್ತೂರಿನಿಂದ ವರುಣ ಮೂಲಕ ಮೈಸೂರಿಗೆ ಬರುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ವರುಣ ಬಳಿ ನಿಲ್ಲಿಸಿ ಎಂಎಸ್ಪಿ ಬೆಂಬಲ ಬೆಲೆ ಘೋಷಣೆ...
BMTC ಸಂಸ್ಥೆಯಲ್ಲಿ ಪ್ರಸ್ತುತ 27,595 ನೌಕರರಿಗೆ ಹಲವು ಕಲ್ಯಾಣ ಯೋಜನೆಗಳು ಜಾರಿ: ಎಂಡಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿ 27 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ ರಾಷ್ಟ್ರದಲ್ಲಿಯೇ ಒಂದು ಮಾದರಿ ನಗರ ಸಾರಿಗೆ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ ವ್ಯವಸ್ಥಾಪಕ ನಿರ್ದೇಶಕ...
ಯಾವುದೇ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿಲ್ಲ ನಮ್ಮ ಚಾಲಕನ ಅತಿ ವೇಗ, ಅಜಾಗರೂಕತೆಯೇ ಕಾರಣ: ಯಾವುದೇ ತನಿಖೆ ನಡೆಸದೇ ತಪ್ಪೊಪ್ಪಿಕೊಂಡ KSRTC
ಅದೇ ನಿಮ್ಮ ಮೇಲೆ ಯಾವುದೇ ತನಿಖೆ ಮಾಡದೆ ಈ ರೀತಿ ಆರೋಪ ಹೊರಿಸಿದರೆ ಒಪ್ಪಿಕೊಳ್ಳುತ್ತೀರಾ ಎಂಡಿ ಅಕ್ರಮ್ ಪಾಷ ಅವರೆ? ಬೆಂಗಳೂರು: ತಲಪಾಡಿಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ...
KSRTC: ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ನೌಕರರ ಸಭೆ ಸ್ನ್ಯಾಕ್ಸ್, ಒಂದು ಕಪ್ಪು ಟೀ ಅಥವಾ ಕಾಫಿಗಷ್ಟೇ ಸೀಮಿತ
ಇಂದು ಜಂಟಿ ಕ್ರಿಯಾ ಸಮಿತಿ- ಸಾರಿಗೆ ಅಧಿಕಾರಿಗಳ ನಡುವೆ ನಡೆದ ರಾಜೀ ಸಂಧಾನ ಸಭೆ ವಿಫಲ ಮತ್ತೆ ಸೆ.26ಕ್ಕೆ ಮುಂದೂಡಿಕೆ ಬೆಂಗಳೂರು: ಕಾರ್ಮಿಕ ಇಲಾಖೆಯ ಆಯುಕ್ತರು ಇಂದು...
ರಾಜಣ್ಣ ಮನೆಯಲ್ಲಿ ಗೌರಿಸುತನ ಸಂಭ್ರಮ – ರಾಜಧಾನಿಯಲ್ಲಿ 2,19,153 ಗಣಪನ ವಿಸರ್ಜನೆ
ಬೆಂಗಳೂರು: ಕುಮಾರಸ್ವಾಮಿ ಬಡಾವಣೆಯ 2ನೇ ಹಂತ 8 ನೇ ಮುಖ್ಯರಸ್ತೆ 12ನೇ ಅಡ್ಡ ರಸ್ತೆಯಲ್ಲಿರುವ ರಾಜಣ್ಣ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಮೂರ್ತಿಯನ್ನು...
KKRTC ಬೀದರ್: ಅಧಿಕಾರಿಗಳ ಕಿರುಕುಳಕ್ಕೆ ನೊಂದು ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಚಾಲಕ ರಾಜು
ಬೀದರ್: ಅಧಿಕಾರಿಗಳ ಕಿರುಕುಳದಿಂದ ಮನನೊಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬೀದರ್ ಘಟಕ-1ರ ಚಾಲಕ ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟಕದಲ್ಲಿ...
KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್- ತಪ್ಪಿದ ಭಾರಿ ಅನಾಹುತ
ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್ ಘಟಕ-1ರ ಡಿಎಂ ಬೀದರ್: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ...