ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಇದೇ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಮುಂದೂಡಿದೆ.
ಈ ಬಗ್ಗೆ ಅಧಿಕೃತವಾಗಿ ತಿಳಿಸಿರುವ ಜಂಟಿ ಕ್ರಿಯಾ ಸಮಿತಿ, 09.12.2024 ರಂದು ಜಂಟಿ ಕ್ರಿಯಾ ಸಮಿತಿಯು ಸಾರಿಗೆ ನಿಗಮಗಳ ಕಾರ್ಮಿಕರು ಡಿ.31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ನೋಟಿಸ್ ಅನ್ನು ಮುಖ್ಯಮಂತ್ರಿಯವರಿಗೆ ನೀಡಿತ್ತು. ಈ ಮಧ್ಯೆ ಆಡಳಿತ ವರ್ಗ ಕಾರ್ಮಿಕ ಇಲಾಖೆಯ ಮೂಲಕ ಡಿ.27ರಂದು ಕಾರ್ಮಿಕ ಆಯುಕ್ತರೊಂದಿಗೆ ರಾಜೀಸಂಧಾನ ಸಭೆಯನ್ನು ಏರ್ಪಡಿಸಿತ್ತು.
ಮಾಜಿ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರು ನಿಧನರಾದ ಕಾರಣ ರಾಜ್ಯ ಸರ್ಕಾರವು ಅಂದು ಶೋಕಾಚರಣೆಯ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಿದ ಪರಿಣಾಮ ಸಂಧಾನ ಸಭೆ ಡಿ.30 ಕ್ಕೆ ಮುಂದೂಡಿಕೆಯಾಗಿದೆ.
ಈ ನಡುವೆ ಇಂದು (ಡಿ.29) ಸಂಜೆ ಮುಖ್ಯಮಂತ್ರಿಗಳ ಜತೆ ಸಾರಿಗೆ ಸಚಿವರು, ಸಾರಿಗೆ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು, ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ನಡೆಸಿದ ಸಭೆಯ ಫಲಶೃತಿಯಾಗಿ, ಸಾರಿಗೆ ಸಚಿವರು ಜಂಟಿ ಕ್ರಿಯಾ ಸಮಿತಿಗೆ ಉದ್ದೇಶಿತ ಸಾರಿಗೆ ಮುಷ್ಕರವನ್ನು ಹಿಂಪಡೆಯಬೇಕೆಂದು ಲಿಖಿತವಾಗಿ ಮನವಿ ಮಾಡಿದ್ದಾರೆ.
ಅಲ್ಲದೆ ಸಂಕ್ರಾಂತಿ ಹಬ್ಬದ ನಂತರ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿಗಳ ಜತೆ ಸಭೆ ಏರ್ಪಡಿಸುವುದಾಗಿ ಕೋರಿರುವ ಹಿನ್ನೆಲೆಯಲ್ಲಿ ಡಿ.31ರಿಂದ ಕರೆ ನೀಡಲಾಗಿದ್ದ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿಯು ಒಮ್ಮತದಿಂದ ಮುಂದೂಡಿದೆ.
ಹೀಗಾಗಿ ಜಂಟಿ ಕ್ರಿಯಾ ಸಮಿತಿಯ ಮುಷ್ಕರದ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕರಿಗೂ, ಜಂಟಿ ಕ್ರಿಯಾ ಸಮಿತಿಯ ಸಹಭಾಗಿ ಸಂಘಟನೆಗಳ ಎಲ್ಲ ಕಾರ್ಯಕರ್ತರಿಗೂ ನಾವು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಸಂದರ್ಭದಲ್ಲಿ ಸಾಧಿಸಲಾದ ಕಾರ್ಮಿಕರ ಐಕ್ಯತೆಯನ್ನು ಮುಂದೆಯೂ ಕಾಪಾಡಿಕೊಳ್ಳಬೇಕೆಂದು ಎಲ್ಲ ನೌಕರರಲ್ಲಿ ಮನವಿ ಮಾಡುತ್ತೇವೆ.
ನಮ್ಮೊಡನೆ, ನಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಒಪ್ಪಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೂ, ಸಾರಿಗೆ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳಿಗೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಸಂಘಟನೆಗಳಿಗೂ ವಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಷ್ಕರವನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಎಲ್ಲ ನೌಕರರೂ ಡಿ.31ರಿಂದ ಕೆಲಸಕ್ಕೆ ಹಾಜರಾಗಬೇಕೆಂದು ಎಲ್ಲ ನೌಕರರಿಗೂ ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ.
Related
You Might Also Like
ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಜ್ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರುವ ಜತೆಗೆ ದರ್ಶನವನ್ನೂ ಕೊಟ್ಟಿದ್ದಾರೆ....
ಹೊಸ ವರ್ಷದ ಸಂಭ್ರದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು?
