NEWSಬೆಂಗಳೂರು

ಸಾಮೂಹಿಕ ಸ್ವಚ್ಛತಾ ಅಭಿಯಾನದಿಂದ ಪಾಲಿಕೆ ಹೆಚ್ಚು ಸ್ವಚ್ಛ, ಸುಂದರ: ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆ.ಆರ್.ಪುರಂ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ತೀವ್ರ ಸಾಮೂಹಿಕ ಸ್ವಚ್ಛತಾ ಅಭಿಯಾನವನ್ನು ಬೆಂಗಳೂರು ಪೂರ್ವ  ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರ ನಿರ್ದೇಶನದಂತೆ ಹಾಗೂ ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ನೇತೃತ್ವದಲ್ಲಿ ಇಂದು ನಡೆಸಲಾಯಿತು.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಟಿ.ಸಿ.ಪಾಳ್ಯ ಮುಖ್ಯರಸ್ತೆ — ರಾಮಮೂರ್ತಿ ನಗರ ಸೇತುವೆ ರಿಂದ ಭಟ್ಟರಹಳ್ಳಿವರೆಗೆ ಸುಮಾರು 8 ಕಿ.ಮೀ ಉದ್ದದ ರಸ್ತೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್  ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀನಿಧಿ ಅವರ ಮೇಲ್ವಿಚಾರಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

ಮಹದೇವಪುರ ವಿಧಾನಸಭಾ ಕ್ಷೇತ್ರದ ರಾಜ್ಯ ಹೆದ್ದಾರಿ-35 — ವರ್ತೂರು ಕೋಡಿ ಜಂಕ್ಷನ್ ರಿಂದ ಕಾಡುಗೋಡಿ ಸೇತುವೆ ವರೆಗೆ ಸುಮಾರು 12 ಕಿಮೀ ಉದ್ದದ ರಸ್ತೆಯಲ್ಲಿ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ  ಜ್ಯೋತಿ ಚೌಳ್ಕರ್ ಅವರ ಮೇಲ್ವಿಚಾರಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

ಸ್ವಚ್ಛತಾ  ಕಾರ್ಯಗಳು: * 55 ಟನ್ ಸಿಲ್ಟ್, ಕಟ್ಟಡ ಭಗ್ನಾವಶೇಷ ಮತ್ತು ಕಸ ತೆರವು ಮಾಡಲಾಯಿತು.  * ಹಳೆಯ ಗೃಹೋಪಯೋಗಿ ವಸ್ತುಗಳ ತೆರವು ಮಾಡಲಾಯಿತು. * ಕಳೆ ಗಿಡ ತೆರವು ಮತ್ತು  ಅಪಾಯಕಾರಿ ಮರದ ರೆಂಬೆ ಕೊಂಬೆಗಳ ತೆರವಿಗೆ ಕ್ರಮವಹಿಸಲು ಸೂಚಿಸಲಾಯಿತು. * ಸುಮಾರು 3600 ರನ್ನಿಂಗ್  ಮೀಟರ್ ನೇತಾಡುವ ಕೇಬಲ್‌ಗಳು ತೆರವುಗೊಳಿಸಲಾಯಿತು.

•82 – ಜಾಹೀರಾತು ಬ್ಯಾನರ್ ಮತ್ತು ಫ್ಲೆಕ್ಸ್‌ಗಳ ತೆರವು ಮಾಡಲಾಯಿತು. * ರಸ್ತೆ ಬದಿಯ ಚರಂಡಿ ಹಾಗೂ ಮೀಡಿಯನ್‌ಗಳ ಸ್ವಚ್ಛತೆ ಕಾರ್ಯ ಮಾಡಲಾಯಿತು. * ಅನಧಿಕೃತ ಏಕ ಬಳಕೆ ಪ್ಲಾಸ್ಟಿಕ್ 100 ಕೆಜಿ ಜಪ್ತಿ ಮಾಡಿ 35,000 ರೂ ದಂಡ ವಿಧಿಸಲಾಯಿತು. * ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಮಾಡಲಾಯಿತು.

20 ಟ್ರ್ಯಾಕ್ಟರ್‌ಗಳು, 8 ಆಟೋಗಳು, 2 ಜೀಪ್ ಲ್ಯಾಡರ್‌ಗಳು, 1 ಮರ ಕತ್ತರಿಸುವ ವಾಹನ ಮತ್ತು ತಂಡ, 1 ಜೆಸಿಬಿ ವಾಹನ, 160 ಪೌರಕಾರ್ಮಿಕರು ಸಾಮೂಹಿಕ ಸ್ವಚ್ಛತಾ ಕಾರ್ಯದ ಅಭಿಯಾನದಲ್ಲಿ ಈ ಎಲ್ಲ ಯಂತ್ರೋಪಕರಣ ಮತ್ತು ಸಾಮಗ್ರಿಗಳನ್ನು ಬಳಸಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಅಪರ ಆಯುಕ್ತರು ನಗರವನ್ನು ಹೆಚ್ಚು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಡಲು ಬೆಂಗಳೂರು ಪೂರ್ವ ನಗರ ಪಾಲಿಕೆಯು ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ತೀವ್ರ ಸ್ವಚ್ಛತಾ ಅಭಿಯಾನಗಳು ನಗರ ಪಾಲಿಕೆಯ ವಿವಿಧ ಭಾಗಗಳಲ್ಲಿ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಜಂಟಿ ಆಯುಕ್ತರು (ಕೆ.ಆರ್.ಪುರಂ ವಲಯ-2), ಕಾರ್ಯಪಾಲಕ ಇಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು, ಸಹಾಯಕ ಜನರಲ್ ಮ್ಯಾನೇಜರ್‌ಗಳು (BSWML), ಮಾರ್ಷಲ್ ಮೇಲ್ವಿಚಾರಕರು, ವಾರ್ಡ್ ಮಾರ್ಶಲ್‌ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಪೌರಕಾರ್ಮಿಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!