NEWSನಮ್ಮಜಿಲ್ಲೆನಮ್ಮರಾಜ್ಯ

BMTC ನೂತನ ಎಂಡಿಗೆ ಸ್ವಾಗತ ಕೋರಿದ ನಿಗಮದ ನಿಕಟಪೂರ್ವ ಎಂಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್‌ ಅಧಿಕಾರಿ ಸದ್ಯ ಬಿಬಿಎಂಪಿಯಲ್ಲಿ ವಿಶೇಷ ಆರ್ಥಿಕ ಆಯುಕ್ತರಾಗಿರುವ ಆರ್.ರಾಮಚಂದ್ರನ್‌ ಮಂಗಳವಾರ ಅಧಿಕಾರಿ ವಹಿಸಿಕೊಂಡಿದ್ದಾರೆ.

ನಿಗಮದ ನಿಕಟಪೂರ್ವ ಎಂಡಿ, ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರು ಗೂಗುಚ್ಛ ನೀಡುವ ಮೂಲಕ ನೂತನ ಎಂಡಿ ಅವರನ್ನು ಸ್ವಾಗತಿಸಿ ತಮ್ಮ ಅಧಿಕಾರಿರನ್ನು ಹಸ್ತಾಂತರಿಸಿದರು.

ಕಳೆದ ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಸದ್ಯ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ. ಆದರೆ, ನಿಗಮದಲ್ಲಿ ಕಳಹಂತತ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ ಇವರ ವಿರುದ್ಧ ಕೆಲ ಸಂಘಟನೆಗಳ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಬ್ಬ ನೌಕರರ ಪರವಾಗಿ ನಿಲ್ಲುವ ಅಧಿಕಾರಿಯನ್ನು ನೌಕರರ ಪರವಾದ ಸಂಘಟನೆಗಳೇ ವರ್ಗಾವಣೆ ಮಾಡಿಸುವ ಕುತಂತ್ರ ಬುದ್ಧಿ ತೋರಿಸುತ್ತವೆ ಎಂದರೆ ಇವುಗಳು ನೌಕರರ ಸಮಸ್ಯೆಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ ಎಂಬುದನ್ನು ನೌಕರರೇ ತಿಳಿದುಕೊಳ್ಳಬೇಕಿದೆ.

ಇನ್ನು ಮತ್ತೊಂದು ಸಂಘಟನೆ ನೌಕರರಿಗೆ ಸರ್ಕಾರ ಏನು ಮಾಡದಿದ್ದರೂ ಸಾರಿಗೆ ಸಂಭ್ರಮ ಮಾಡಲು ಹೊರಟಿದೆ. 38 ತಿಂಗಳ ವೇತನ ಅರಿಯರ್ಸ್‌ ಬಗ್ಗೆ ಈವರೆಗೂ ತುಟಿ ಬಿಚ್ಚದ ಸರ್ಕಾರದ ಯಾವ ಸಾಧನೆ ನೋಡಿ ಈ ಸಂಭ್ರಮವನ್ನು ಆಚರಿಸಲು ಹೊರಟಿದೆಯೋ ಕಾಣೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಎಲ್ಲವನ್ನು ನೋಡಿದರೆ ನೌಕರರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿಕೊಂಡು ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಈ ಸಂಘಟನೆಗಳಿಂದ ಕಳೆದ 4 ದಶಕಗಳಿಂದ ನೌಕರರಿಗೆ ಒಳ್ಳೆಯದಕ್ಕಿಂತ ಕೆಟ್ಟ ಅನುಭವವೇ ಹೆಚ್ಚಾಗಿ ಆಗಿದೆ ಎಂದು ಹಿರಿಯ ನೌಕರರೊಬ್ಬರು ಕಿಡಿಕಾರಿದ್ದಾರೆ.

ಇನ್ನು ನಿಷ್ಠಾವಂತ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಕೆಲಸ, ಹಣ ಮಾಡುವುದನ್ನೇ ದಂದೆ ಮಾಡಿಕೊಂಡು ಕೆಲ ಸಂಘಟನೆಗಳು ನೌಕರರನ್ನು ಯಾಮಾರಿಸಿಕೊಂಡು ಬರುವುದರಲ್ಲೇ ಕಾಲ ಕಳೆಯುತ್ತಿದ್ದು, ಇದಕ್ಕೆ ಅಧಿಕಾರಿ ವರ್ಗವೂ ಕಾರಣವಾಗಿದೆ. ಏಕೆಂದರೆ ಈ ಎಲ್ಲ ಸಂಘಟನೆಗಳನ್ನು ಬದಿಗೊತ್ತಿ ನಮ್ಮ ನಿಗಮದಲ್ಲಿನ ಸಮಸ್ಯೆಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಟೊಂಕಕಟ್ಟಿ ನಿಂತಿದ್ದರೆ ಈ ಸಮಸ್ಯೆಗಳು ಆಗುತ್ತಿರಲಿಲ್ಲ.

ಆದರೆ, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ನಿಗಮದವನ್ನು ಬೇರೆಯವರು ಆಳುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