KSRTC ನೌಕರರ ವೇತನ ಹೆಚ್ಚಳ ಸಂಬಂಧ ಕರೆದಿದ್ದ ಸಭೆ ಅಪೂರ್ಣ- ತುರ್ತು ಕಾರ್ಯ ನಿಮಿತ್ತ ಅರ್ಧಕ್ಕೆ ಸಭೆ ಮೊಟಕುಗೊಳಿದ ಸಿಎಂ


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಇಂದು ಸಂಜೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಹೈ ವೋಲ್ಟೆಜ್ ಸಭೆ ಅಪೂರ್ಣಗೊಂಡಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಇಂದಿನ ಸಭೆ ಅಪೂರ್ಣವಾಗಿದೆ. ಹೀಗಾಗಿ ಮತ್ತೆ ಸಭೆ ಕರೆಯಲಾಗುವುದು ಎಂದಷ್ಟೆ ಮಾಹಿತಿ ನೀಡಿದರು.
ಇನ್ನು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟಿದ್ದು, ಒಂದು 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅದರ 38 ತಿಂಗಳ ಹಿಂಬಾಕಿ ಕೊಡಬೇಕು.
ಎರಡನೆಯದು 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಶೇ.25ರಷ್ಟು ವೇತನ ಪರಷ್ಕರಣೆ ಮಾಡಬೇಕು ಹಾಗೂ ಮೂರನೆಯದಾಗಿ ಏನು 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಸಮಯದಲ್ಲಿ ಪ್ರಮುಖವಾಗಿ ಬಿಎಂಟಿಸಿ ನೌಕರರ ವಿರುದ್ಧ ವಜಾ ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಿರುವುದನ್ನು ವಾಪಸ್ ಪಡೆಯಬೇಕು ಎಂಬ ಈ ಮೂರು ಬೇಡಿಕೆಗಳನ್ನು ಸಭೆಯಲ್ಲಿ ಇಟ್ಟಿದ್ದಾರೆ.
ಈ ವೇಳೆ ಸಿಎಂ ಜಂಟಿ ಕ್ರಿಯಾ ಸಮಿತಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಸಮಂಜಸವಾದ ಉತ್ತರ ನೀಡುವಲ್ಲಿ ಸಮಿತಿ ಪದಾಧಿಕಾರಿಗಳು ತಡಬಡಾಯಿಸಿದ್ದಾರೆ. ಈ ವೇಳೆ ನಾನು ಕೂಡ ವಕೀಲನೆ ಈ ಪ್ರಶ್ನೆಗೆ ನೀವು ಉತ್ತರ ಕೊಡಿ ಎಂದು ಕೇಳಿದ್ದಾರೆ. ಬಳಿಕ ಸರಿ ನಿಮ್ಮ ಬೇಡಿಕೆಗಳ ಬಗ್ಗೆ ಮತ್ತೊಂದು ಸಭೆ ಕರೆಯೋಣ ಬಿಡಿ ಎಂದು ಹೇಳಿ ಸಭೆ ಮೊಟಕುಗೊಳಿಸಿದ್ದಾರೆ.
ಇನ್ನು ನಮಗೆ ಈ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಸಂಬಂಧ ಬೀದಿಗಿಳಿದು ಹೋರಾಟ ಮಾಡುವುದು ಬೇಡ, ಹೀಗಾಗಿ ವೇತನ ಆಯೋಗ ಮಾದರಿಯಲ್ಲಿ ಸರ್ಕಾರಿ ನೌಕರರಂತೆ ನಮಗೂ ಹುದ್ದೆಗೆ ತಕ್ಕ ಸರಿ ಸಮಾನ ವೇತನ ಮಾಡಿಕೊಡಬೇಕು ಎಂದು ನೌಕರರ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಸಭೆಯಲ್ಲಿ ಒಕ್ಕೋರಲಿನಿಂದ ಸಿಎಂ ಅವರಿಗೆ ಮನವರಿಕೆ ಮಾಡಿಕೊಡಬೇಕು ಅಂದುಕೊಂಡಿದ್ದರು.

ಆದರೆ, ಮುಖ್ಯಮಂತ್ರಿಗಳಿಗೆ ಬೇರೆ ತುರ್ತು ಕೆಲಸವಿದ್ದರಿಂದ ನೌಕರರ ಒಕ್ಕೂಟದ ಪದಾಧಿಕಾರಿಗಳ ಸಭೆಯನ್ನು ಕರೆಯದೆ ಮುಂದಿನ ಸಭೆಯಲ್ಲಿ ಈ ಬಗ್ಗೆ ಮಾತನಾಡೋಣ ಎಂದು ತರಾತುರಿಯಲ್ಲಿ ಸಿಎಂ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೋಗಿದ್ದಾರೆ.
Related

ಇನ್ನೊಮ್ಮೆ ಮುಷ್ಕರದ ಎಚ್ಚರಿಕೆ ಕೊಡೋವರೆವಿಗೂ ಸಭೆ ಕರೆಯೋದಿಲ್ಲ
You are tempting the news readers