CRIMENEWSದೇಶ-ವಿದೇಶ

ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸ್ಫೋಟಕ ತಿರುವು- ಸಂತ್ರಸ್ತೆ ಜತೆಗಿದ್ದವನೂ ಕಾಮುಕ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಬಳಿ ಒಡಿಶಾದ ಜಲೇಶ್ವರ ಮೂಲದ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ.

ಸಂತ್ರಸ್ತೆ ನ್ಯಾಯಾಧೀಶರ ( Magistrate) ಮುಂದೆ ನೀಡಿದ ಹೇಳಿಕೆಯನ್ನಧಾರಿಸಿ ಆಕೆ ಜೊತೆಗೆ ಊಟಕ್ಕೆ ಬಂದಿದ್ದ ಸ್ನೇಹಿತನನ್ನ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ತಲುಪಿದೆ.

ನನ್ನ ಮೇಲೆ ಬಲವಂತವಾಗಿ ಹಲ್ಲೆಗೆ ಯತ್ನ: ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಹೇಳಿಕೆಯಲ್ಲಿ, ಜೊತೆಗಿದ್ದ ಸಹಪಾಠಿ ತನ್ನ ಮೇಲೆ ಬಲವಂತವಾಗಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಹೇಳಿಕೆಯನ್ನಾಧರಿಸಿ ಊಟದ ಸಮಯದಲ್ಲಿ ಜೊತೆಗಿದ್ದ ಸಹಪಾಠಿಯನ್ನು 6ನೇ ಆರೋಪಿಯಾಗಿ ಬಂಧಿಸಲಾಗಿದೆ.

ಕಳೆದ ಶುಕ್ರವಾರ ಜಲೇಶ್ವರದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆ ತನ್ನ ಸ್ನೇಹಿತನೊಂದಿಗೆ ತೆರಳಿದ್ದಾಗ ಕೆಲವರು ಅವರನ್ನು ತಡೆದು 1 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು.

ಆ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಇನ್ನು ಘಟನೆ ಬಳಿಕ ಆಕೆಯ ಸ್ನೇಹಿತ ಕೂಡ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು.

ಯುವತಿಗೆ ಸುಳ್ಳು ಹೇಳಿ ಆಕೆಯನ್ನು ದಾರಿ ತಪ್ಪಿಸಿ ನಿರ್ಜನ ಸ್ಥಳಕ್ಕೆ 6ನೇ ಆರೋಪಿಯೇ ಕರೆದೊಯ್ದಿದ್ದಾನೆ. ಅಲ್ಲದೇ ಆಕೆಯ ಫೋನ್ ಕಸಿದುಕೊಂಡು 5,000 ರೂ. ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

Advertisement
Megha
the authorMegha

Leave a Reply

error: Content is protected !!