ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ ಜನ್ಮ ದಿನದಂದು ಶ್ರೀಗಳು ಗೋವಿಂದನ ಪಾದದಲ್ಲಿ ಲೀನವಾಗಿದ್ದಾರೆ.
ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ ಎಂದು, ಇವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಬಸ್ ತಿಮ್ಮೇಗೌಡ ಮತ್ತು ಸಣ್ಣಮ್ಮನವರ ದ್ವಿತೀಯ ಪುತ್ರರಾಗಿ 10.02.1945ರಲ್ಲಿ ಜನಿಸಿದರು. ಶ್ರೀಗಳ ವಿದ್ಯಾಬ್ಯಾಸ ಬಿ.ಕಾಮ್., ಸಿ.ಎ.
1968 ರಲ್ಲಿ ಒಕ್ಕಲಿಗ ಸಮುದಾಯದ ಹಿರಿಯರಾದ ಕೆ.ಎಚ್.ರಾಮಯ್ಯನವರ ಪುತ್ರಿ ಶ್ರೀಮತಿ ಯಶೋಧರ ದಾಸಪ್ಪನವರ ಮೂಲಕ ಶ್ರೀ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ಸ್ವೀಕಾರ ದೀಕ್ಷೆ ಪಡೆದರು. ಆ ಬಳಿಕ ಇವರ ಹೆಸರು ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಎಂದು ನಾಮಕರಣವಾಯಿತು. ಬಳಿಕ ಬೆಂಗಳೂರಿನ ತಿರುಚ್ಚಿ ಕೈಲಾಸಾಶ್ರಮದಲ್ಲಿ ಸಂಸ್ಕೃತ ವೇದ ಅಧ್ಯಯನ ಮಾಡಿದ್ದರು.
1974 ರಲ್ಲಿ ಶ್ರೀ ಆದಿಚುಂಚನಗಿರಿ ಮಠಕ್ಕೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು, ಶ್ರೀ ಮಠದ ಹಿರಿಯ ಸ್ವಾಮಿಗಳು ಬರೆದ ಮರಣ ಶಾಸನದ ಅನ್ವಯ 71ನೇ ಪೀಠಾಧ್ಯಕ್ಷರಾಗಿ ಇವರನ್ನು ಆಯ್ಕೆ ಆಗುತ್ತಾರೆ. ಆದರೆ ಶ್ರೀ ಕುಮಾರ ಚಂದ್ರಶೇಖರ ನಾಥ ಸ್ವಾಮಿಗಳು ಅಲ್ಲಿ ಇರಲು ಇಚ್ಚಿಸದೆ, ಬೆಂಗಳೂರಿನ ಕೈಲಾಸ ಆಶ್ರಮದದ ಕಡೆ ಪಯಣ ಬೆಳೆಸುತ್ತಾರೆ.
ತದನಂತರ 1983 ರಲ್ಲಿ ಕೆಂಗೇರಿಯ ಬಳಿ ತಮ್ಮ ಪೂರ್ವಾಶ್ರಮದವರ ಸಹಾಯದಿಂದ ಹತ್ತು ಎಕರೆ ಜಮೀನು ಕೊಂಡುಕೊಂಡು ಅದರಲ್ಲಿ ಪುಟ್ಟ ಗುಡಿಸಲು ನಿರ್ಮಿಸಿ” ಶ್ರೀ ಗುರು ಜ್ಞಾನ ಕೇಂದ್ರ ಟ್ರಸ್ಟ್” ಶಾಲೆ ತೆರೆದು ಪ್ರತ್ಯೇಕವಾಗಿ ಶಾಲೆ, ಕಾಲೇಜು, ನಿರ್ಮಿಸುತ್ತಾರೆ.
ಕಾಲಾನಂತರ 2002ರಲ್ಲಿ ಹೊಸ ಟ್ರಸ್ಟಿಗಳ ಮೂಲಕ ಅನೇಕ ಒಕ್ಕಲಿಗ ಸಮುದಾಯದ ಹಿರಿಯರಿಂದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಎಂದು ನಾಮಕರಣವಾಗಿ, ಮಾಜಿ ಪ್ರಧಾನಿ ದೇವೇಗೌಡ ಅವರು ಸೇರಿದಂತೆ ಅನೇಕ ಒಕ್ಕಲಿಗ ಬಂಧುಗಳು ಶ್ರೀ ಮಠಕ್ಕೆ ಸಹಾಯ ಮಾಡುತ್ತಾರೆ. ಇಲ್ಲಿ ಪಂಚ ಗಣಪ ದೇವಸ್ಥಾನವಿದ್ದು ಇಷ್ಟಾರ್ಥ ಫಲಿಸುತ್ತದೆ ಎಂಬ ನಂಬಿಕೆ ಇದೆ.
ಇನ್ನು ಶ್ರೀ ಮಠದ ವಾರಸುದಾರರನ್ನಾಗಿ ಕಳೆದ ವರ್ಷವಷ್ಟೇ ಸನ್ಯಾಸ ದೀಕ್ಷಾ ಪಡೆದ ಡಾ.ನಿಶ್ಚಲಾನಂದನಾಥ ಅವರನ್ನು ಮಹಾ ಸ್ವಾಮೀಜಿಯನ್ನಾಗಿ ಆಯ್ಕೆ ಮಾಡಿದ್ದು, ಶ್ರೀ ಮಠವನ್ನು ಮುನ್ನಡೆಸಲು ಸಮರ್ಥರಾಗಿರುವ ಈ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಇಂದು ಶ್ರೀ ಕೃಷ್ಣನಲ್ಲಿ ಲೀನವಾಗಿರು ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಿದ್ದಾರೆ.
ಶ್ರೀ ಕೃಷ್ಣನಲ್ಲಿ ಲೀನ ರಾದ ಪೂಜ್ಯರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥನೆ, ಕೃಷ್ಣಾರ್ಪಣಮಸ್ತು. -ನಂಜೇಗೌಡ ನಂಜುಂಡ
Related

You Might Also Like
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...
ವಿಶ್ವವಿಖ್ಯಾತ ಮೈಸೂರು ದಸರಾ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ-ಕರ್ನಾಟಕದ ಹೆಮ್ಮೆ!
ಮೈಸೂರು ಮಲ್ಲಿಗೆ, ಅರಮನೆಗಳ ನಗರಿ, ಪಾರಂಪರಿಕ ಕಟ್ಟಡಗಳುಳ್ಳ ಸಾಂಸ್ಕೃತಿಕ ನಗರಿ ಎಂಬಿತ್ಯಾದಿಯಾಗಿ ವರ್ಣನೆಗೆ ನಿಲುಕಿ ವಿಶ್ವದಲ್ಲೇ ಚಿರ ಪರಿಚಿತವಾಗಿರುವ ಮೈಸೂರು ಈಗ ಪ್ರವಾಸಿಗರ ಕೇಂದ್ರ ಬಿಂದು. ರಾಜರ...
ಮೈಸೂರು: ದಸರಾ ಆನೆಗಳಿಗೆ ನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೆ ಬೆಳಗ್ಗೆ-ಸಂಜೆ ದೈನಂದಿನ ನಡಿಗೆ ತಾಲೀಮು
ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆ ತಾಲೀಮನ್ನು ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಈಗಾಗಲೇ ಆರಂಭಿಸಿದ್ದು, ಈ ತಾಲೀಮಿನಲ್ಲಿ ಗಜಪಡೆಯ ಮೊದಲ ಹಂತದ 9 ಆನೆಗಳು...
ಸಾರಿಗೆ ನೌಕರರ ಮುಷ್ಕರಕ್ಕೆ ಸಿಎಂ, ಸಾರಿಗೆ ಸಚಿವರು, ಎಂಡಿಗಳೇ ನೇರ ಕಾರಣ: ಲಿಖಿತ ಸಮಜಾಯಿಷಿ ಕೊಡುತ್ತಿರುವ ನೌಕರರು
ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡಲು ಮೂಲ ಕಾರಣ ನಾಲ್ಕೂ ಸಂಸ್ಥೆಯ ಆಡಳಿತ ವರ್ಗದ ಮುಖ್ಯಸ್ಥರೇ ಎಂದು ಆಪಾದನಾ ಪತ್ರ ನೀಡಿರುವ ಶಿಸ್ತುಪಾಲನಾಧಿಕಾರಿಯೂ...