ಹಾಸನ: ಹೊಸ ವರ್ಷದ ಸಂಭ್ರಮದಲ್ಲಿ ಸ್ನೇಹಿತರೊಟ್ಟಿಗೆ ಇದ್ದ ಪ್ರಿಯಕರನೊಂದಿಗೆ ಜಗಳ ಮಾಡಿದ ಪ್ರೇಯಸಿಯೊಬ್ಬಳು, ಏಕಾಏಕಿ ಚಾಕು ಇರಿದ ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ...
ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು
2025ರ ನೂತನ ವರ್ಷವನ್ನು ಅಧಿಕೃತವಾಗಿ ಹಲವು ದೇಶಗಳು ಈಗಾಗಲೇ ಸ್ವಾಗತಿಸಿವೆ. ಅದರ ಒಂದು ನೋಟ ಸಿಡ್ನಿಯು ಹೊಸ ವರ್ಷಕ್ಕೆ ಹಲೋ ಸ್ವಾಗತ ಎಂದು ಹೇಳಿ ಸಿಡ್ನಿ ಹಾರ್ಬರ್...
KSRTC: 4 ಸಾರಿಗೆ ನಿಗಮಗಳು 2,000 ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಸರ್ಕಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಆರ್ಥಿಕ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆ ಸಾರಿಗೆ ಸಂಸ್ಥೆಗಳಿಗೆ ಹಣಕಾಸಿನ ಸಂಸ್ಥೆಗಳಿಂದ ಸಾಲ (Loan) ಪಡೆಯುವುದಕ್ಕೆ ಇಂದು ಸರ್ಕಾರ...
ವರ್ಲ್ಡ್ ಆಫ್ ರೆಕಾರ್ಡ್ಸ್: ವಿಶ್ವ ದಾಖಲೆ ಸೇರಿದ 1.9 ವರ್ಷದ ಜನ್ವಿತಾ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಉದ್ದೇಬೋರನಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ದಿವ್ಯ ಮತ್ತು ಲೋಹಿತ್ ಅವರ 1 ವರ್ಷ 9ತಿಂಗಳ ಮಗು ಜನ್ವಿತಾಳನ್ನು ಅಂತಾ ರಾಷ್ಟ್ರೀಯ ವರ್ಲ್ಡ್ ಆಫ್...
BBMP ಪೂರ್ವ ವಲಯ: ಪಾದಚಾರಿ ಮಾರ್ಗ ಒತ್ತುವರಿ, ಪ್ಲೆಕ್ಸ್ ಬ್ಯಾನರ್ ತೆರವು
ಬೆಂಗಳೂರು: ಪೂರ್ವ ವಲಯದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್ ಬ್ಯಾನರ್ಗಳನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಪೂರ್ವ ವಲಯ ಆಯುಕ್ತೆ...
ದೆಹಲಿ ರೈತರ ಹೋರಾಟ ಬೆಂಬಲಿಸಿ ಮೈಸೂರಿನಲ್ಲಿ ಪೆಂಜಿನ ಮೆರವಣಿಗೆ ಪ್ರತಿಭಟನೆ
ಮೈಸೂರು: ದೆಹಲಿ ಗಡಿಯಲ್ಲಿ ದೇಶದ ರೈತರ ಒಳಿತಿಗಾಗಿ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೈವಾಲ ಅವರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಇಂದು ಸಂಜೆ ಪಂಜಿನ ಪ್ರತಿಭಟನಾ ಮೆರವಣಿಗೆ...
ಜ.1ರಿಂದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿ ಸ್ಥಗಿತ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿ.ಎಸ್.ಆರ್ ನಿಧಿಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಆಸ್ಪತ್ರೆ ಕಾಮಾಗಾರಿ ನಡೆಯುತ್ತಿರುವ ಕಾರಣ ಆಸ್ಪತ್ರೆಗೆ ಬರುವ ತುರ್ತು ಶಸ್ತ್ರ ಚಿಕಿತ್ಸಾ ಪ್ರಕರಣಗಳನ್ನು...
ಬಿ.ಎಡ್ ವಿದ್ಯಾರ್ಥಿಗಳ ವಿಶೇಷ ಪ್ರೋತ್ಸಾಹ ಧನದ ಅರ್ಜಿ ಸಲ್ಲಿಕ್ಕೆ ಅವಧಿ ವಿಸ್ತರಣೆ
ಬೆಂಗಳೂರು ಗ್ರಾಮಾಂತರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಬಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ....
ಜ.6ರಿಂದ KSRTC ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ: ನಿರ್ದೇಶಕರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ 2025ರ ಜನವರಿ 6ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆಯ ನಿರ್ದೇಶಕರು (ಸಿ&ಜಾ)...
ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ
ಬೆಂಗಳೂರು: ಕಾರ್ಮಿಕರು ಒಗ್ಗಟ್ಟಿಲ್ಲದೆ ಮುಷ್ಕರ ಆಗೋದಿಲ್ಲ ಎಂಬುದಕ್ಕೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಡಿ.31ರ ಮುಷ್ಕರ ಮುಂದೂಡಿರುವುದೇ ನಿದರ್ಶನವಾಗಿದೆ. ಇನ್ನು ಸಾರಿಗೆ ನೌಕರರ...